
ಉಡುಪಿ ನಗರ ಸಭೆಯ ವತಿಯಿಂದ ಕುಂಜಿಬೆಟ್ಟು ವಾರ್ಡಿನ ನಾಗರಿಕರ ಅಪೇಕ್ಷೆಯಂತೆ ಸುಧೀಂದ್ರ ತೀರ್ಥ ಮಂಟಪ ರಸ್ತೆಯ ತಿರುವಿನಲ್ಲಿ ಸುಮಾರು ರೂ.1.50 ಲಕ್ಷ ವೆಚ್ಚದಲ್ಲಿ ಅಳವಡಿಸಿದ ಮಿನಿ ಮಾಸ್ಟ್ ದೀಪವನ್ನು ಕಡಿಯಾಳಿ ಶ್ರೀ ಮಹಿಷ ಮರ್ದಿನೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಹಾಗೂ ಉದ್ಯಮಿ ರವಿರಾಜ್ ಆಚಾರ್ಯ ಅವರು ಕುಂಜಿಬೆಟ್ಟು ವಾರ್ಡ್ ನಗರಸಭಾ ಸದಸ್ಯ ಗಿರೀಶ್ ಎಮ್. ಅಂಚನ್ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.
ನಗರಸಭಾ ಸದಸ್ಯ ಗಿರೀಶ್ ಎಮ್. ಅಂಚನ್ ಮಾತನಾಡಿ, ಈ ಪ್ರದೇಶದಲ್ಲಿ ನಿರಂತರ ನಡೆಯುತ್ತಿರುವ ಅಪಘಾತಗಳನ್ನು ಗಮನಿಸಿ ಸಾರ್ವಜನಿಕರ ಅಪೇಕ್ಷೆಯಂತೆ ಮಿನಿ ಮಾಸ್ಟ್ ದೀಪವನ್ನು ತ್ವರಿತ ಗತಿಯಲ್ಲಿ ಅಳವಡಿಸಲು ಸಂಪೂರ್ಣ ಸಹಕಾರ ನೀಡಿರುವ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ಪಾಲ್ ಎ. ಸುವರ್ಣ, ಉಡುಪಿ ನಗರ ಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಹಾಗೂ ಸಹಕರಿಸಿದ ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕುಂಜಿಬೆಟ್ಟು ವಾರ್ಡಿನ ಹಿರಿಯ ನಾಗರಿಕರಾದ ಮಾವುಜಿ ಪಟೇಲ್, ಜಯಂತಿ ಲಾಲ್ ಪಟೇಲ್, ಈಶ್ವರ್ ಲಾಲ್ ಪಟೇಲ್, ಸೀತಾರಾಮ ತಂತ್ರಿ, ವಿಠ್ಠಲ್ ಆಚಾರ್ಯ, ಲಕ್ಷ್ಮೀನಾರಾಯಣ ಹೆಗ್ಡೆ ಹಾಗೂ ಮಿನಿ ಮಾಸ್ಟ್ ದೀಪ ಅಳವಡಿಕೆಗೆ ಮರದ ಗೆಲ್ಲುಗಳನ್ನು ತೆರವುಗೊಳಿಸಿ ಸರಾಗವಾಗಿ ಬೆಳಕು ಪಸರಿಸಲು ಅನುವುಮಾಡಿಕೊಟ್ಟ ಎ.ಜಿ. ಭಟ್, ಕುಂಜಿಬೆಟ್ಟು ವಾರ್ಡ್ ಬೂತ್ ಸಂಖ್ಯೆ 145ರ ಬೂತ್ ಅಧ್ಯಕ್ಷ ಶಿವರಾಜ್ ಅಂಚನ್, ಬಿಜೆಪಿ ಉಡುಪಿ ನಗರ ಯುವ ಮೋರ್ಚಾ ಅಧ್ಯಕ್ಷ ಶ್ರೀವತ್ಸ, ಬೂತ್ ಸಮಿತಿ ಸದಸ್ಯರಾದ ಸತೀಶ್ ಭಾಗವತ್, ಚಂದ್ರಶೇಖರ ಪ್ರಭು, ಸಂತೋಷ್ ಪಟೇಲ್ ಉಪಸ್ಥಿತರಿದ್ದರು.