
ಉಡುಪಿ : ಛಲದಿಂದ ಸಾಧನೆಯ ಶಿಖರ ಏರಲು ಸಾಧ್ಯ ಎಂದು ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಅವರು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡು ಇಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) , ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ ಹಾಗೂ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು ಕಟಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ “ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಬೆಲ್ಟ್ ಕುಸ್ತಿ ಪಂದ್ಯಾಟ 2025-26”ನ್ನು ಉದ್ಘಾಟಿಸಿ ಮಾತನಾಡಿದರು. ಯಾವುದೇ ಸಾಧನೆ ಒಂದೇ ದಿನದಲ್ಲಿ ಆಗುವುದಿಲ್ಲ, ನಿರಂತರ ಪರಿಶ್ರಮ ಮತ್ತು ಛಲದಿಂದ ಮಾತ್ರ ಸಾಧನೆಯ ಶಿಖರ ಏರಲು ಸಾಧ್ಯ. ವಿದ್ಯಾರ್ಥಿಗಳು ತರಗತಿ ಶಿಕ್ಷಣದ ಜೊತೆ ಕ್ರೀಡೆಯಂತ ಹವ್ಯಾಸವನ್ನು ಬೆಳೆಸಿಕೊಂಡಾಗ ಹದಿಹರೆಯದ ವಯಸ್ಸಿನಲ್ಲಿ ದುಶ್ಚಟಗಳಿಂದ ದೂರ ಉಳಿಯಬಹುದು. ಎಂದು ಸ್ಪರ್ಧಾಳುಗಳಿಗೆ ಕಿವಿಮಾತು ಹೇಳಿದರು.

ಈ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ದಿನಕರ್ ಹೇರೂರು ಶುಭ ಹಾರೈಸಿದರು. ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಉಪ ನಿರ್ದೇಶಕರಾದ ಮಾರುತಿ, ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಶ್ರೀಸಿ.ಎ ಗೋಪಾಲಕೃಷ್ಣ ಭಟ್, ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ ಅಧ್ಯಕ್ಷರಾದ ಮಂಜುನಾಥ ಭಟ್ (ಪ್ರಾಂಶುಪಾಲರು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ), ಕಾರ್ಯದರ್ಶಿಗಳಾದ ಶ್ರೀ ರಮೇಶ್ ಎಸ್ ಸಿ.(ಪ್ರಾಂಶುಪಾಲರು ಭುವನೇಂದ್ರ ಪ. ಪೂ ಕಾಲೇಜ್ ಕಾರ್ಕಳ) ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಹರಿಪ್ರಸಾದ್ , ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವದ ಕ್ರೀಡಾ ಸಂಚಾಲಕರಾದ ಶ್ರೀ ದಿನೇಶ್ ಕುಮಾರ್ ಎ . ಪದವಿ ಪೂರ್ವ ಕಾಲೇಜು, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷರಾದ ಶ್ರೀ ಜೀವನ್ ಕುಮಾರ್ ಶೆಟ್ಟಿ, ಜಿಲ್ಲಾಧ್ಯಕ್ಷರಾದ ಶ್ರೀ ದಿನೇಶ್ ಹೆಗ್ಡೆ , ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವೀಕ್ಷಕರಾದ ಶ್ರೀ ಶ್ರೀನಿವಾಸ್ , ರಾಜ್ಯ ಬೆಲ್ಟ್ ಕುಸ್ತಿ ಫೆಡರೇಷನ್ ಉಪಾಧ್ಯಕ್ಷರಾದ ಶ್ರೀ ಅಲ್ತಾಫ್ ಉಪಸ್ಥಿತರಿದ್ದರು.
