spot_img

ಪಂದ್ಯಾಟ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಒಗ್ಗೂಡಿಸುವ ಕ್ರೀಡೆ : ಪ್ರಭಾಕರ ಜೈನ್.

Date:

ಕೆ.ಎಮ್.ಇ.ಎಸ್ ವಿದ್ಯಾಸಂಸ್ಥೆ ರಾಷ್ಟ್ರಮಟ್ಟದ ಕ್ರೀಡಾಳುಗಳನ್ನು ಕೊಟ್ಟ ಸಂಸ್ಥೆ. ಇಂಥಹ ಸಂಸ್ಥೆಯಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟನೆಗೊಳಿಸಲು ಹೆಮ್ಮೆಯಾಗುತ್ತದೆ. ವಿದ್ಯಾರ್ಥಿಗಳು ಆಟದಲ್ಲಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು” ಎಂದು ಹೇಳಿದರು.
ಅತಿಥಿಯಾಗಿ ಆಗಮಿಸಿದ ಮೊಹಮ್ಮದ್ ಜಕ್ರಿಯಾರವರು ಮಾತನಾಡಿ “ಕೆ. ಎಮ್. ಇ .ಎಸ್.ವಿದ್ಯಾಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿ ಗಳು ಸ್ಪೋರ್ಟ್ಸ್ ಕೋಟಾದಡಿಯಲ್ಲಿ ಹಲವಾರು ಉದ್ಯೋಗವನ್ನು ಪಡೆದಿರುತ್ತಾರೆ ” ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಬಾಲಕೃಷ್ಣ ರಾವ್ ರವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಮಾತನಾಡಿ ” ಆಗಸ್ಟ್ 29 ರಂದು ಮೇಜರ್ ಧ್ಯಾನ್ ಚಂದ್ ಕ್ರೀಡಾ ದಿಗ್ಗಜ ಅವರ ಜನ್ಮ ದಿನ, ಆ ದಿನವನ್ನು ರಾಷ್ಟ್ರೀಯ ಕ್ರೀಡದಿನವನ್ನಾಗಿ ಆಚರಿಸುತ್ತಾರೆ. ಪಂದ್ಯಾಟ, ಕ್ರೀಡೆಗಳು ಮಕ್ಕಳಿಗೆ ಮನೋರಂಜನೆ ಒಟ್ಟಿಗೆ ಮಾನಸಿಕ
ಏಕಾಗ್ರತೆ, ತಾಳ್ಮೆ, ಅನೇಕ ರೋಗಗಳ ನಿವಾರಣೆ, ದೇಹದಲ್ಲಿ ಸರಿಯಾದ ರಕ್ತ ಪರಿಚಲನೆ, ಇತ್ಯಾದಿ ಧನಾತ್ಮಕ
ಸ್ಥಿತಿಯನ್ನು, ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಮಯದ ನಿರ್ವಹಣೆ, ದೇಹದ ಸ್ನಾಯುಗಳ ಶಕ್ತಿಯ ವರ್ಧನೆ, ಚೈತನ್ಯಗಳನ್ನು ಉಂಟು ಮಾಡುತ್ತದೆ. ಗ್ರೀಕ್ ದೇಶದವರು ಕ್ರೀಡೆಗೆ ಹೆಚ್ಚು ಮಹತ್ವ ಕೊಡುತ್ತಿದ್ದರು. ಅಂದಿನಿಂದ ಆರಂಭಗೊಂಡ ಒಲಿಂಪಿಕ್ ಕ್ರೀಡೆ ಇಂದಿಗೂ ಜಗತ್ ಪ್ರಸಿದ್ಧವಾಗಿದೆ. ಕ್ರೀಡೆ ಗಳು ನಾಯಕತ್ವದ ಗುಣವನ್ನು ಉಂಟು ಮಾಡುತ್ತದೆ. ಧನಾತ್ಮಕ ಚಿಂತನೆಯ ಒಟ್ಟಿಗೆ ಪರಸ್ಪರ ಸಹಕಾರದಿಂದ ಬಾಳುವ ಸಾಮಾಜಿಕ ಪಾಠವನ್ನು ಕಲಿಸುತ್ತದೆ. ” ಎಂದು ಅಭಿಪ್ರಾಯ ಪಟ್ಟರು.
ಪ್ರೌಢಶಾಲಾ ವಿಭಾಗದ ಮುಖ್ಯಸ್ಥ ಶ್ರೀಮತಿ ಶ್ರೀಮತಿ ಪಾಟ್ಕರ್, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಲೋಲಿಟ ಡಿ ಸಿಲ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕಿ ದೀಕ್ಷಾರವರು ಸ್ವಾಗತಿಸಿದರು. ಉಪನ್ಯಾಸಕ ಗುರುಕುಮಾರ್ ಧನ್ಯವಾದ ಸಮರ್ಪಣೆ ಮಾಡಿದರು. ಉಪನ್ಯಾಸಕಿ ಪೂಜಾರವರು ಕಾರ್ಯಕ್ರಮ ನಿರ್ವಹಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

