
ಉಡುಪಿ: ಕರ್ನಾಟಕ ಸ್ಟೇಟ್ ಟೈಲರ್ಸ ಅಸೋಸಿಯೇಷನ್ (ರಿ) ಕ್ಷೇತ್ರ ಸಮಿತಿ ಉಡುಪಿ ಇದರ ವತಿಯಿಂದ ಸಂಘಟನೆಯ ರಜತ ಸಂಭ್ರಮದ ಪ್ರಯುಕ್ತ ಸ್ನೇಹ ಸಮ್ಮಿಲನ – ಪ್ರತಿಭಾ ಪುರಸ್ಕಾರ ಹಾಗೂ ಮಹಾಸಭೆಯು ತಾ-20/7/25ರಂದು ಬೆಳಿಗ್ಗೆ 10ಗಂಟೆಗೆ ಉಡುಪಿ ಜಗನ್ನಾಥ ಸಭಾ ಭವನದಲ್ಲಿ ಶ್ರೀ ಸುರೇಶ್ ಪಾಲನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ದಯಾನಂದ ಪ್ರಭು ಹಿರಿಯಡಕ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು . ವರದಿ,ಲೆಕ್ಕ-ಪತ್ರ ಮಂಡಿಸಿ ಅನುಮೋದನೆ ಪಡೆಯಲಾಯಿತು . ನಂತರ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಬಿ.ಕೆ.ಶ್ರೀನಿವಾಸ್ ನೂತನ ಸಮಿತಿಯನ್ನು ರಚಿಸಿದರು.ಅಧ್ಯಕ್ಷರಾಗಿ ಸುರೇಶ್ ಪಾಲನ್ ಪುನರಾಯ್ಕೆಯಾದರು. ಶ್ರೀ ಬಾಲಕೃಷ್ಣ ನಾಯ್ಕ್ ಪ್ರಧಾನ ಕಾರ್ಯದರ್ಶಿಯಾಗಿ ,ಶ್ರೀ ದಯಾನಂದ ಪ್ರಭು ಕೋಶಾಧಿಕಾರಿಗಳಾಗಿ ಆಯ್ಕೆಯಾಗಿದ್ದು, ಜೊತೆ ಕಾರ್ಯದರ್ಶಿಗಳಾಗಿ ಸಾವಿತ್ರಿ ಪಾಲ್ ಹಾಗೂ ಶ್ರೀಮತಿ ಬೇಬಿ , ಉಪಾಧ್ಯಕ್ಷರಾಗಿ ಶ್ರೀ ವಾಸು ಆಚಾರ್ಯ, ಶ್ರೀಮತಿ ಮೀನಾಕ್ಷಿ ಆಚಾರ್ಯ, ಶ್ರೀಮತಿ ಸುಲತ ಸೋನ್ಸ್,ಸಂಘಟನಾ ಕಾರ್ಯದರ್ಶಿಗಳಾಗಿ ಹರಿಶ್ಚಂದ್ರ ಆಚಾರ್ಯ , ಶೇಖರ್ ಬಂಢಾರಿ, ಸುಭಾಷ್ ಮಲ್ಪೆ, ಅಚ್ಚುತ ಆಚಾರ್ಯ, ಸುನೀತಾ ಜಯಕರ್, ಸತೀಶ್ ಸಂತೆಕಟ್ಟೆ, ಸುಜಾತಾ ಆಚಾರ್ಯ, ಉಡುಪಿ ಕ್ಷೇತ್ರ ಸಮಿತಿಯಿಂದ ಜಿಲ್ಲಾ ಸಮಿತಿಗೆ ಚುನಾಯಿತ ಪ್ರತಿನಿಧಿಗಳಾಗಿ ಶ್ರೀ ದಯಾನಂದ ಕೋಟ್ಯಾನ್ ಕೊರಂಗ್ರಪಾಡಿ, ಶ್ರೀ ಕೆ.ರಾಮಚಂದ್ರ, ಶ್ರೀ ಗುರು ರಾಜ್ M ಶೆಟ್ಟಿ, ಶ್ರೀಮತಿ ಉಷಾ ಸೇರಿಗಾರ್ ಮತ್ತು ಈಶ್ವರ ಸೇರಿಗಾರ್ ಆಯ್ಕೆಯಾಗಿರುತ್ತಾರೆ. 10ಹಾಗೂ12ನೇ ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ 16 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸ್ನೇಹ ಸಮ್ಮಿಲನದ ಅಂಗವಾಗಿ 25 ವರ್ಷಗಳಿಂದ ಸಂಘಟನೆಯಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಗೌರವದಿಂದ ಸನ್ಮಾನಿಸಲಾಯಿತು. ಉತ್ತಮ ಸಂಘಟನಾ ಚತುರರಾದ ರಾಜ್ಯ ಸಮಿತಿಯ ಮಾಜಿ ಕೋಶಾಧಿಕಾರಿ ಶ್ರೀ ಅಬ್ದುಲ್ ಖಾದರ್ ಮಾತನಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡು ಸಂಘಟನೆಯ ಅವಶ್ಯಕತೆಯ ಬಗ್ಗೆ ವಿವರಿಸಿದರು.

