
ಕಾರ್ಕಳ, ಮಾರ್ಚ್ 8 : ನಮ್ಮ ಸುತ್ತಮುತ್ತಲಿನ ಸ್ವಚ್ಛತೆ ಮಾತ್ರವಲ್ಲದೆ ನಮ್ಮ ಕಸಗಳನ್ನು ವಿಂಗಡಿಸುವ ಜವಾಬ್ದಾರಿಗಳನ್ನು ಇಂದು ನಮ್ಮ ಸಮಾಜದಲ್ಲಿ ಪುರಸಭೆಯ ಸ್ವಚ್ಛತಾ ತಂಡ ಮಾಡುತ್ತಿದೆ. ಇದರಲ್ಲಿ ಕಾರ್ಯ ನಿರ್ವಹಿಸುತ್ತಿರುವಂತಹ ಮಹಿಳೆಯರಿಗೆ ಆಹಾರ ಕಿಟ್ ವಿತರಣೆಯೊಂದಿಗೆ ಕರುಣಾಳು ಬಾ ಬೆಳಕು ಪ್ರತಿಷ್ಠಾನದ ರಮಿತಾ ಶೈಲೇಂದ್ರ, ಮಮತಾ, ಸ್ವಾತಿ ಸಂತೋಷ್, ಹಾಗೂ ಪಲ್ಲವಿಯವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಭಿನಂದನೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರಾಗಿರುವ ಯೋಗೀಶ್ ದೇವಾಡಿಗ ಮತ್ತು ಉಪಾಧ್ಯಕ್ಷರಾಗಿರುವ ಪ್ರಶಾಂತ್ ಕೋಟ್ಯಾನ್ ಅವರು ಉಪಸ್ಥಿತರಿದ್ದರು. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವುದು ನಮ್ಮೆಲ್ಲರ ಕರ್ತವ್ಯ ಮತ್ತು ಸ್ವಚ್ಛತಾ ಸಿಬ್ಬಂದಿಯವರೊಂದಿಗೆ ವಿಶೇಷವಾಗಿ ಈ ದಿನಾಚರಣೆಯನ್ನು ಆಚರಿಸಿದ ಕರುಣಾಳು ಬಾ ಬೆಳಕಿನ ತಂಡದ ಕೆಲಸ ಶ್ಲಾಘನೀಯ ಎಂದು ಪುರಸಭಾ ಅಧ್ಯಕ್ಷರಾಗಿರುವ ಯೋಗೇಶ್ ದೇವಾಡಿಗ ಅವರು ತಿಳಿಸಿದರು.