HMD ಯಿಂದ ಹೊಸ 5G ಸ್ಮಾರ್ಟ್‌ಫೋನ್ ಅನಾವರಣ: ಯುವ ಗ್ರಾಹಕರನ್ನು ಗುರಿಯಾಗಿಸಿಕೊಂಡು Vibe 5G ಬಿಡುಗಡೆ

ಪ್ರಸಿದ್ಧ ಮೊಬೈಲ್ ತಯಾರಿಕಾ ಕಂಪನಿ ಹೆಚ್‌ಎಂಡಿ (HMD), ಭಾರತದ ಮಾರುಕಟ್ಟೆಗೆ ತನ್ನ ಹೊಸ 5G ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ.

ಬೀಟ್‌ರೂಟ್‌ ಬಳಸಿ ಹೊಳೆಯುವ ತ್ವಚೆ ಪಡೆಯುವ ಸುಲಭ ವಿಧಾನಗಳು

ನೈಸರ್ಗಿಕ ಸೌಂದರ್ಯವರ್ಧಕಗಳಲ್ಲಿ ಒಂದಾದ ಬೀಟ್ ರೂಟ್, ಆರೋಗ್ಯ ಮತ್ತು ಸೌಂದರ್ಯಕ್ಕೆ ಅದ್ಭುತ ಕೊಡುಗೆ ನೀಡುತ್ತದೆ.

ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಯ ಭೀಕರ ಹತ್ಯೆ; ಪತ್ನಿ, ಮಗನ ಎದುರೇ ತಲೆ ಕಡಿದ ದುಷ್ಕರ್ಮಿ

ಅಮೆರಿಕದ ಡಲ್ಲಾಸ್‌ನಲ್ಲಿ ಪತ್ನಿ ಮತ್ತು ಮಗನ ಮುಂದೆ ಭಾರತೀಯ ಮೂಲದ ಚಂದ್ರಮೌಳಿ ನಾಗಮಲ್ಲಯ್ಯ (50) ಎಂಬುವವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಪೊಲೀಸರ ಮಿಂಚಿನ ಕಾರ್ಯಾಚರಣೆ: ಉಡುಪಿಯಲ್ಲಿ 65 ಕೆ.ಜಿ ಗಾಂಜಾ ಜಪ್ತಿ, ಇಬ್ಬರು ಅಂತರರಾಜ್ಯ ಮಾಫಿಯಾ ಸದಸ್ಯರ ಬಂಧನ

ಖಚಿತ ಮಾಹಿತಿ ಆಧರಿಸಿ ಉಡುಪಿ ಸೆನ್ ಅಪರಾಧ ಪೊಲೀಸರು ನಡೆಸಿದ ದಿಢೀರ್ ಕಾರ್ಯಾಚರಣೆಯಲ್ಲಿ, ಲಾರಿಯಲ್ಲಿ ಸಾಗಿಸುತ್ತಿದ್ದ ಬೃಹತ್ ಪ್ರಮಾಣದ ಗಾಂಜಾವನ್ನು ಜಪ್ತಿ ಮಾಡಲಾಗಿದೆ.