spot_img

ಕ್ಷತ್ರಿಯ ಮರಾಠ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ ವಿದ್ಯಾರ್ಥಿ ವೇತನ ವಿತರಣೆ

Date:

spot_img

ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ

110 ವಿದ್ಯಾರ್ಥಿಗಳಿಗೆ 1.22 ಲಕ್ಷ ರೂ ವಿದ್ಯಾರ್ಥಿ ವೇತನ ವಿತರಣೆ

ಕಾರ್ಕಳ: ಕ್ಷತ್ರಿಯ ಮರಾಠ ಸಮಾಜ (ರಿ.) ಕಾರ್ಕಳ, ಇದರ ಆಶ್ರಯದಲ್ಲಿ ರ‍್ಯಾಂಕ್ ವಿಜೇತ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಅದಿತ್ಯವಾರ ನಡೆಯಿತು. ಕ್ಷತ್ರಿಯ ಮರಾಠ ಸಮಾಜದ ಅಧ್ಯಕ್ಷ ಶುಭದರಾವ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಸಮಾಜದ ಹಿರಿಯರಾದ ಉಮೇಶ್ ರಾವ್ ಉದ್ಘಾಟಿಸಿದರು.

ಕಲಬುರಗಿಯ ಶರಣಬಸವ ವಿಶ್ವವಿದ್ಯಾನಿಲಯದ ಸಂಗೀತ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ ಶ್ರುತಿ ಸಿಂಧೆ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ 9 ರ‍್ಯಾಂಕ್ ಪಡೆದ ಸಂಪ್ರೀತ್ ಭೋಂಸ್ಲೆ ಮತ್ತು ಎಸ್.ಎಸ್‌.ಎಲ್.ಸಿ ಹಾಗೂ ಪಿ.ಯು.ಸಿ.ಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ 20 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಸಮಾಜದ 110‌ ವಿದ್ಯಾರ್ಥಿಗಳಿಗೆ 1.22 ಲ‌ಕ್ಷ‌ ರೂ ವಿದ್ಯಾರ್ಥಿ ವೇತನ ಮತ್ತು ಕೊಡೆಗಳನ್ನು ವಿತರಿಸಲಾಯಿತು.

ಶೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ‌ ಮಂಡಳಿಯ ವತಿಯಿಂದ ಶುಭದರಾವ್ ಹಾಗೂ ಪುರಸಭಾ ಸದಸ್ಯ ಶಿವಾಜಿ ರಾವ್ ಜಾಧವ್ ಇವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ್ ಗಿರೀಶ್ ರಾವ್, ಕೆ.ಕೆ.ಎಮ್‌.ಪಿ. ತಾಲೂಕು‌ ಘಟಕದ ಅಧ್ಯಕ್ಷ ಕೀರ್ತನ್ ಲಾಡ್, ಪೆರ್ವಾಜೆ ಶಾಲೆಯ ಸಂಗೀತ ಶಿಕ್ಷಕ ಕೃಷ್ಣಪ್ಪ ಶಿಂಧೆ, ಇ-ಲಾಜಿಕ್ಸಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಸಿ.ಇ.ಒ ದಿನೇಶ್ ಶೆಟ್ಟಿ, ಮೊಕ್ತೇಸರರಾದ ರಾಮಚಂದ್ರರಾವ್, ದಯಾನಂದ ಶಿಂಧೆ ಉಪಸ್ಥಿತರಿದ್ದರು

ಕಾರ್ಯದರ್ಶಿ ಪ್ರಸನ್ನ ಸ್ವಾಗತಿಸಿದರು, ಶಿಕ್ಷಕಿ ಆಶಾಲತಾ ಗಿರೀಶ್ ವಿದ್ಯಾರ್ಥಿಗಳ ವಿವರ ವಾಚಿಸಿದರು, ಪ್ರಕಾಶ್ ರಾವ್ ಸಾಣೂರು ಧನ್ಯವಾದವಿತ್ತರು. ಶಿಕ್ಷಕ ಹರೇಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಉಡುಪಿ ಶ್ರೀಕೃಷ್ಣ ಮಠದಲ್ಲಿ ನಾಗರಪಂಚಮಿ ಸಂಭ್ರಮ: ಪುತ್ತಿಗೆ ಶ್ರೀಗಳಿಂದ ನಾಗದೇವರಿಗೆ ವಿಶೇಷ ಪೂಜೆ!

ಇಂದು ನಾಗರಪಂಚಮಿಯ ಶುಭದಿನದಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಬ್ಯಾಂಕ್ ಆಫ್ ಬರೋಡಾದ ಸಾಣೂರು ಶಾಖೆಯ ವತಿಯಿಂದ ಕೊಳಕೆ ಇರ್ವತ್ತೂರು ಶಾಲೆಗೆ ಕಲಿಕಾ ಸಾಮಗ್ರಿಗಳ ವಿತರಣೆ

ಬ್ಯಾಂಕ್ ಆಫ್ ಬರೋಡಾದ ಸಾಣೂರು ಶಾಖೆಯ ವತಿಯಿಂದ ಕೊಳಕೆ ಇರ್ವತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ನಡೆಯಿತು. ಶತಮಾನೋತ್ಸವ ಮುಂಬೈ ಸಮಿತಿಯ ಗೌರವಾಧ್ಯಕ್ಷರಾದ ರಮೇಶ್ ಶೆಟ್ಟಿ ಗುರಂತಿಬೆಟ್ಟು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಅಗರಬತ್ತಿ ಹೊಗೆ ಸಿಗರೇಟಿಗಿಂತ ಹೆಚ್ಚು ಅಪಾಯಕಾರಿ: ಹೊಸ ಅಧ್ಯಯನದಿಂದ ಬಹಿರಂಗ!

ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಬಳಸಲಾಗುವ ಅಗರಬತ್ತಿ ಹಾಗೂ ಧೂಪದ್ರವ್ಯದ ಹೊಗೆ ಆಹ್ಲಾದಕರವೆಂದು ನಂಬಲಾಗಿದ್ದರೂ, ಹೊಸ ಅಧ್ಯಯನವೊಂದು ಇದು ಸಿಗರೇಟ್ ಹೊಗೆಗಿಂತಲೂ ಹೆಚ್ಚು ಹಾನಿಕಾರಕ ಎಂದು ಸ್ಪಷ್ಟಪಡಿಸಿದೆ.

ವಿಪರೀತ ಹೊಟ್ಟೆನೋವಿನಿಂದ ವಿವಾಹಿತ ಮಹಿಳೆ ಸಾವು; ಮರೋಡಿಯಲ್ಲಿ ದುರ್ಘಟನೆ

ವಿಪರೀತ ಹೊಟ್ಟೆನೋವಿನಿಂದ ವಿವಾಹಿತ ಮಹಿಳೆಯೊಬ್ಬರು ಅಚಾನಕ್ಕಾಗಿ ಮೃತಪಟ್ಟ ಘಟನೆ ಮರೋಡಿ ಗ್ರಾಮದಲ್ಲಿ ಸೋಮವಾರ (ಜುಲೈ 28, 2025) ನಡೆದಿದೆ.