spot_img

ಜೆಸಿಐ ಕಾರ್ಕಳ ರೂರಲ್ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಪೋಷಕರಿಗೆ ಕಾನೂನು ಅರಿವು ಕಾರ್ಯಕ್ರಮ

Date:

spot_img
spot_img

ಕಾರ್ಕಳ : ಜೆಸಿಐ ಕಾರ್ಕಳ ರೂರಲ್ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಸುಂದರ ಪುರಾಣಿಕ ಸಂಯುಕ್ತ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಪೋಷಕರಿಗೆ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಕಾರ್ಕಳ ನಗರ ಠಾಣೆಯ ಪಿಎಸ್ಐ ಶಿವಕುಮಾರ್ ಮಾತನಾಡುತ್ತಾ ಇತ್ತೀಚೆಗೆ ಸಮಾಜದಲ್ಲಿ ನಡೆಯುತ್ತಿರುವ ಪೋಕ್ಸೋ, ಸೈಬರ್ ಕ್ರೈಂ, ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಹಾಗೂ ಅನಾಮದೇಯ ಕರೆಗಳಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ವಿವರಿಸುತ್ತಾ ತಾವೆಲ್ಲರೂ ಪ್ರಜ್ಞಾವಂತರಾಗಿರಬೇಕು ಎಂದರು . ಅಲ್ಲದೆ ರಸ್ತೆ ಸುರಕ್ಷತಾ ಕ್ರಮಗಳನ್ನು ಕೂಡ ಪಾಲಿಸುವಂತೆ ಎಚ್ಚರಿಕೆ ನೀಡಿದರು.

ಜೆಸಿಐ ಕಾರ್ಕಳ ರೂರಲ್ ಅಧ್ಯಕ್ಷರಾದ ಜೆಸಿ ಅರುಣ್ ಪೂಜಾರಿ ಮಾಂಜರವರು ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಮುಂತಾದ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇಂತಹ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪೊಲೀಸ್ ಇಲಾಖೆ ನಮ್ಮ ಜೆ ಸಿ ಸಂಸ್ಥೆಗೆ ಸಹಕಾರ ನೀಡಿದ್ದಕ್ಕಾಗಿ ಅಭಿನಂದನೆಯನ್ನು ಸಲ್ಲಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಆನಂದ್ರಾಯ ನಾಯಕ್, ಬೀಟ್ ಪೊಲೀಸ್ ವಿನೋದ್,ಜೆಸಿಐ ಕಾರ್ಕಳ ರೂರಲ್ ನ ಪೂರ್ವಾಧ್ಯಕ್ಷರು ಹಾಗೂ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಜೆಸಿ ವೀಣಾ ರಾಜೇಶ್ ಭಂಡಾರಿ, ಜೆಸಿಐ ಪೂರ್ವ ಅಧ್ಯಕ್ಷರಾದ ಜೆಸಿ ಸತೀಶ್ ಪೂಜಾರಿ, ಶಾಲಾ ಮುಖ್ಯೋಪಾಧ್ಯಾಯರಾದ ದಿವಾಕರ್ ಪಟ್ಲ, ಎಸ್ ಡಿ ಎಂ ಸಿ ಸದಸ್ಯರು, ಶಿಕ್ಷಕರು, ಜೆಸಿ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಸರ್ಕಾರಿ ಶಾಲೆ ಉಳಿಯಲಿ ಬೆಳೆಯಲಿ ಗುಣಮಟ್ಟದ ಶಿಕ್ಷಣ ಸಿಗುವಂತಾಗಲಿ

ಅತ್ಯುತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಪೆರ್ವಾಜೆ ಸರ್ಕಾರಿ ಪ್ರೌಢಶಾಲೆಗೆ ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ SDMC ಪ್ರಶಸ್ತಿ ಲಭಿಸಿತು.

ದೀಪಾವಳಿ ಪ್ರಯುಕ್ತ: ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘದಿಂದ ಕೊಂಡಾಡಿ ಭಜನೆಕಟ್ಟೆಯಲ್ಲಿ ಗೂಡುದೀಪ ಸ್ಪರ್ಧೆ

ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ (ರಿ) ಕೊಂಡಾಡಿ ಭಜನೆಕಟ್ಟೆ, ಹಿರಿಯಡಕ ಇವರ ವತಿಯಿಂದ ಗೂಡುದೀಪ ಸ್ಪರ್ಧೆಯು ನಡೆಯಲಿದೆ.

ನೋಡೋಕಷ್ಟೆ ಮುಳ್ಳು; ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ಪಾಪಸ್​ ಕಳ್ಳಿ!

ಪಾಪಸ್ ಕಳ್ಳಿ (Cereus Night Bloom Cactus) ನೋಡುವುದಕ್ಕೆ ಮುಳ್ಳುಗಳಿಂದ ಕೂಡಿದ್ದರೂ, ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ.

ಬೆಂಗಳೂರಿನ ಶ್ರೀರಾಂಪುರದಲ್ಲಿ ಹಾಡಹಗಲೇ ವಿದ್ಯಾರ್ಥಿನಿ ಬರ್ಬರ ಹತ್ಯೆ

ರಾಜಧಾನಿಯ ಶ್ರೀರಾಂಪುರ ಪ್ರದೇಶದಲ್ಲಿ ಹಾಡಹಗಲೇ ವಿದ್ಯಾರ್ಥಿನಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.