
ಕಾರ್ಕಳ: ಕಾರ್ಕಳ ಪುರಸಭೆಯ ನೂತನ ಮುಖ್ಯಾಧಿಕಾರಿಯಾಗಿ ಲೀನಾ ಬ್ರಿಟ್ಟೋ ಅವರು ಮಾರ್ಚ್ 13ರಂದು ಅಧಿಕಾರ ಸ್ವೀಕರಿಸಿದರು. ಮೂಲತಃ ವಿರಾಜಪೇಟೆಯವರಾಗಿರುವ ಲೀನಾ ಬ್ರಿಟ್ಟೋ ಈ ಹಿಂದೆ ಬಂಟ್ವಾಳ ಪುರಸಭೆಯಲ್ಲಿ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಪುತ್ತೂರು, ಸುಳ್ಯ ಮತ್ತು ಮೂಡಿಗೆರೆ ಪುರಸಭೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿರುವ ಲೀನಾ ಬ್ರಿಟ್ಟೋ ಅವರು ಬಂಟ್ವಾಳ ಪುರಸಭೆಯಲ್ಲಿ ತ್ಯಾಜ್ಯ ವಿಲೇವಾರಿಗೆ ಶಾಶ್ವತ ಪರಿಹಾರ ಒದಗಿಸಿ ಯಶಸ್ವಿ ಕಾರ್ಯವೈಖರಿ ಮೆರೆದಿದ್ದರು.
ಇದೇ ವೇಳೆ, ಕಾರ್ಕಳ ಪುರಸಭೆ ಮುಖ್ಯಾಧಿಕಾರಿಯಾಗಿದ್ದ ರೂಪಾ ಟಿ. ಶೆಟ್ಟಿ ಅವರನ್ನು ಮೂಡುಬಿದಿರೆ ಸಮುದಾಯ ಸಂಘಟನಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ರೂಪಾ ಶೆಟ್ಟಿ ಅವರು 2021ರ ಮೇ ತಿಂಗಳಿನಲ್ಲಿ ಕಾರ್ಕಳ ಪುರಸಭೆಯ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು.