ಪರಿಹಾರ ನೀಡದ ಸಾರಿಗೆ ಸಂಸ್ಥೆಗೆ ಕೋರ್ಟ್ ನಿಂದ ಶಾಕ್: ಚನ್ನರಾಯಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಜಪ್ತಿ!

Date:

spot_img

ಚನ್ನರಾಯಪಟ್ಟಣ: ರಸ್ತೆ ಅಪಘಾತದ ಸಂತ್ರಸ್ತರಿಗೆ ನೀಡಬೇಕಾದ ಪರಿಹಾರದ ಹಣವನ್ನು ಪಾವತಿಸುವಲ್ಲಿ ವಿಳಂಬ ಧೋರಣೆ ಅನುಸರಿಸಿದ ಕೆಎಸ್‌ಆರ್‌ಟಿಸಿ (KSRTC) ಸಂಸ್ಥೆಗೆ ನ್ಯಾಯಾಲಯವು ಬಿಸಿ ಮುಟ್ಟಿಸಿದೆ. ಕೋರ್ಟ್ ಆದೇಶದ ಅನ್ವಯ ಚಿಕ್ಕಮಗಳೂರು ಡಿಪೋಗೆ ಸೇರಿದ 2 ಸರ್ಕಾರಿ ಬಸ್ಸುಗಳನ್ನು ಚನ್ನರಾಯಪಟ್ಟಣದಲ್ಲಿ ಜಪ್ತಿ ಮಾಡಲಾಗಿದೆ.

ಕಳೆದ ಕೆಲವು ಸಮಯದ ಹಿಂದೆ ನಡೆದಿದ್ದ ಅಪಘಾತವೊಂದರಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ನ್ಯಾಯಾಲಯವು ಸಾರಿಗೆ ಸಂಸ್ಥೆಗೆ ಸೂಚಿಸಿತ್ತು. ಆದರೆ ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿಯು ಈ ಆದೇಶವನ್ನು ಗಂಭೀರವಾಗಿ ಪರಿಗಣಿಸದೆ, ಪರಿಹಾರ ನೀಡುವ ಪ್ರಕ್ರಿಯೆಯಲ್ಲಿ ನಿರ್ಲಕ್ಷ್ಯ ವಹಿಸಿತ್ತು. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ನ್ಯಾಯಾಲಯ, ಬಸ್ಸುಗಳನ್ನು ಸೀಜ್ ಮಾಡಲು ಆದೇಶ ಹೊರಡಿಸಿತ್ತು.

ಈ ಆದೇಶದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ವಕೀಲರ ತಂಡವು, ಬೆಂಗಳೂರಿನಿಂದ ಶೃಂಗೇರಿ ಹಾಗೂ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಸಂಚರಿಸುತ್ತಿದ್ದ ಬಸ್ಸುಗಳನ್ನು ಮಾರ್ಗಮಧ್ಯೆ ತಡೆದು ವಶಕ್ಕೆ ಪಡೆದರು. ಏಕಾಏಕಿ ನಡೆದ ಈ ಕಾರ್ಯಾಚರಣೆಯಿಂದಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರು ನಡುರಸ್ತೆಯಲ್ಲೇ ಇಳಿಯಬೇಕಾಯಿತು. ತಮ್ಮ ತಲುಪಬೇಕಾದ ಸ್ಥಳಕ್ಕೆ ಹೋಗಲು ಪರದಾಡಿದ ಸಾರ್ವಜನಿಕರು, ಸಾರಿಗೆ ಸಂಸ್ಥೆಯ ಬೇಜವಾಬ್ದಾರಿತನಕ್ಕೆ ಹಿಡಿಶಾಪ ಹಾಕಿದರು. ಸದ್ಯ ಜಪ್ತಿ ಮಾಡಲಾದ ಎರಡೂ ವಾಹನಗಳನ್ನು ಚನ್ನರಾಯಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಲಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹೆಬ್ರಿ ನಾದ್ಪಾಲು ಗ್ರಾಮದಲ್ಲಿ ಹುಲಿ ದಾಳಿ: ಕಂಗಾಲಾದ ಗ್ರಾಮಸ್ಥರು

ಹೆಬ್ರಿಯ ನಾದ್ಪಾಲು ಪರಿಸರದಲ್ಲಿ ಪ್ರಾಣಿಗಳ ದಾಳಿ ಹೆಚ್ಚಾಗಿದ್ದು, ಅರಣ್ಯ ಇಲಾಖೆ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಪ್ರಶ್ನೆಪತ್ರಿಕೆ ಸೋರಿಕೆ: ವಿದ್ಯಾರ್ಥಿಗಳ ಪರ ನಿಂತ ಸಲ್ಮಾನ್ ಖಾನ್

ದೇಶಾದ್ಯಂತ ಕಾವೇರಿದ ನೀಟ್ ಅಕ್ರಮ ಖಂಡನೆಯ ಪ್ರತಿಭಟನೆ. ವಿದ್ಯಾರ್ಥಿಗಳ ನ್ಯಾಯಯುತ ಹೋರಾಟಕ್ಕೆ ಹಿರಿಯ ನಟ ಸಲ್ಮಾನ್ ಖಾನ್ ಬೆಂಬಲ. ಪೂರ್ಣ ಮಾಹಿತಿ ಇಲ್ಲಿದೆ ಓದಿ

NEET ಅಕ್ರಮ: ಫಾಸ್ಟ್ ಟ್ರ್ಯಾಕ್ ಕೋರ್ಟ್ ಘೋಷಿಸಿದ ಪ್ರಧಾನಿ ಮೋದಿ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

‘ಕರಾವಳಿ’ ಡಬ್ಬಿಂಗ್ ವಿವಾದ: ನೋವು ತೋಡಿಕೊಂಡ ಪ್ರಜ್ವಲ್ ದೇವರಾಜ್

'ಕರಾವಳಿ' ಚಿತ್ರದಲ್ಲಿ ತಮ್ಮ ಧ್ವನಿ ಬಳಸದಿರುವ ಬಗ್ಗೆ ನಟ ಪ್ರಜ್ವಲ್ ದೇವರಾಜ್ ಮನಬಿಚ್ಚಿ ಮಾತನಾಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.