spot_img

ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕದ ಪ್ರೌಢಶಾಲಾ ವಿಭಾಗದ ನೂತನ ಎನ್‌ಸಿಸಿ ನೇವಲ್ ಘಟಕ ಉದ್ಘಾಟನೆ

Date:

spot_img

ಹಿರಿಯಡ್ಕ : ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ ಇಲ್ಲಿಯ ಪ್ರೌಢಶಾಲಾ ವಿಭಾಗದ ನೂತನ ಎನ್‌ಸಿಸಿ ನೇವಲ್ ಘಟಕವನ್ನು ಎನ್ ಸಿ ಸಿ ನೆವೆಲ್ ಕಮಾಂಡರ್ ಶ್ರೀ ಅಶ್ವಿನ್ ಎಂ ರಾವ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ “ಸಂಘಟನೆ ಮತ್ತು ಶಿಸ್ತು ಎನ್‌ಸಿಸಿಯ ಮುಖ್ಯ ಧ್ಯೇಯ, ಎನ್‌ಸಿಸಿ ಸೇರುವುದರಿಂದ ಸಾಮಾಜಿಕವಾಗಿ, ರಾಷ್ಟ್ರೀಯವಾದಿಯಾಗಿ ದೇಶದ ಉತ್ತಮ ನಾಗರಿಕರಾಗಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಕಠಿಣ ಪರಿಶ್ರಮದಿಂದ ಉನ್ನತಿ ಸಾಧಿಸಬಹುದು” ಎಂದು ಹೇಳಿದರು.

ಕೃಷಿ ಅರ್ಥಶಾಸ್ತ್ರಜ್ಞರಾದ ಡಾ ಎನ್‌ ಎಸ್‌ ಶೆಟ್ಟಿ ಅವರು ಮಾತನಾಡಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನೂತನ ಎನ್ಎಸ್ಎಸ್ ಘಟಕ ಆರಂಭವಾಗಿರುವುದು ವಿದ್ಯಾರ್ಥಿಗಳಲ್ಲಿ ಇನ್ನೂ ಹೆಚ್ಚು ಶಿಸ್ತು ಮೂಡಿಸಲು , ದೇಶಾಭಿಮಾನ ಬೆಳೆಸಲು ಅನುಕೂಲಕರವಾಗಲಿದೆ ಎಂದರು.

ನೆವೆಲ್ ಕಮಾಂಡಿಂಗ್ ಆಫೀಸರ್ ಶ್ರೀ ಅಶ್ವಿನಿ ಎಂ ರಾವ್ ಇವರು ಎನ್ ಸಿ ಸಿ ದ್ವಜವನ್ನು ಸಂಸ್ಥೆಗೆ ಹಸ್ತಾಂತರಿಸಿದರು‌. ನೆವೆಲ್ ಕಮಾಂಡರ್ ಶ್ರೀ ಎಂ ಎ ಮುಲ್ತಾನಿ ಮತ್ತು ಪಿ ಐ ಸ್ಟಾಪ್ ಶ್ರೀ ಅನಿಲ್ ದಾಸ್ ಇವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಮಂಜುನಾಥ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ಅಮೃತ ಮಹೋತ್ಸವದ ಹೊಸ್ತಿಲಿನಲ್ಲಿರುವ ಈ ಸಂಸ್ಥೆಯಲ್ಲಿ ಎನ್ ಸಿ ಸಿ ಘಟಕ ಆರಂಭವಾಗಲು ಸಹಕರಿಸಿದ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರನ್ನು, ಹಳೆ ವಿದ್ಯಾರ್ಥಿ ಸೈನಿಕರಾದ ಶ್ರೀ ಹರಿಕೃಷ್ಣ ಇವರನ್ನು ಅಭಿನಂದಿಸಿದರು.

