
ಕುದಿಗ್ರಾಮ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವದ ಪ್ರಯುಕ್ತ 11. 02.2025 ಮಂಗಳವಾರದಿಂದ 16.02.2025 ರವಿವಾರದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದಿನಾಂಕ 14.02.2025 ರಂದು ಶುಕ್ರವಾರ ಮಹಾಪೂಜೆ, ಪಲ್ಲಪೂಜೆ, ರಥಾರೋಹಣ, ಹಾಗೂ ಮಹಾಅನ್ನಸಂತರ್ಪಣೆ ನಡೆಯಲಿದೆ. ಅದೇ ದಿನ ಸಂಜೆ 7.30 ರಿಂದ ಮಹಾ ರಥೋತ್ಸವ ನಡೆಯಲಿರುವುದು. ದಿನಾಂಕ 15.02.2025 ರಂದು ತುಲಾಭಾರ ಸೇವೆ ಸತ್ಯನಾರಾಯಣ ಪೂಜೆ ಬೊಬ್ಬರ್ಯ ಕೋಲ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ .ಈ ಎಲ್ಲಾ ಕಾರ್ಯಕ್ರಮಗಳಲ್ಲಿ ತಾವು ಸಕುಟುಂಬ ಸಹಿತವಾಗಿ ಪಾಲ್ಗೊಂಡು ಶ್ರೀ ದೇವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.