
ಕಾರ್ಕಳ: ಇಂಚರ ಸೇವಾ ಬಳಗ ರಿ. ನಂದಳಿಕೆ ಇದರ 3ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮ ಇಂದು ಕಾರ್ಕಳ ಅಯ್ಯಪ್ಪನಗರದಲ್ಲಿರುವ ವಿಜೇತ ವಿಶೇಷ ಶಾಲೆಯಲ್ಲಿ ನೆರವೇರಿತು.
ಸಂಸ್ಥೆಯ ವತಿಯಿಂದ ರಘು ಪೂಜಾರಿ ಹಾಗೂ ಶಂಭು ಹರಿಜನ ಇವರಿಗೆ ಸಹಾಯ ಹಸ್ತವನ್ನು ನೀಡಿದರು.
ವಿಜೇತ ವಿಶೇಷ ಶಾಲಾ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಜೆಸಿಐ ಬೆಳ್ಮಣ್ ಇದರ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ, ಗ್ರಾಮ ಪಂಚಾಯತ್ ಬೋಳ ಇದರ ಮಾಜಿ ಅಧ್ಯಕ್ಷರಾದ ಬೋಳ ಸತೀಶ್ ಪೂಜಾರಿ,ಇಂಚರ ಸೇವಾ ಬಳಗ ರಿ. ನಂದಳಿಕೆ ಇದರ ಸಂಸ್ಥಾಪಕರಾದ ದೀಕ್ಷಿತ್ ದೇವಾಡಿಗ, ಶೈಲೇಶ್ ಕೋಟ್ಯಾನ್, ಅಧ್ಯಕ್ಷರಾದ ಸಂತೋಷ್ ಪೂಜಾರಿ, ಕಾರ್ಯದರ್ಶಿಯಾದ ರವೀಂದ್ರ ಕುಲಾಲ್, ಪ್ರಖ್ಯಾತ ನ್ಯಾಯವಾದಿಗಳಾದ ಸರಿತಾ ರವೀಂದ್ರ ಶೆಟ್ಟಿ, ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ. ಕಾಂತಿ ಹರೀಶ್, ಇಂಚರ ಸೇವಾ ಬಳಗ ರಿ. ನಂದಳಿಕೆ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಶೇಷ ಶಿಕ್ಷಕಿ ಹರ್ಷಿತಾ ಕಿರಣ್ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಕಾಂತಿ ಹರೀಶ್ ಸ್ವಾಗತಿಸಿ, ವಿಶೇಷ ಶಿಕ್ಷಕಿ ಶ್ವೇತಾ ವಂದಿಸಿದರು.




