
ಕಾರ್ಕಳ : ಕೆ ಎಂ ಈ ಎಸ್ ಶಿಕ್ಷಣ ಸಂಸ್ಥೆಯಲ್ಲಿ ದಿನಾಂಕ 05-04-2025 ನೇ ಶನಿವಾರದಂದು ಪೂರ್ವ ಪ್ರಾಥಮಿಕದ ಮಕ್ಕಳಿಂದ 1ನೇ ತರಗತಿವರೆಗಿನ ಮಕ್ಕಳಿಗೆ KIDS FEST ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಾಗೂ UKG ಮಕ್ಕಳಿಗೆ “Graduation day” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಲೆಯ ಹಳೆ ವಿದ್ಯಾರ್ಥಿಯಾದ Dn Valesh Prajwal Aranha ಇವರು “ಸಾಂಸ್ಕೃತಿಕ ಚಟುವಟಿಕೆ ಮೂಲಕ ಶೈಕ್ಷಣಿಕ ಜ್ಞಾನವನ್ನು ಸಂಪಾದಿಸಬಹುದು” ಎಂದು ಹೇಳಿದರು.
ಮತ್ತೋರ್ವ ಅತಿಥಿಯಾದ ಶ್ರೀಮತಿ ಮೀನಾಕ್ಷಿ ಭಟ್ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ” ಮಕ್ಕಳಲ್ಲಿ ಈಗಾಗಲೇ ಅಡಗಿರುವ ದಿವ್ಯ ಪರಿಪೂರ್ಣತೆಯನ್ನು ಹೊರಗೆಳೆಯುವುದೇ ಶಿಕ್ಷಣ ಎಂಬಂತೆ , ಈ ಶಾಲೆಯಲ್ಲಿ ಚಿಕ್ಕ ಮಕ್ಕಳಿಂದಲೇ ವಿವಿಧ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ” ಎಂದು ಹೇಳಿದರು.
ಅಂತೆಯೇ ಮತ್ತೋರ್ವ ಅತಿಥಿಯಾದ ಇಕ್ಬಾಲ್ ಇವರು ಮಕ್ಕಳನ್ನು ಸಾಧ್ಯವಾದಷ್ಟು ಸಾಮಾಜಿಕ ಪಿಡುಗುಗಳಿಗೆ ಒಳಗಾಗದಂತೆ ಮಕ್ಕಳಲ್ಲಿ ಶಿಕ್ಷಣದ ಅರಿವು ಮೂಡಿಸಬೇಕು ಎಂದು ನುಡಿದರು.

ಈ ಸಮಾರಂಭದಲ್ಲಿ ಶಾಲೆಯ ಅಧ್ಯಕ್ಷರಾದ ಕೆ ಎಸ್ ಇಮ್ತಿಯಾಜ್ ಅಹಮದ್, ಪ್ರಾಂಶುಪಾಲರಾದ ಶ್ರೀಮತಿ ಪಾಟ್ಕರ್, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ಲೊಲಿಟ.ಡಿಸಿಲ್ವ ಸೇರಿದಂತೆ ಶಾಲಾ ಶಿಕ್ಷಕರು, ಸಿಬ್ಬಂದಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.