ಡಿ. 22ರಂದು ಉಡುಪಿಯಲ್ಲಿ ರಾಜ್ಯಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಬೆಲ್ಟ್ ಕುಸ್ತಿ ಪಂದ್ಯಾಟ

Date:

spot_img

ಉಡುಪಿ : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು ಉಪನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ, ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು, ಪ್ರಾಂಶುಪಾಲರ ಸಂಘ ಹಾಗೂ ತ್ರಿಷಾ ವಿದ್ಯಾ ಪದವಿಪೂರ್ವ ಕಾಲೇಜು ಕಟಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 22. 12 . 2025 ರಂದು ಮಹಾತ್ಮ ಗಾಂಧೀ ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡು ಉಡುಪಿ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯಮಟ್ಟದ ಬೆಲ್ಟ್ ಕುಸ್ತಿ ಪಂದ್ಯಾಟ ನಡೆಯಲಿದೆ.

ಈ ರಾಜ್ಯಮಟ್ಟದ ಪಂದ್ಯಾಟವನ್ನು ಶ್ರೀಮತಿ ಲಕ್ಷ್ಮಿ ಆರ್ ಹೆಬ್ಬಾಳ್ಕರ್ ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಇವರ ಘನ ಉಪಸ್ಥಿತಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಮಾನ್ಯ ಶ್ರೀ ಮಧು ಎಸ್ ಬಂಗಾರಪ್ಪರವರು ಉದ್ಘಾಟಿಸಲಿರುವರು. ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಮಾನ್ಯ ಶಾಸಕರು ಕಾಪು ವಿಧಾನಸಭಾ ಕ್ಷೇತ್ರ ಇವರು ಅಧ್ಯಕ್ಷತೆ ವಹಿಸಲಿರುವರು. ಶ್ರೀ ಕೋಟಾ ಶ್ರೀನಿವಾಸ್ ಪೂಜಾರಿ ಮಾನ್ಯ ಸಂಸದರು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ , ಶ್ರೀ ಬಿ ವೈ ರಾಘವೇಂದ್ರ ಮಾನ್ಯ ಸಂಸದರು ಶಿವಮೊಗ್ಗ ಲೋಕಸಭಾ ಕ್ಷೇತ್ರ ,ಶ್ರೀ ವಿ ಸುನಿಲ್ ಕುಮಾರ್ ಮಾನ್ಯ ಶಾಸಕರು ಕಾರ್ಕಳ ವಿಧಾನಸಭಾ ಕ್ಷೇತ್ರ, ಶ್ರೀ ಯಶ್ ಪಾಲ್ ಎ ಸುವರ್ಣ ಮಾನ್ಯ ಶಾಸಕರು ಉಡುಪಿ ವಿಧಾನಸಭಾ ಕ್ಷೇತ್ರ, ಶ್ರೀ ಗುರುರಾಜ್ ಶೆಟ್ಟಿ ಮಾನ್ಯ ಶಾಸಕರು ಬೈಂದೂರು ವಿಧಾನಸಭಾ ಕ್ಷೇತ್ರ, ಶ್ರೀ ಕಿರಣ್ ಕುಮಾರ್ ಕೊಡುಗೆ ಮಾನ್ಯ ಶಾಸಕರು ಕುಂದಾಪುರ ವಿಧಾನಸಭಾ ಕ್ಷೇತ್ರ, ಶ್ರೀ ಎಸ್ ಎಲ್ ಭೋಜೇಗೌಡ ಮಾನ್ಯ ಶಾಸಕರು ವಿಧಾನ ಪರಿಷತ್ , ಡಾ. ಧನಂಜಯ್ ಸರ್ಜಿ ಮಾನ್ಯ ಶಾಸಕರು ವಿಧಾನ ಪರಿಷತ್, ಶ್ರೀ ಕಿಶೋರ್ ಕುಮಾರ್ ಪುತ್ತೂರು ಮಾನ್ಯ ಶಾಸಕರು ವಿಧಾನ ಪರಿಷತ್ , ಶ್ರೀ ಎಂ ಎ ಗಪೂರ್ ಮಾನ್ಯ ಅಧ್ಯಕ್ಷರು ಕರಾವಳಿ ಅಭಿವೃದ್ಧಿ ಮಂಡಳಿ ಮಂಗಳೂರು , ಶ್ರೀ ದಿನಕರ್ ಹೇರೂರು ಮಾನ್ಯ ಅಧ್ಯಕ್ಷರು ನಗರಾಬಿವ್ರದ್ಧಿ ಪ್ರಾಧಿಕಾರ ಉಡುಪಿ, ಶ್ರೀ ಅಶೋಕ್ ಕುಮಾರ್ ಕೊಡವೂರು ಮಾನ್ಯ ಅಧ್ಯಕ್ಷರು ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಇವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿರುವರು. ಶ್ರೀಮತಿ ರೋಹಿಣಿ ಸಿಂಧೂರಿ ದಾಸರು ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಎಮ್ ಎಸ್ ಎಮ್ ಇ ಮತ್ತು ಗಣಿ) ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು , ಶ್ರೀಮತಿ ರಶ್ಮಿ ಮಹೇಶ್ ಮಾನ್ಯ ಪ್ರಧಾನ ಕಾರ್ಯದರ್ಶಿಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ , ಶ್ರೀಮತಿ ಸ್ವರೂಪಾ.ಟಿ.ಕೆ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ದಂಡಾಧಿಕಾರಿಗಳು ಶ್ರೀ ಭರತ್ ಎಸ್ .ಮಾನ್ಯ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಶ್ರೀ ಪ್ರತೀಕ್ ಬಾಯಲ್ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತ್ ಉಡುಪಿ , ಶ್ರೀ ಹರಿರಾಮ್ ಶಂಕರ್ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು , ಶ್ರೀ ಸಿ. ಎ ಗೋಪಾಲ್ ಕೃಷ್ಣ ಭಟ್ ಸಂಸ್ಥಾಪಕರು ತ್ರಿಶಾ ಸಮೂಹ ಸಂಸ್ಥೆ ಕಟಪಾಡಿ ಇವರು ಉಪಸ್ಥಿತರಿರುವರು.

ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯಮಟ್ಟದ ಬೆಲ್ಟ್ ಕುಸ್ತಿ ಪಂದ್ಯಾಟ ಉಡುಪಿಯಲ್ಲಿ ಪ್ರಪ್ರಥಮವಾಗಿ ಜರುಗಲಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳಲಿರುವರು. ಬಾಲಕಿಯರ ವಿಭಾಗದಲ್ಲಿ ಆರು ಹಂತದಲ್ಲಿ ಹಾಗೂ ಬಾಲಕರ ವಿಭಾಗದಲ್ಲಿ ಎಂಟು ಹಂತದಲ್ಲಿ ಸ್ಪರ್ಧೆಗಳು ನಡೆಯಲಿವೆ.

ಮಧ್ಯಾಹ್ನ ನಡೆಯುವ ಸಮಾರೋಪ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಮಾನ್ಯ ಶಾಸಕರು ಕಾಪು ವಿಧಾನಸಭಾ ಕ್ಷೇತ್ರ ಇವರು ಅಧ್ಯಕ್ಷತೆ ವಹಿಸುವರು. ಶ್ರೀ ಸಿ. ಎ ಗೋಪಾಲ್ ಕೃಷ್ಣ ಭಟ್ ಸಂಸ್ಥಾಪಕರು ತ್ರಿಶಾ ಸಮೂಹ ಸಂಸ್ಥೆ ಕಟಪಾಡಿ, ಶ್ರೀಮತಿ ಟಿ ಎನ್ ಮಂಜುಳಾ ಸಹಾಯಕ ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ, ಡಾ. ರೋಷನ್ ಕುಮಾರ್ ಶೆಟ್ಟಿ ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶ್ರೀ ಕೆ ಸತ್ಯೇಂದ್ರ ಪೈ ಸಂಚಾಲಕರು ಎಸ್‌ವಿಎಸ್ ವಿದ್ಯಾವರ್ಧಕ ಸಂಘ ಕಟಪಾಡಿ ಮತ್ತು ಶ್ರೀ ಸಿ ಎ ಲೋಕೇಶ್ ಶೆಟ್ಟಿ ಚಾರ್ಟೆಡ್ ಅಕೌಂಟೆಂಟ್ ಉಡುಪಿ ಇವರು ಉಪಸ್ಥಿತರಿರುವರು.

