spot_img

ಕೆ.ಎಂ.ಇ.ಎಸ್: ವಿಶ್ವಪರಿಸರ ದಿನ ಆಚರಣೆ

Date:

spot_img

“ಪರಿಸರ ಮಾಲಿನ್ಯದಿಂದ ಪ್ರಾಕೃತಿಕ ಮುನಿಸು ಉಂಟಾಗುತ್ತದೆ. ಮೊದಲು ನಮ್ಮ ಮನೆಯ ಸುತ್ತ ಸ್ವಚ್ಛ ಮಾಡಿಕೊಳ್ಳಬೇಕು, ನಂತರ ಶಾಲೆಯ ಆವರಣ ಮತ್ತು ಶಾಲಾ ಕೊಠಡಿಗಳನ್ನು ಸ್ವಚ್ಛಗೊಳಿಸಬೇಕು. ನೀರಿನ ಬಾಟಲ್‌ಗಳನ್ನು ಎಲ್ಲಂದರಲ್ಲಿ ಬಿಸಾಡಬಾರದು.ಪ್ಲಾಸ್ಟಿಕ್ ಬಳಕೆಯನ್ನು ನಿಷೇದಿಸಬೇಕು. ಆದಷ್ಟು ಗಿಡಗಳನ್ನು ನೆಟ್ಟು ಪೋಷಿಸಬೇಕು. ವಿಘಟನೆಗೊಳ್ಳದ ಪ್ಲಾಸ್ಟಿಕ್ ಮತ್ತು ತ್ಯಾಜ್ಯ ವಸ್ತುಗಳು ಕ್ಯಾನ್ಸರ್, ಆಸ್ತಮಾ ಇತ್ಯಾದಿ ಕಾಯಿಲೆಗಳನ್ನು ಉಂಟು ಮಾಡಬಹುದು. ಪರಿಸರ ಮಾಲಿನ್ಯದಿಂದ ನಮ್ಮ ಭೂಮಿ ಕಲುಷಿತಗೊಂಡಿರುವುದರಿಂದ ನಾವು ಈಗಲಾದರೂ ಜಾಗೃತರಾಗಬೇಕು” ಎಂದು ಜೀವಶಾಸ್ತ್ರ ಉಪನ್ಯಾಸಕರು ಮತ್ತು ಸಂಪನ್ಮೂಲ ವ್ಯಕ್ತಿಯಾದ ಗುರುಕುಮಾರ್‌ರವರು ಕೆ.ಎಂ.ಇ.ಎಸ್ ಪ್ರೌಢಶಾಲಾ ವಿಭಾಗದ ‘ವಿಶ್ವಪರಿಸರ ದಿನ’ ಆಚರಣೆಯ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ನದಾಫ್ ಅಹಮ್ಮದ್ ಮಾತನಾಡಿ “ಸ್ವಚ್ಛತೆಯಿಂದ ನಮ್ಮ ಮನಸ್ಸು ಯಾವಾಗಲೂ ಸಂತೋಷವಾಗಿರುತ್ತದೆ. ಗಿಡ ನೆಡುವುದರ ಮೂಲಕ ನಮ್ಮ ಪರಿಸರದಲ್ಲಿ ಆಮ್ಲಜನಕವನ್ನು ಹೆಚ್ಚಿಸಬಹುದು” ಎಂದು ಹೇಳಿದರು.ಪ್ರೌಢಶಾಲಾ ಮುಖ್ಯಸ್ಥೆ ಶ್ರೀಮತಿಯವರು ಮಾತನಾಡುತ್ತಾ“ ಸ್ವಚ್ಛತೆ ನಮ್ಮ ಆದ್ಯ ಕರ್ತವ್ಯ, ಗಿಡ ನೆಡುವುದರ ಮೂಲಕ ಪರಿಸರವನ್ನು ರಕ್ಷಿಸಬೇಕು” ಎಂದು ಹೇಳಿದರು.ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಲೊಲಿಟಾ ಡಿ’ಸಿಲ್ವಾ ಪರಿಸರ ದಿನದ ಆಚರಣೆಯ ಮಹತ್ವದ ಬಗ್ಗೆ ಮಾತನಾಡಿದರು.ಕಾಲೇಜಿನ ಪ್ರಾಂಶುಪಾಲರಾದ ಕೆ.ಬಾಲಕೃಷ್ಣ ರಾವ್‌ರವರು ಮಾತನಾಡಿ “ಬೆಟ್ಟಗುಡ್ಡ ಪ್ರದೇಶಗಳಲ್ಲಿ ಕುಸಿಯುವುದು ಮತ್ತು ಕೃತಕ ಮಳೆಯಿಂದ ಸಾವು ನೋವು ಉಂಟಾಗುವುದು ಮರಗಳನ್ನು ಕಡಿಯುವುದರಿಂದ. ಮರಗಳ ನಾಶದಿಂದ ‘ಹಸಿರುಮನೆ ಪರಿಣಾಮ’ ಉಂಟಾಗಿ ದ್ರುವ ಪ್ರದೇಶಗಳ ಮಂಜು ಕರಗಿ ಸಮುದ್ರದ ನೀರಿನ ಮಟ್ಟಏರುವುದು” ಎಂದು ಹೇಳಿದರು. ವಿದ್ಯಾರ್ಥಿಗಳು ಕಾಲೇಜಿಗೆ ಗಿಡಗಳನ್ನು ವಿತರಿಸಿದರು.

