
ಉಡುಪಿಯ ಮಲ್ಪೆಯ ದಿವ್ಯ ತೀರ್ಥಕ್ಷೇತ್ರವಾದ ಶ್ರೀ ವಡಭಾಂಡೇಶ್ವರ ದೇವಸ್ಥಾನಕ್ಕೆ ಭಕ್ತಿರಥಯಾತ್ರೆ ಏಪ್ರಿಲ್ 6, 2025 (ಭಾನುವಾರ) ಸಂಜೆ 7 ಗಂಟೆ ಸುಮಾರಿಗೆ ಆಗಮಿಸುತ್ತಿದೆ.
ಜಗದ್ಗುರು ಮಧ್ವಾಚಾರ್ಯರ ಮಹಿಮೆಯನ್ನು ಪ್ರತಿಬಿಂಬಿಸುವ ಈ ಕ್ಷೇತ್ರಕ್ಕೆ ಭಕ್ತಿರಥಯಾತ್ರೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ವಡಭಾಂಡೇಶ್ವರ ದೇವಾಲಯದ ಆಸುಪಾಸಿನ ನಾಗರಿಕರು, ಭಕ್ತಾಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಭಜನಾ ಮಂಡಳಿಗಳ ಸದಸ್ಯರು ಈ ಧಾರ್ಮಿಕ ಸಂಭ್ರಮದಲ್ಲಿ ಭಾಗವಹಿಸಿ, ರಥಯಾತ್ರೆಯನ್ನು ವಡಭಾಂಡೇಶ್ವರವನ್ನು ಸಂಪರ್ಕಿಸುವ ಮುಖ್ಯರಸ್ತೆ ಬಳಿ ಪುಷ್ಪಾರ್ಚನೆಗೈದು ಸ್ವಾಗತಿಸಿ , ದೇವಳದ ವರೆಗೆ ಮೆರವಣಿಗೆಯಲ್ಲಿ ಬರಮಾಡಿಕೊಂಡು ಮಂಗಳಾರತಿ ಬೆಳಗಿ ,ರಥಯಾತ್ರೆಯ ಸಂದೇಶ ಕೇಳಿ ,ಬಳಿಕ ಬೀಳ್ಕೊಟ್ಟು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಆಯೋಜಕರು ವಿನಂತಿಸಿದ್ದಾರೆ.

ಈ ಧಾರ್ಮಿಕ ಕಾರ್ಯಕ್ರಮವು ಶಾಸಕರಾದ ಯಶ್ಪಾಲ್ ಎ ಸುವರ್ಣ, ಭಕ್ತಿಸಿದ್ಧಾಂತೋತ್ಸವ ಸಮಿತಿ ಉಪಾಧ್ಯಕ್ಷರು, ಆಡಳಿತ ಮೊಕ್ತೇಸರರಾದ ಶ್ರೀನಿವಾಸ ಭಟ್ ಹಾಗೂ ಅರ್ಚಕ ವೃಂದ, ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ನಾಗರಾಜ ಮೂಲಿಗಾರ್, ನಗರ ಸಭಾ ಸದಸ್ಯ ಯೋಗೀಶ್ ಸಾಲ್ಯಾನ್ ಹಾಗೂ ಅಧ್ಯಕ್ಷರಾದ ಪ್ರಕಾಶ್ ಬಂಗೇರ ಮತ್ತು ಸರ್ವಸದಸ್ಯರು ಭಕ್ತವೃಂದ ವಡಭಾಂಡೇಶ್ವರ ದೇವಸ್ಥಾನ, ಇವರೆಲ್ಲರ ನೇತೃತ್ವದಲ್ಲಿ ಸಮಸ್ತ ಭಕ್ತರ ಸಹಕಾರದಿಂದ ವಿಜೃಂಭಣೆಯಿಂದ ನಡೆಯಲಿದೆ.