
ಯರ್ಲಪಾಡಿ : ಯರ್ಲಪಾಡಿ ಗ್ರಾಮಸ್ಥರ ಬಹುದಿನದ ಬೇಡಿಕೆ ಸಾಕಾರಗೊಂಡಿದ್ದು, ಅತೀ ಶೀಘ್ರದಲ್ಲೇ ಯರ್ಲಪಾಡಿ ಗ್ರಾಮಕ್ಕೆ ಸರಕಾರಿ ಬಸ್ ಸಂಚಾರ ಸೇವೆಯು ಲಭ್ಯವಾಗಲಿದೆ. ಪ್ರತೀ ದಿನ ಉಡಪಿ – ಮಣಿಪಾಲ – ಹಿರಿಯಡ್ಕ – ಪಂಚನಬೆಟ್ಟು – ಗೋವಿಂದೂರು – ಬೈಲೂರು – ಕಾಂತರಗೋಳಿ – ಚಿಕ್ಕಲ್ ಬೆಟ್ಟು – ಹಿರ್ಗಾನ – ಕಾರ್ಕಳ ಮಾರ್ಗವಾಗಿ ಕೆ. ಎಸ್. ಆರ್. ಟಿ. ಸಿ. ಬಸ್ ಸಂಚರಿಸಲಿದ್ದು, ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ ಬಹಳ ಅನುಕೂಲವಾಗಲಿದೆ. ಕಳೆದ ಅನೇಕ ವರ್ಷಗಳಿಂದ ಹಲವಾರು ಗ್ರಾಮಸಭೆಗಳಲ್ಲಿ ಚರ್ಚೆಯಾಗುತ್ತಿದ್ದ ಗ್ರಾಮಸ್ಥರ ಸದ್ರಿ ಬೇಡಿಕೆಯು ಫಲಪ್ರದವಾಗುವ ಸಂದರ್ಭವು ಕೂಡಿ ಬಂದಿದೆ.
ಬಹುದಿನದ ಈ ಬೇಡಿಕೆಯು ಸಾಕಾರಗೊಳ್ಳುವಲ್ಲಿ ವಿಶೇಷವಾಗಿ ಸ್ಪಂದಿಸಿ ಸಹಕರಿಸಿದ ಕಾರ್ಕಳ ಶಾಸಕರಾದ ಶ್ರೀ ವಿ. ಸುನಿಲ್ ಕುಮಾರ್ ರವರಿಗೆ ಹಾಗೂ ಸರಕಾರದ ಸಾರಿಗೆ ಇಲಾಖೆಗೆ ಯರ್ಲಪಾಡಿ ಗ್ರಾಮಸ್ಥರ ಪರವಾಗಿ ತುಂಬುಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಹಾಗೂ ಈ ಸಾರ್ವಜನಿಕ ವಿಚಾರದಲ್ಲಿ ನಿರಂತರವಾಗಿ ಪ್ರಯತ್ನಪಟ್ಟ ಗ್ರಾಮಸ್ಥೆ ಮೇಲಿನಬಾವ ಶ್ರೀಮತಿ ಲಕ್ಷ್ಮಿ ಹೆಗ್ಡೆಯವರಿಗೂ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆಂದು ಯರ್ಲಪಾಡಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಸುನಿಲ್ ಕುಮಾರ್ ಹೆಗ್ಡೆಯವರು ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