ಸಂಸ್ಥೆಯ ಪಕ್ಕದಲ್ಲಿರುವ ರೋಟರಿ ಆಸ್ಪತ್ರೆ ಮಣಿಪಾಲಕ್ಕೆ ವಿದ್ಯಾರ್ಥಿಗಳು ಬೇಟಿಯಾಗಿ ಪರಿಸರ ರಕ್ಷಣೆಯ ಮಾಹಿತಿಯನ್ನು ನೀಡಿದರು. ಮಣಿಪಾಲ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಆಶಾ ಮತ್ತು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಗಿಡಗಳನ್ನು ನೆಡುವುದರ ಮೂಲಕ ಪರಿಸರ ರಕ್ಷಣೆಗೆ ಚಾಲನೆ ನೀಡಿದರು.

ಪ್ರೌಢಶಾಲಾ ವಿದ್ಯಾರ್ಥಿಗಳು ಸ್ವಾಗತಿಸಿದರು. ವಿದ್ಯಾರ್ಥಿನಿ ಜೈನಾಬ್ ಸ್ವಾಗತಿಸಿ, ಅನನ್ಯಾ ಧನ್ಯವಾದ ಕಾರ್ಯಕ್ರಮ ನೆರವೇರಿಸಿದರು. ಆಯೆಷಾ ಮೆಹರಿನ್ ಕಾರ್ಯಕ್ರಮ ನಿರ್ವಹಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮುದ್ರಾಡಿ ಪ್ರೌಢಶಾಲೆಗೆ ಕ್ರೀಡಾ ಪರಿಕರಗಳ ಹಸ್ತಾಂತರ

ಸಂತೋಷ ಪೂಜಾರಿ ನೆಕ್ಕಾರ್ ಬೆಟ್ಟುರವರು ಮುದ್ರಾಡಿ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಗೆ 1995-96 ನೆ ಸಾಲಿನ ವಿದ್ಯಾರ್ಥಿಗಳು ಕ್ರೀಡಾ ಪರಿಕರಗಳು ಸೇರಿ ಮೂಲಭೂತ ಸೌಲಭ್ಯಗಳಿಗೆ ಕೊಡಮಾಡಿದ 50,000 ರೂಗಳ ಚೆಕ್ ಮತ್ತು ಕ್ರೀಡಾ ಪರಿಕರಗಳ ಹಸ್ತಾಂತರ ಮಾಡಿದರು.

ಪುರಸಭಾ ವ್ಯಾಪ್ತಿಯ ರಸ್ತೆ ಹೊಂಡಗಳನ್ನು ತಕ್ಷಣ ಮುಚ್ಚಿ ಇಲ್ಲವಾದರೆ ಪ್ರತಿಭಟನೆ ಎದುರಿಸಿ : ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರ ದೇವಾಡಿಗ

ಕಾರ್ಕಳ ಪುರಸಭಾ ವ್ಯಾಪ್ತಿಯ ರಸ್ತೆಗಳಲ್ಲಿ ಹೊಂಡಗಳೇ ತುಂಬಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ ಪುರಸಭಾ ಆಡಳಿತ ತಕ್ಷಣ ಎಲ್ಲಾ ಹೊಂಡಗಳನ್ನು ಮುಚ್ಚಬೇಕು ಇಲ್ಲವಾದರೆ ಸಾರ್ವಜನಿಕರ ಜೊತೆಗೂಡಿ ಮಾಡುವ ಪ್ರತಿಭಟನೆಯನ್ನು ಎದುರಿಸಬೇಕಾದಿತು ಎಂದು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜೇಂದ್ರ ದೇವಾಡಿಗ ಪುರಸಭೆಯನ್ನು ಎಚ್ಚರಿಸಿದ್ದಾರೆ.

ಡಾ. ಟಿ.ಎಂ.ಎ. ಪೈ ಸ್ಮರಣೆ: ಶಿಕ್ಷಣ, ಸಮಾಜಮುಖಿ ಕಾರ್ಯಗಳಿಂದ ಆದರ್ಶ ವ್ಯಕ್ತಿತ್ವ – ಲಕ್ಷ್ಮೀ ನಾರಾಯಣ ಕಾರಂತ

ಮುಕುಂದಕ್ರಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ಶಾಲಾ ಸಂಸ್ಥಾಪಕರ ದಿನಾಚರಣೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಅಮೆರಿಕಾದ ಅಂತರರಾಷ್ಟ್ರೀಯ ವಿಧಾಯಕರುಗಳ ಸಮ್ಮೇಳನಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಆಯ್ಕೆ!

ಅಮೆರಿಕಾದ ಬೋಸ್ಟನ್‌ನಲ್ಲಿ ರಾಷ್ಟ್ರೀಯ ಶಾಸಕರ ಸಮಾವೇಶ ಸಂಸ್ಥೆಯ (NLC) ಆಶ್ರಯದಲ್ಲಿ ಕರ್ನಾಟಕ ವಿಧಾನಸಭಾ ಅಧ್ಯಕ್ಷರ (ಸ್ಪೀಕರ್) ನೇತೃತ್ವದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ವಿಧಾಯಕರುಗಳ ಸಮ್ಮೇಳನಕ್ಕೆ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.