ಕುಂದಾಪುರದಲ್ಲಿ ಭೀಕರ ರಸ್ತೆ ದುರಂತ: ಓವರ್‌ಟೇಕ್ ಮಾಡುವ ಭರದಲ್ಲಿ ಬಸ್‌ಗೆ ಸಿಲುಕಿ ತ್ರಾಸಿಯ ಯುವಕ ಸಾವು

Date:

spot_img

ಕುಂದಾಪುರ: ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಓವರ್‌ಟೇಕ್ ಸಾಹಸವೊಂದು ಅಮಾಯಕ ಯುವಕನ ಜೀವವನ್ನೇ ಬಲಿಪಡೆದಿದೆ. ಇಲ್ಲಿನ ಶೆಟ್ರಕಟ್ಟೆ ತಿರುವಿನಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ತ್ರಾಸಿ ಮೂಲದ ವಿಜಯ್ ಎಂದು ಗುರುತಿಸಲಾಗಿದೆ. ಇವರು ತ್ರಾಸಿಯಲ್ಲಿ ಫಾಸ್ಟ್ ಫುಡ್ ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಇಂದು ಬೆಳಿಗ್ಗೆ ವಿಜಯ್ ಅವರು ತಮ್ಮ ಬೈಕ್‌ನಲ್ಲಿ ತ್ರಾಸಿಯಿಂದ ಸೌಕೂರು ಮಾರ್ಗವಾಗಿ ಪ್ರಯಾಣಿಸುತ್ತಿದ್ದರು. ಈ ವೇಳೆ ಶೆಟ್ರಕಟ್ಟೆ ಸಮೀಪದ ಅಪಾಯಕಾರಿ ತಿರುವಿನಲ್ಲಿ ಮುಂದಿದ್ದ ಖಾಸಗಿ ಬಸ್ಸನ್ನು ದಾಟಿ ಮುಂದೆ ಹೋಗಲು ಯತ್ನಿಸಿದ್ದಾರೆ. ದುರದೃಷ್ಟವಶಾತ್, ಓವರ್‌ಟೇಕ್ ಮಾಡುವ ಸಂಧರ್ಭದಲ್ಲಿ ಎದುರಿನಿಂದ ವೇಗವಾಗಿ ಬಂದ ಮತ್ತೊಂದು ಖಾಸಗಿ ಬಸ್‌ಗೆ ವಿಜಯ್ ಅವರ ಬೈಕ್ ನೇರವಾಗಿ ಮುಖಾಮುಖಿ ಡಿಕ್ಕಿಯಾಗಿದೆ.

ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಬೈಕ್ ಸವಾರ ಬಸ್ಸಿನ ಮುಂಭಾಗಕ್ಕೆ ಅಪ್ಪಳಿಸಿ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ತಲೆಗೆ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಸ್ವರೂಪದ ಗಾಯಗಳಾದ ಪರಿಣಾಮ, ಚಿಕಿತ್ಸೆಗೂ ಮುನ್ನವೇ ಅವರು ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಇದೇ ಶೆಟ್ರಕಟ್ಟೆ ಪ್ರದೇಶದಲ್ಲಿ ಟಿಪ್ಪರ್ ಹಾಗೂ ಸರ್ಕಾರಿ ಬಸ್ ನಡುವೆ ಭೀಕರ ಅಪಘಾತ ನಡೆದಿತ್ತು. ಆ ಘಟನೆಯ ಭೀತಿ ಹಸಿರಾಗಿರುವಾಗಲೇ, ಕೆಲವೇ ಮೀಟರ್‌ಗಳ ಅಂತರದಲ್ಲಿ ಮತ್ತೊಂದು ಸಾವು ಸಂಭವಿಸಿರುವುದು ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶ ಮೂಡಿಸಿದೆ. ಕುಂದಾಪುರ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕರ್ನಾಟಕದಲ್ಲಿ ಇನ್‌ಫ್ಲುಯೆಂಜಾ ಜ್ವರದ ಭೀತಿ: ಆರೋಗ್ಯ ಇಲಾಖೆ ಅಲರ್ಟ್

ರಾಜ್ಯದಲ್ಲಿ ಹವಾಮಾನ ಬದಲಾವಣೆಯಿಂದಾಗಿ ಸಾಂಕ್ರಾಮಿಕ ಇನ್‌ಫ್ಲುಯೆಂಜಾ ಜ್ವರ ಹೆಚ್ಚಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಎಚ್ಚರದಿಂದಿರಲು ಸೂಚನೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ರೋಹಿತ್ ಶರ್ಮಾ ನಿವೃತ್ತಿ ವದಂತಿಗೆ ಬ್ರೇಕ್, ಲಾರ್ಡ್ಸ್‌ನಲ್ಲಿ ಶತಕದ ದಾಖಲೆ

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ನಿವೃತ್ತಿ ವದಂತಿಗಳನ್ನು ತಳ್ಳಿಹಾಕಿದ ರೋಹಿತ್ ಶರ್ಮಾ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಹಾಸನ ಬಸ್‌ನಲ್ಲಿ ಮಹಿಳಾ ಕಂಡಕ್ಟರ್-ಪ್ರಯಾಣಿಕಳ ಫೈಟ್ ವೈರಲ್

ಹಾಸನದಲ್ಲಿ ಮಹಿಳಾ ಕಂಡಕ್ಟರ್ ಹಾಗೂ ಪ್ರಯಾಣಿಕಳ ನಡುವೆ ಸೀಟಿಗಾಗಿ ನಡೆದ ಭೀಕರ ಜಗಳದ ವಿಡಿಯೋ ವೈರಲ್ ಆಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ನಾರಾಯಣ ಗುರು ಜಯಂತಿ ಭಾಷಣ ಸ್ಪರ್ಧೆ 2026: ಉಡುಪಿಯಲ್ಲಿ ರಾಜ್ಯ ಮಟ್ಟದ ಸ್ಪರ್ಧೆ

ಉಡುಪಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಪ್ರಯುಕ್ತ ರಾಜ್ಯ ಮಟ್ಟದ ಆನ್‌ಲೈನ್ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರಿಗೆ ಭಾರಿ ನಗದು ಬಹುಮಾನವಿದೆ, ಪೂರ್ಣ ಮಾಹಿತಿ ಇಲ್ಲಿದೆ ಓದಿ.