ಕುಂದಾಪುರದಲ್ಲಿ ಎನ್‌ಎಸ್‌ಎಸ್ ಶಿಬಿರಕ್ಕೆ ತೆರಳುತ್ತಿದ್ದ ಕಾಲೇಜು ಬಸ್ ಪಲ್ಟಿ

Date:

spot_img

ಕುಂದಾಪುರ : ಕಾಲೇಜು ವಿದ್ಯಾರ್ಥಿಗಳನ್ನು ಎನ್‌ಎಸ್‌ಎಸ್ (NSS) ಶಿಬಿರಕ್ಕೆ ಕರೆದೊಯ್ಯುತ್ತಿದ್ದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಹಳ್ಳಿಹೊಳೆ ಸಮೀಪದ ಶೆಟ್ಟಿಪಾಲು ಎಂಬಲ್ಲಿ ಸೋಮವಾರ ನಡೆದಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಳ್ಳಿಹೊಳೆ ಗ್ರಾಮದ ಸುಳಗೊಡು ಶಾಲೆಯಲ್ಲಿ ಆಯೋಜಿಸಲಾಗಿದ್ದ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರಕ್ಕೆ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಬಸ್ಸಿನಲ್ಲಿ ತೆರಳುತ್ತಿದ್ದರು. ಬಸ್ಸು ಶೆಟ್ಟಿಪಾಲು ಎಂಬಲ್ಲಿ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯ ಪಕ್ಕಕ್ಕೆ ಉರುಳಿ ಬಿದ್ದಿದೆ.

ಬಸ್ಸು ಉರುಳುವ ಸಂದರ್ಭದಲ್ಲಿ ಅಲ್ಲಿಯೇ ಇದ್ದ ತೆಂಗಿನ ಮರವೊಂದಕ್ಕೆ ಢಿಕ್ಕಿ ಹೊಡೆದು ನಿಂತಿದೆ. ಒಂದು ವೇಳೆ ಮರ ಅಡ್ಡ ಬರದೇ ಇದ್ದಲ್ಲಿ ಬಸ್ಸು ಆಳಕ್ಕೆ ಉರುಳಿ ದೊಡ್ಡ ಮಟ್ಟದ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯಿತ್ತು. ತೆಂಗಿನ ಮರವು ಬಸ್ಸಿನ ವೇಗವನ್ನು ತಡೆದಿದ್ದರಿಂದ ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಕೇವಲ ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಅಪಘಾತದ ರಭಸಕ್ಕೆ ಬಸ್ಸಿನ ಮುಂಭಾಗ ಜಖಂಗೊಂಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಸದ್ಯಕ್ಕೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗ್ಯಾಜೆಟ್ ಪ್ರಿಯರಿಗೆ ಗುಡ್ ನ್ಯೂಸ್: ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಶಿಯೋಮಿಯ ಪವರ್‌ಫುಲ್ 67W ಪವರ್ ಬ್ಯಾಂಕ್

ಶಿಯೋಮಿ ಭಾರತದಲ್ಲಿ ಹೊಸ 20000mAh ಪವರ್ ಬ್ಯಾಂಕ್ 5i ಬಿಡುಗಡೆ ಮಾಡಲಿದೆ. 67W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ ಈ ಸಾಧನದ ಸಂಪೂರ್ಣ ಮಾಹಿತಿ ಇಲ್ಲಿದೆ.

ನಟಿ ಐಶ್ವರ್ಯ ಸಿಂಧೋಗಿಗೆ ಸೈಬರ್ ಕಿರುಕುಳ: ಪೊಲೀಸ್ ದೂರು

ನಟಿ ಐಶ್ವರ್ಯ ಸಿಂಧೋಗಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಮೂಲಕ ಕಿರುಕುಳ ನೀಡಿದ ಕಿಡಿಗೇಡಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನ ವಿಶೇಷ – ರಾಷ್ಟ್ರೀಯ ಬಿ ಸಮ್‌ಒನ್ ದಿನ

ಜುಲೈ 21 ರ ರಾಷ್ಟ್ರೀಯ ಬಿ ಸಮ್‌ಒನ್ ದಿನವು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ಅವರ ರಕ್ಷಣೆಗೆ ವಿಶ್ವಾಸಾರ್ಹ ವ್ಯಕ್ತಿಯಾಗಲು ವಯಸ್ಕರಿಗೆ ಕರೆ ನೀಡುತ್ತದೆ.

ಅಡುಗೆಮನೆಯಲ್ಲೇ ಇದೆ ಮ್ಯಾಜಿಕ್ ಲಿಕ್ವಿಡ್: ಅಕ್ಕಿ ತೊಳೆದ ನೀರನ್ನು ಅಪ್ಪಿತಪ್ಪಿಯೂ ಚೆಲ್ಲಬೇಡಿ

ಅಕ್ಕಿ ತೊಳೆದ ನೀರು ಮತ್ತು ಗಂಜಿ ನೀರಿನಿಂದ ಪಡೆಯಬಹುದಾದ ಅದ್ಭುತ ಆರೋಗ್ಯ ಹಾಗೂ ಸೌಂದರ್ಯ ಪ್ರಯೋಜನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.