ಈ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಬಿ.ಎಲ್ ವಿಶ್ವಾಸ್, ಸದಸ್ಯರಾದ ಶ್ರೀ ಅಶೋಕ್ ಜೋಗಿ ,ಶ್ರೀ ಮುರಳಿಧರ ಹಾಲಂಬಿ, ಶ್ರೀ ನಿತ್ಯಾನಂದ ನಾಯಕ್,ಶ್ರೀ ವಿಜಯಶೆಟ್ಟಿ , ಶ್ರೀಮತಿ ಜ್ಯೋತಿ ಪ್ರಭು ,ಶ್ರೀ ದೇವರಾಜ್ ಶಾಸ್ತ್ರಿ ,ಶ್ರೀಮತಿ ಲಕ್ಷ್ಮಿ ಶೆಟ್ಟಿಗಾರ್, ಶ್ರೀಮತಿ ನಿಷಿತಾ ಶೆಟ್ಟಿ , ಶ್ರೀಮತಿ ಸುಬ್ರಮ್ಮಣ್ಯ ರಾವ್ ಉಪಸ್ಥಿತರಿದ್ದರು.‌

ಹಿರಿಯ ಅಧ್ಯಾಪಕರಾದ ಶ್ರೀ ವಿಜಯ್ ಕುಮಾರ್ ಸ್ವಾಗತಿಸಿ, ಎನ್‌ಸಿಸಿ ಘಟಕದ ಉಸ್ತುವಾರಿ ಉಪನ್ಯಾಸಕರಾದ ಶ್ರೀ ಮಹೇಶ್ ಕೊಟಾರಿ ವಂದಿಸಿದರು. ಅಧ್ಯಾಪಕರಾದ ಶ್ರೀ ರವೀಂದ್ರ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಹಣ್ಣಿನ ಗಿಡ ನೆಡುವುದರ ಮೂಲಕ ನೂತನ ಘಟಕಕ್ಕೆ ನೆವೆಲ್ ಕಮಾಂಡಿಂಗ್ ಆಫೀಸರ್ ಶ್ರೀ ಅಶ್ವಿನಿ ಎಂ ರಾವ್ ಇವರು ಚಾಲನೆ ನೀಡಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಾರ್ಕಳದಲ್ಲಿ ಬಡ್ಡಿ ವ್ಯಾಪಾರಿ ಹತ್ಯೆ, ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಬಂಧನ

ಕಾರ್ಕಳದ ಕುಂಟಲ್ಪಾಡಿಯಲ್ಲಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ನಡೆದಿದ್ದು, ಈ ಸಂಬಂಧ ಬಸ್ ಚಾಲಕನನ್ನು ಬಂಧಿಸಲಾಗಿದೆ.

ಉಡುಪಿ ಉಚ್ಚಿಲ ದಸರಾ ಆಮಂತ್ರಣ ಪತ್ರಿಕೆ ಬಿಡುಗಡೆ

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಆಶ್ರಯದಲ್ಲಿ ಜರಗಲಿರುವ 4ನೇ ವರ್ಷದ ಉಡುಪಿ ಉಚ್ಚಿಲ ದಸರಾ 2025 ಉತ್ಸವದ ಆಮಂತ್ರಣ ಪತ್ರಿಕೆಯನ್ನು ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್ ಅವರು ಬಿಡುಗಡೆಗೊಳಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಾಲ್ಕು ಬಾರಿ ಕರೆ ಮಾಡಿದರೂ ಉತ್ತರಿಸದ ಮೋದಿ: ವರದಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇತ್ತೀಚಿನ ವಾರಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕನಿಷ್ಠ ನಾಲ್ಕು ಬಾರಿ ಕರೆ ಮಾಡಿದ್ದಾರೆ. ಆದರೆ, ಮೋದಿ ಕರೆಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಜರ್ಮನ್‌ನ ಪ್ರಮುಖ ಪತ್ರಿಕೆಯೊಂದು ವರದಿ ಮಾಡಿದೆ.

ಬಾಳೆ ಹೂವು: ಆರೋಗ್ಯಕ್ಕೆ ಅಮೃತ, ರುಚಿಗೆ ರಾಜ

ರಂಭಾ ಪುಷ್ಪ, ಕದಲೀ ಪುಷ್ಪ ಎಂದು ಕರೆಯಲ್ಪಡುವ ಬಾಳೆ ಕುಂಡಿಗೆಯು ಔಷಧೀಯ ಗುಣಗಳನ್ನು ಹೊಂದಿದೆ.