ಸಮಾರೋಪ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ
ಮಧ್ಯಾಹ್ನ ನಡೆದ ಸಮಾರೋಪ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿ ಮಂಗಳೂರು ಅಧ್ಯಕ್ಷರಾದ ಶ್ರೀ ಎಮ್ ಎ. ಗಪೂರ್ ಕರಾವಳಿಯ ಭಾಗದಲ್ಲಿ ಹೆಚ್ಚು ಪ್ರಚಲಿತದಲ್ಲಿರದ ಬೆಲ್ಟ್ ಕುಸ್ತಿ ರಾಜ್ಯಮಟ್ಟದ ಪಂದ್ಯಾಟವನ್ನು ಉಡುಪಿಯಲ್ಲಿ ಆಯೋಜಿಸುವುದರಿಂದ ಈ ಭಾಗದಲ್ಲಿ ಬೆಲ್ಟ್ ಕುಸ್ತಿಯನ್ನು ಇನ್ನಷ್ಟು ಪ್ರಚುರ ಪಡಿಸಲು ಸಹಕಾರಿಯಾಗಲಿದೆ ಅದಕ್ಕಾಗಿ ಆಯೋಜಕರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು. ಶ್ರೀ ಮಾರುತಿ ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧ್ಯಕ್ಷತೆ ವಹಿಸಿದ್ದರು.

ಬಾಲಕರ ವಿಭಾಗದಲ್ಲಿ ಚಾಂಪಿಯನ್ ಚಿಕ್ಕೋಡಿ ಜಿಲ್ಲೆ ಹಾಗೂ ಬಾಲಕಿಯರ ವಿಭಾಗದಲ್ಲಿ ಉಡುಪಿ ಜಿಲ್ಲೆ ಚಾಂಪಿಯನ್ ಆಗಿ ಹೊರಹೊಮ್ಮಿದರು. ಶ್ರೀ ಸಿ. ಎ ಗೋಪಾಲ್ ಕೃಷ್ಣ ಭಟ್ ಸಂಸ್ಥಾಪಕರು ತ್ರಿಶಾ ಸಮೂಹ ಸಂಸ್ಥೆ , ಡಾ. ರೋಷನ್ ಕುಮಾರ್ ಶೆಟ್ಟಿ ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ , ಶ್ರೀ ಕೆ ಸತ್ಯೇಂದ್ರ ಪೈ ಸಂಚಾಲಕರು ಎಸ್ ವಿ ಎಸ್ ವಿದ್ಯಾವರ್ಧಕ ಸಂಘ ಕಟಪಾಡಿ ಮತ್ತು ಶ್ರೀ ಸಿ ಎ ಲೋಕೇಶ್ ಶೆಟ್ಟಿ ಚಾರ್ಟೆಡ್ ಅಕೌಂಟೆಂಟ್ ಉಡುಪಿ ಶ್ರೀಮಂಜುನಾಥ್ ಭಟ್ ಅಧ್ಯಕ್ಷರು ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ, ಶ್ರೀವರ್ಗಿಸ್ ಪಿ ನಿಕಟಪೂರ್ವ ಅಧ್ಯಕ್ಷರು ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು, ಪ್ರಾಂಶುಪಾಲರ ಸಂಘ ಇವರುಗಳು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಬಹುಮಾನ ವಿತರಿಸಿದರು.
ಶ್ರೀ ದಿನೇಶ್ ಕುಮಾರ್ ಕ್ರೀಡಾ ಸಂಯೋಜಕರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಶ್ರೀ ಸತೀಶ್ ಹೆಗ್ಡೆ ಅಧ್ಯಕ್ಷರು ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ , ಶ್ರೀ ಶರತ್ ರಾವ್ ದೈಹಿಕ ಶಿಕ್ಷಣ ಉಪನ್ಯಾಸಕರು , ಎಎನ್ಎಂಎಸ್ ನಿಟ್ಟೆ ಪ ಪೂ ಕಾಲೇಜು, ಶ್ರೀನಿವಾಸ್ ವೀಕ್ಷಕರು ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ) ಬೆಂಗಳೂರು ಇವರು ಉಪಸ್ಥಿತರಿದ್ದರು . ಶ್ರೀಹರಿಪ್ರಸಾದ್ ಪ್ರಾಂಶುಪಾಲರು ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು, ಸ್ವಾಗತಿಸಿ , ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ ಕ್ರೀಡಾ ಸಂಚಾಲಕರಾದ ಶ್ರೀ ಸಂತೋಷ್ ವಂದಿಸಿದರು. ತ್ರಿಷಾ ವಿದ್ಯಾ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ಧೀರಜ್ ಕಾರ್ಯಕ್ರಮ ನಿರೂಪಿಸಿದರು.



































