spot_img

ಪರ್ಕಳದಲ್ಲಿ ಮತ್ತೆ ಚಿರತೆ ಆತಂಕ: ಹಗಲೇ ಕೋಳಿ, ನಾಯಿ ಎಳೆದೊಯ್ದ ಘಟನೆ!

Date:

spot_img

ಉಡುಪಿ : ಉಡುಪಿ ಜಿಲ್ಲೆಯ ಪರ್ಕಳ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆ ಪತ್ತೆಯಾಗಿರುವ ಘಟನೆ ಮತ್ತೆ ವರದಿಯಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಮಣಿಪಾಲ, ಪರ್ಕಳ, ಪೆರಂಪಳ್ಳಿ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿತ್ತು. ಈಗ ಪುನಃ ಚಿರತೆ ಕಾಣಿಸಿಕೊಂಡಿದೆ ಎಂಬ ಮಾಹಿತಿ ಶುಕ್ರವಾರ ಸ್ಥಳೀಯರಿಂದ ಬಂದಿದ್ದು, ಅದೇ ಭೀತಿ ಮತ್ತೆ ಮೂಡಿದಂತಾಗಿದೆ.

ಪರ್ಕಳದ ಬ್ರಹ್ಮ ಬೈದರ್ಕಳ ಗರೋಡಿ – ಹೆರ್ಗ ಸಂಪರ್ಕ ರಸ್ತೆಯಲ್ಲಿನ ನಿವಾಸಿ ತಿಳಿಸಿದಂತೆ, ಚಿರತೆಯೊಂದು ಹಗಲು ಹೊತ್ತಿನಲ್ಲಿ ಮನೆಯ ಕೋಳಿ ಮತ್ತು ನಾಯಿಯನ್ನು ಎಳೆದೊಯ್ಯುವ ದೃಶ್ಯ ಕಂಡುಬಂದಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಕೂಡ ದೂರು ನೀಡಲಾಗಿದ್ದು, ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿರತೆ ರಸ್ತೆಯಲ್ಲಿ ದಾಟುತ್ತಿರುವ ದೃಶ್ಯವೊಂದು ಕಣ್ಣಿಗೆ ಬಿದ್ದಿದೆಯಾದರೂ, ವಸತಿ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಯಾವುದೇ ದೃಶ್ಯ ದಾಖಲಾಗಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರಲ್ಲಿ ಮತ್ತೆ ಆತಂಕ ಹುಟ್ಟಿಸಿರುವ ಈ ಪ್ರಕರಣದ ಹಿನ್ನೆಲೆಯಿಂದ, ಅರಣ್ಯ ಇಲಾಖೆಯು ಹೆಚ್ಚಿನ ನಿಗಾವಹಿಸಲು ಮುಂದಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಉಡುಪಿ ಜಿಲ್ಲೆಗೆ ವರುಣನ ಆರ್ಭಟ: ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಮತ್ತು ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ, ಉಡುಪಿ ಜಿಲ್ಲಾಡಳಿತವು ಮಹತ್ವದ ನಿರ್ಧಾರ ಕೈಗೊಂಡಿದೆ.

ಸಿಂಗಾಪುರಕ್ಕೆ ಚೀನಾ ಮೂಲದ ಸೈಬರ್ ಭೀತಿ: ರಾಷ್ಟ್ರೀಯ ಮಹತ್ವದ ಮೂಲಸೌಕರ್ಯಗಳ ಮೇಲೆ ಗುರಿ

ಸಿಂಗಾಪುರ ಪ್ರಸ್ತುತ ಅತಿ ಸಂಕೀರ್ಣವಾದ ಸೈಬರ್ ಆಕ್ರಮಣವನ್ನು ಎದುರಿಸುತ್ತಿದೆ, ಇದು ದೇಶದ ಭದ್ರತೆ ಮತ್ತು ಪ್ರಮುಖ ಸೇವೆಗಳ ವ್ಯವಸ್ಥೆಗಳಿಗೆ ತೀವ್ರ ಅಪಾಯವನ್ನುಂಟುಮಾಡಿದೆ

ಕಾರ್ಕಳ ಕಾಂಗ್ರೆಸ್ ನಿಂದ ಕೀಳು ಮಟ್ಟದ ರಾಜಕೀಯ – ದಿನೇಶ್ ಪೂಜಾರಿ ಬೋಳ ಗ್ರಾಮ ಪಂಚಾಯತ್ ಅಧ್ಯಕ್ಷರು

ಗ್ರಾಮ ಪಂಚಾಯತ್ ಸದಸ್ಯರ ವಿರುದ್ಧ ಕಾರ್ಕಳ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಬೋಳ ಗ್ರಾಮ ಪಂಚಾಯತ್ ಮುಂಬಾಗ ಮಾಡಿರುವ ಪ್ರತಿಭಟನೆಯು ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಸರಣಿ ವೈಫಲ್ಯವನ್ನು ಮರೆಮಾಚಲು ಮಾಡಿರುವ ನಾಟಕವಾಗಿದೆ.

“ನೀವೇ ದುಡಿಯಬಹುದಲ್ಲ?”: ₹12 ಕೋಟಿ ಜೀವನಾಂಶ ಕೋರಿದ್ದ ಮಹಿಳೆಗೆ ಸುಪ್ರೀಂ ತರಾಟೆ!

ವೈವಾಹಿಕ ವಿವಾದ ಪ್ರಕರಣವೊಂದರಲ್ಲಿ ₹12 ಕೋಟಿ ಜೀವನಾಂಶ, ಬಿಎಂಡಬ್ಲ್ಯೂ ಕಾರು ಮತ್ತು ಮುಂಬೈನಲ್ಲಿ ಮನೆಯನ್ನು ಪರಿಹಾರವಾಗಿ ನೀಡಬೇಕೆಂದು ಕೋರಿದ್ದ ಮಹಿಳೆಯೊಬ್ಬರಿಗೆ, "ತಾವೇ ದುಡಿಯಬಹುದಲ್ಲವೇ?" ಎಂದು ಸುಪ್ರೀಂ ಕೋರ್ಟ್ ತೀವ್ರವಾಗಿ ಪ್ರಶ್ನಿಸಿದೆ.