ಉಡುಪಿ ಜಿಲ್ಲಾ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಶ್ರೀ ವಿಠ್ಠಲ ಶೆಟ್ಟಿ ಯವರು ಮಾತನಾಡಿ 2000 ನೇ ಇಸವಿಯಲ್ಲಿ ಉಡುಪಿ ಕ್ಷೇತ್ರ ಸಮಿತಿಯು ರಚನೆಯಾಯಿತು.ಅಂದು ಉಡುಪಿಯ ಶ್ಯಾಂ ಕಾಂಪ್ಲೆಕ್ಸ್ ನಲ್ಲಿ ಅಂದಿನ ಪ್ರಸಿದ್ಧ ಟೈಲರ್ ಆಗಿದ್ದ ಶ್ರೀ ದಿ.ಶ್ಯಾಂ ಶೆಟ್ಟಿ ಯವರು ದೀಪ ಬೆಳಗಿಸಿ ಉದ್ಘಾಟಿಸಿದ್ದರು . ಸ್ಥಾಪಕ ಅಧ್ಯಕ್ಷರಾಗಿ ಶ್ರೀ ರಾಮಕೃಷ್ಣ ನಾಯಕ್ (ಆರ್.ಕೆ. )ಯವರು ಆಯ್ಕೆಯಾದರು ಎನ್ನುತ್ತಾ ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡರು.ಉಡುಪಿ ಕ್ಷೇತ್ರ ಸಮಿತಿಯ ಮಾಜಿ ಅಧ್ಯಕ್ಷರಾಗಿ , ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಶ್ರೀಮತಿ ಸಾವಿತ್ರಿ .ಟಿ. ಸಾಲ್ಯಾನ್ ರಾಜ್ಯ ಸಮಿತಿಯ ಕೋಶಾಧಿಕಾರಿ ಶ್ರೀ ಕೆ. ರಾಮಚಂದ್ರ, ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಶ್ರೀ ಗುರು ರಾಜ್ ಎಂ ಶೆಟ್ಟಿ, ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ದಯಾನಂದ ಕೋಟ್ಯಾನ್, ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಬಿ.ಕೆ ಶ್ರೀನಿವಾಸ್,ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀ ಡಾ.ವಿಷ್ಣುಮೂರ್ತಿ ಪ್ರಭು ಸಹ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು , ಹಲವಾರು ಉಪಯುಕ್ತ ಮಾಹಿತಿಗಳನ್ನು ನೀಡಿದರು. ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ದಯಾನಂದ ಕೋಟ್ಯಾನ್ ಮಾತನಾಡಿ ಆಗಸ್ಟ್ 10ರಂದು ಉಡುಪಿ ಜಿಲ್ಲಾ ಸಮಾವೇಶವು ಉಡುಪಿ ಕ್ರಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ.ಅದರ ಪೂರ್ವ ತಯಾರಿ ಕುರಿತು ವಿವರಿಸಿ ಕರಪತ್ರವನ್ನು ಬಿಡುಗಡೆಗೊಳಿಸಿದರು. ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ದಯಾನಂದ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಕೋಶಾಧಿಕಾರಿ ಬಾಲಕೃಷ್ಣ ನಾಯ್ಕ್ ವಂದಿಸಿದರು.