
ಉಡುಪಿ : ಉಡುಪಿಯ ಪುರಾತನ ಪ್ರಾಧಾನ್ಯ ಶಕ್ತಿಪೀಠವಾದ ಕೆಮ್ಮಣ್ಣು ಶ್ರೀ ಮಾರಿಕಾಂಬಾ ಭದ್ರಕಾಳಿ ಅಮ್ಮನವರ ದೇವಸ್ಥಾನದ ಸನ್ನಿಧಿಯಲ್ಲಿ ಶ್ರೀ ಮಾರಿಕಾಂಬಾ ಮಕ್ಕಳ ಕುಣಿತ ಭಜನಾ ಮಂಡಳಿ ಎಂಬ ಹೆಸರಿನ ಭಜನಾ ಮಂಡಳಿಯು ಶುಭಾರಂಭವಾಯಿತು. ದೀಪ ಪ್ರಜ್ವಲಿಸಿ ಶ್ರೀ ದೇವರಿಗೆ ಕುಣಿತ ಭಜನಾ ಸೇವೆ ಮಾಡುವ ಮೂಲಕ ವಿಧ್ಯುಕ್ತವಾಗಿ ಆರಂಭವಾದ ಈ ಭಜನಾ ಮಂಡಳಿಯು ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು.
ಉಡುಪಿ ತಾಲೂಕು ಭಜನಾ ಪರಿಷತ್ತಿನ ನೇತೃತ್ವದಲ್ಲಿ ಧರ್ಮಸ್ಥಳ ಭಜನಾ ಕಮ್ಮಟದಲ್ಲಿ ನುರಿತ ಶಿಬಿರಾರ್ಥಿಗಳಾಗಿ ತರಬೇತಿ ಪಡೆದವರು ಈ ಭಜನಾ ಮಂಡಳಿಗೆ ತರಬೇತಿ ನೀಡಿ ಸಹಕರಿಸಿದ್ದರು.

ಈ ಸಂದರ್ಭದಲ್ಲಿ ಶ್ರೀ ಭದ್ರಕಾಳಿ ಮಾರಿಕಾಂಬ ಅಮ್ಮನವರ ದೇವಸ್ಥಾನದ ಗೌರವಾಧ್ಯಕ್ಷರಾದ ಶ್ರೀ ಜಯಕೃಷ್ಣ.ಎ.ಶೆಟ್ಟಿ , ಅಧ್ಯಕ್ಷರಾದ ಶ್ರೀ ರಘುರಾಮ ಶೆಟ್ಟಿ , ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕಿನ ಅಧ್ಯಕ್ಷರಾದ ಶ್ರೀ ವಿಜಯ ಶೆಟ್ಟಿ ಕೊಂಡಾಡಿ , ಶ್ರೀ ಮಾರಿಕಾಂಬ ಕುಣಿತ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀ ಸದಾಶಿವ ಕೊಟ್ಯಾನ್, ಉಡುಪಿ ತಾಲೂಕು ಭಜನಾ ಪರಿಷತ್ತಿನ ಕೋಶಾಧಿಕಾರಿಯಾದ ಶ್ರೀಮತಿ ಪೂರ್ಣಿಮಾ , ಉಡುಪಿ ತಾಲೂಕು ಭಜನಾ ಪರಿಷತ್ತ್ ಹಾಗೂ ವಿವಿಧ ಭಜನಾ ಮಂಡಳಿಗಳ ಪದಾಧಿಕಾರಿಗಳಾದ ಶ್ರೀ ಗೋಕುಲದಾಸ್ ನಾಯಕ್, ಶ್ರೀ ಶಂಕರ ಆಚಾರ್ಯ, ಆಶಾ ಕುಂದರ್, ಜ್ಯೋತಿ , ಚೇತನ್, ಕೀರ್ತನ್, ಕೌಶಿಕ್, ಅಕ್ಷಯ್, ವಿಖ್ಯಾತ್, ಸುಶಾಂತ್, ಸುದೀಪ್, ದಿಲೀಪ್, ಅಮಿತ್, ಸಾತ್ವಿಕ್, ಸುದರ್ಶನ್, ಶ್ರಾವ್ಯ, ಅಶ್ವಿತಾ ಇವರೊಂದಿಗೆ ಊರಿನ ಗಣ್ಯರು , ಹಿರಿಯರು, ಮಕ್ಕಳ ಪೋಷಕರು ಮತ್ತು ಹಿತೈಷಿಗಳು ಉಪಸ್ಥಿತರಿದ್ದು ಭಜನಾ ಮಂಡಳಿಯ ಸರ್ವ ಸದಸ್ಯರಿಗೂ ಶುಭಹಾರೈಸಿದರು.