spot_img

ವಿಠಲವಾಡಿ ನಿವಾಸಿ 33 ವರ್ಷದ ಹೀನಾ ಕೌಷರ್ ನಾಪತ್ತೆ

Date:

spot_img

ಕುಂದಾಪುರ: ವಿಠಲವಾಡಿ ನಿವಾಸಿ 33 ವರ್ಷದ ಹೀನಾ ಕೌಷರ್ ಎಂಬ ವಿವಾಹಿತ ಮಹಿಳೆ ನಾಪತ್ತೆಯಾಗಿದ್ದು, ಅವರ ಸ್ಕೂಟರ್ ಮತ್ತು ಚಪ್ಪಲಿ ಚರ್ಚ್ ರೋಡ್ ನಿಂದ ಕೋಡಿಗೆ ಹೋಗುವ ಸೇತುವೆ ಬಳಿ ಪತ್ತೆಯಾಗಿದೆ.

ಹೀನಾ ಕೌಷರ್ ಪತಿ ವಿದೇಶದಲ್ಲಿದ್ದು, ಇಬ್ಬರು ಮಕ್ಕಳು ಮತ್ತು ತಾಯಿಯೊಂದಿಗೆ ವಿಠಲವಾಡಿಯಲ್ಲಿ ವಾಸಿಸುತ್ತಿದ್ದರು. ಸೋಮವಾರ ಬೆಳಗ್ಗೆ 4:00 ಗಂಟೆ ಸುಮಾರಿಗೆ ಅವರ ಸ್ಕೂಟರ್ ಮತ್ತು ಚಪ್ಪಲಿ ಸೇತುವೆ ಬಳಿ ಕಂಡುಬಂದ ನಂತರ, ಅವರನ್ನು ಹುಡುಕಲು ಪೊಲೀಸರು, ಅಗ್ನಿಶಾಮಕ ದಳ ಮತ್ತು ಸ್ಥಳೀಯರು ನದಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಶೋಧನೆ ನಡೆಸಿದರು. ಆದರೆ, ಇದುವರೆಗೂ ಅವರ ಪತ್ತೆ ಆಗಿಲ್ಲ.

ಹೀನಾ ಕೌಷರ್ ರವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದರಿಂದ, ಇದು ಆತ್ಮಹತ್ಯೆಯ ಪ್ರಯತ್ನವೋ ಅಥವಾ ಇತರ ಕಾರಣಗಳಿಂದಾದ ನಾಪತ್ತೆಯೋ ಎಂದು ಅನುಮಾನ ವ್ಯಕ್ತವಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯನ್ನು ಹುಡುಕಲು ತುರ್ತು ಶೋಧನೆ ನಡೆಸಲಾಗುತ್ತಿದೆ.

ಸ್ಥಳೀಯರಿಗೆ ಯಾವುದೇ ಸುಳಿವು ದೊರೆತರೆ ಪೊಲೀಸರಿಗೆ ಮಾಹಿತಿ ನೀಡುವಂತೆ ವಿನಂತಿಸಲಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಾರ್ಕಳದ ಗೋವಿಂದೂರಿನಲ್ಲಿ ಭೀಕರ ಗಾಳಿ ಮಳೆಗೆ ಅಯ್ಯಪ್ಪ ಶಿಬಿರದ ಮೇಲ್ಚಾವಣಿ ಕುಸಿತ

ಇಂದು ಮದ್ಯಾಹ್ನ 3:00 ಸುಮಾರಿಗೆ ಬಿರುಸಿನ ಗಾಳಿ ಮಳೆಗೆ ಕಾರ್ಕಳದ ಗೋವಿಂದೂರಿನ ಅಯ್ಯಪ್ಪ ಶಿಬಿರದ ಮೇಲ್ಚಾವಣಿ ಗಾಳಿಯ ರಭಸಕ್ಕೆ ಹಾರಿ ನುಚ್ಚುನೂರಾಗಿದೆ.

40 ದಾಟಿದವರ ಸಂಧು ನೋವಿಗೆ ಆಯುರ್ವೇದದಲ್ಲಿದೆ ಪರಿಣಾಮಕಾರಿ ಪರಿಹಾರ!

ವಯಸ್ಸು 40 ದಾಟಿದಂತೆ ಕಾಣಿಸಿಕೊಳ್ಳುವ ಸಂಧು ನೋವು ಅದೆಷ್ಟೋ ಜನರನ್ನು ಕಾಡುತ್ತದೆ.

ವಾಟ್ಸಾಪ್‌ನಿಂದ ಹೊಸ AI ವೈಶಿಷ್ಟ್ಯ ‘ಕ್ವಿಕ್ ರಿಕ್ಯಾಪ್’: ಇನ್ನು ಮಿಸ್ಡ್ ಮೆಸೇಜ್ ಚಿಂತೆ ಇಲ್ಲ!

ಮೆಟಾ ಕಂಪನಿಯು ಅಭಿವೃದ್ಧಿಪಡಿಸಿರುವ ವಾಟ್ಸಾಪ್ ಕ್ವಿಕ್ ರಿಕ್ಯಾಪ್ AI (WhatsApp Quick Recap AI) ಎಂಬ ನೂತನ ಕೃತಕ ಬುದ್ಧಿಮತ್ತೆ ಆಧಾರಿತ ವೈಶಿಷ್ಟ್ಯವು, ಬಳಕೆದಾರರು ಗ್ರೂಪ್‌ಗಳು ಅಥವಾ ವೈಯಕ್ತಿಕ ಚಾಟ್‌ಗಳಲ್ಲಿ ಮಿಸ್ ಮಾಡಿಕೊಂಡ ಸಂದೇಶಗಳನ್ನು ಸರಳ ಮತ್ತು ಅರ್ಥಪೂರ್ಣವಾಗಿ ಸಂಕ್ಷಿಪ್ತಗೊಳಿಸಲು ನೆರವಾಗಲಿದೆ.

ಜ್ಞಾನಸುಧಾ : ಮೌಲ್ಯಸುಧಾ-38ರಲ್ಲಿ ‘ಕಾರ್ಗಿಲ್ ವಿಜಯ ದಿವಸ’

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ ಮೌಲ್ಯಸುಧಾ ಮಾಲಿಕೆ-38ನ್ನು ಕಾರ್ಗಿಲ್ ವಿಜಯದಿವಸದ ಶುಭಸಂದರ್ಭದಲ್ಲಿ ಆಯೋಜಿಸಲಾಗಿದೆ.