spot_img

ವಕೀಲನಿಗೆ ಹನಿಟ್ರ್ಯಾಪ್ ಯತ್ನ: ಹಣ ನೀಡದಿದ್ದರೆ ಅತ್ಯಾಚಾರ ಆರೋಪದ ಬೆದರಿಕೆ!

Date:

ಕೋಟ, ಏಪ್ರಿಲ್ 9: ಯುವ ವಕೀಲನೊಬ್ಬನಿಗೆ ಹನಿಟ್ರ್ಯಾಪ್ ಮಾಡಿ ಹಣ ಸುಲಿಗೆ ಯತ್ನಿಸಿದ ಘಟನೆ ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಹಿರಿಯ ವಕೀಲರ ಕಚೇರಿಯಲ್ಲಿ ನಡೆದ ಈ ಬೆಳವಣಿಗೆಯು ವಕೀಲ ವೃತ್ತದಲ್ಲಿ ಆತಂಕದ ಪರಿಸ್ಥಿತಿಯನ್ನು ಸೃಷ್ಟಿಸಿದೆ.

ಕುಂದಾಪುರದ ನಿವಾಸಿ ನೀಲ್ ಪಿರೇರಾ, ಕೋಟದ ಹಿರಿಯ ವಕೀಲ ಶ್ಯಾಮಸುಂದರ ನಾಯರಿ ಅವರ ಕಚೇರಿಯಲ್ಲಿ ಸಹಾಯಕ ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ. 2023ರಲ್ಲಿ ದೇವೇಂದ್ರ ಸುವರ್ಣ ಎಂಬವರು ‘ಮೂಕಾಂಬಿಕಾ’ ಎಂಬ ಹೆಸರಿನ ಮಹಿಳೆಯನ್ನು ಕಚೇರಿಗೆ ಕರೆತಂದು ಒಂದು ಕೇಸಿನ ಕುರಿತು ಚರ್ಚಿಸಿದ್ದರು. ಈ ವೇಳೆ, ಆಕೆ ಪಿರೇರಾ ಅವರ ಮೊಬೈಲ್ ನಂಬರ್ ಪಡೆದುಕೊಂಡಿದ್ದಳು.

ಕೆಲವು ದಿನಗಳ ಬಳಿಕ, ದೇವೇಂದ್ರ ಮತ್ತೆ ಮೂಕಾಂಬಿಕಾಳೊಂದಿಗೆ ಕಚೇರಿಗೆ ಬಂದು ₹50,000 ನೀಡಬೇಕೆಂದು ಒತ್ತಡ ಹಾಕಿದ್ದಾರೆ. ಹಣ ನೀಡದಿದ್ದರೆ, “ನೀವು ಲೈಂಗಿಕ ಕಿರುಕುಳ ನೀಡಿದ್ದೀರಿ , ಅತ್ಯಾಚಾರಕ್ಕೆ ಯತ್ನಿಸಿದ್ದೀರಿ ಎಂಬ ಸುಳ್ಳು ಆರೋಪ ದಾಖಲಿಸುತ್ತೇವೆ” ಎಂದು ಬೆದರಿಕೆಯೊಡ್ಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ನಕಲಿ ದೃಶ್ಯಗಳನ್ನೂ ತಯಾರಿಸುವ ಬೆದರಿಕೆ ನೀಡಿದ್ದಾರೆ.

ಇದೇ ರೀತಿ ಪದೇಪದೇ ಬೆದರಿಕೆ ನೀಡಿ, ಗೂಂಡಾಗಳ ಮೂಲಕ ಜೀವದ ಮೇಲೆ ಭಯ ಹುಟ್ಟಿಸುವ ರೀತಿಯಲ್ಲಿ ಪಿರೇರಾ ಅವರನ್ನು ಶೋಷಿಸಿದ್ದಾರೆ. ಈ ಮೂಲಕ ₹18,000 ವಸೂಲಿ ಮಾಡಿಕೊಂಡಿರುವ ಬಗ್ಗೆ ಪಿರೇರಾ ಅವರು ಹನಿ ಟ್ರ್ಯಾಪ್ ಗೆ ಯತ್ನ ಮತ್ತು ಸುಲಿಗೆ ಪ್ರಕರಣ ಎಂದು ಕೋಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದ್ವೇಷ ಪ್ರಚೋದಕ ಪೋಸ್ಟ್ ಪ್ರಕರಣ: ಮಂಗಳೂರಿನಲ್ಲಿ ‘beary_royal_nawab’ ಇನ್‌ಸ್ಟಾಗ್ರಾಂ ಪುಟ ನಿಷ್ಕ್ರಿಯ

ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಕಾರಿ ವಿಷಯ ಹರಡಿದ ಆರೋಪದ ಮೇಲೆ ‘beary_royal_nawab’ ಎಂಬ ಇನ್‌ಸ್ಟಾಗ್ರಾಂ ಪುಟವನ್ನು ನಿಷ್ಕ್ರಿಯಗೊಳಿಸಲಾಗಿದೆ.

ಗಡಿ ಉದ್ವಿಗ್ನತೆ ನಡುವೆ ಬ್ಯಾಂಕಿಂಗ್ ಸೇವೆ ನಿರಂತರವಾಗಿರಲಿ: ಬ್ಯಾಂಕುಗಳಿಗೆ ನಿರ್ಮಲಾ ಸೀತಾರಾಮನ್ ನಿರ್ದೇಶನ

ಗಡಿ ಪ್ರದೇಶಗಳಲ್ಲಿ ಉದ್ವಿಗ್ನತೆಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ಎಚ್ಚರಿಕೆಯ ಸೂಚನೆ ನೀಡಲಾಗಿದೆ.

ಮದುವೆಯ ದಿನ ಫೋಟೋಗ್ರಾಫರ್‌ಗೆ ಊಟವಿಲ್ಲ! ಕೋಪದಲ್ಲಿ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ ಘಟನೆ ವೈರಲ್

ಮದುವೆಯ ದಿನ ಎಲ್ಲರೂ ಖುಷಿಯಾಗಿರುವ ಸಮಯದಲ್ಲಿ ಫೋಟೋಗ್ರಾಫರ್‌ ಒಬ್ಬರ ವಿರುದ್ಧ ನಡೆಸಲಾದ ನಿರ್ಲಕ್ಷ್ಯದಿಂದಾಗಿ ಹುಟ್ಟಿಕೊಂಡ ಘಟನೆಯೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸಾಸ್ತಾನ ಟೋಲ್ ಬಳಿ ನಿಲ್ಲಿಸಿದ್ದ ಲಾರಿಯೊಳಗೆ ಮೃತದೇಹ ಪತ್ತೆ!

ಉಡುಪಿ ಜಿಲ್ಲೆ ಸಾಸ್ತಾನದ ಗುಂಡ್ಮಿ ಟೋಲ್ ಗೇಟ್ ಬಳಿ ನಿಲ್ಲಿಸಿದ್ದ ಲಾರಿಯೊಳಗೆ ಚಾಲಕ ಮೃತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.