ಪತ್ರಿಕಾಗೋಷ್ಠಿಯಲ್ಲಿ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಉಡುಪಿ ಜಿಲ್ಲೆ ಶ್ರೀ ಮಾರುತಿ, ಶ್ರೀಮಂಜುನಾಥ್ ಭಟ್ ಅಧ್ಯಕ್ಷರು ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ, ಶ್ರೀಹರಿಪ್ರಸಾದ್ ಪ್ರಾಂಶುಪಾಲರು ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು, ಶ್ರೀ ವರ್ಗಿಸ್ ಪಿ ನಿಕಟಪೂರ್ವ ಅಧ್ಯಕ್ಷರು ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ, ಶ್ರೀ ದಿನೇಶ್ ಕುಮಾರ್ ಕ್ರೀಡಾ ಸಂಯೋಜಕರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಶ್ರೀ ಸತೀಶ್ ಹೆಗ್ಡೆ ಅಧ್ಯಕ್ಷರು ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ , ಶ್ರೀ ಶರತ್ ರಾವ್ ದೈಹಿಕ ಶಿಕ್ಷಣ ಉಪನ್ಯಾಸಕರು ಎನ್ ಎಂ ಎ ಎಸ್ ಪಿಯು ಕಾಲೇಜ್ ನಿಟ್ಟೆ ಮುಂತಾದವರು ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗ್ಯಾಜೆಟ್ ಪ್ರಿಯರಿಗೆ ಗುಡ್ ನ್ಯೂಸ್: ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಶಿಯೋಮಿಯ ಪವರ್‌ಫುಲ್ 67W ಪವರ್ ಬ್ಯಾಂಕ್

ಶಿಯೋಮಿ ಭಾರತದಲ್ಲಿ ಹೊಸ 20000mAh ಪವರ್ ಬ್ಯಾಂಕ್ 5i ಬಿಡುಗಡೆ ಮಾಡಲಿದೆ. 67W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ ಈ ಸಾಧನದ ಸಂಪೂರ್ಣ ಮಾಹಿತಿ ಇಲ್ಲಿದೆ.

ನಟಿ ಐಶ್ವರ್ಯ ಸಿಂಧೋಗಿಗೆ ಸೈಬರ್ ಕಿರುಕುಳ: ಪೊಲೀಸ್ ದೂರು

ನಟಿ ಐಶ್ವರ್ಯ ಸಿಂಧೋಗಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಮೂಲಕ ಕಿರುಕುಳ ನೀಡಿದ ಕಿಡಿಗೇಡಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನ ವಿಶೇಷ – ರಾಷ್ಟ್ರೀಯ ಬಿ ಸಮ್‌ಒನ್ ದಿನ

ಜುಲೈ 21 ರ ರಾಷ್ಟ್ರೀಯ ಬಿ ಸಮ್‌ಒನ್ ದಿನವು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ಅವರ ರಕ್ಷಣೆಗೆ ವಿಶ್ವಾಸಾರ್ಹ ವ್ಯಕ್ತಿಯಾಗಲು ವಯಸ್ಕರಿಗೆ ಕರೆ ನೀಡುತ್ತದೆ.

ಅಡುಗೆಮನೆಯಲ್ಲೇ ಇದೆ ಮ್ಯಾಜಿಕ್ ಲಿಕ್ವಿಡ್: ಅಕ್ಕಿ ತೊಳೆದ ನೀರನ್ನು ಅಪ್ಪಿತಪ್ಪಿಯೂ ಚೆಲ್ಲಬೇಡಿ

ಅಕ್ಕಿ ತೊಳೆದ ನೀರು ಮತ್ತು ಗಂಜಿ ನೀರಿನಿಂದ ಪಡೆಯಬಹುದಾದ ಅದ್ಭುತ ಆರೋಗ್ಯ ಹಾಗೂ ಸೌಂದರ್ಯ ಪ್ರಯೋಜನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.