
ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘವು 2024-25 ನೇ ಸಾಲಿನಲ್ಲಿ 175.33 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿದ್ದು ಕಳೆದ ಸಾಲಿಗಿಂತ ಶೇ. 19.16 ಏರಿಕೆ ಕಂಡಿದೆ. 60.66 ಲಕ್ಷ ರೂ. ಲಾಭ ಗಳಿಸಿದೆ. ಎಂದು ಸಂಘದ ಅಧ್ಯಕ್ಷ ಶ್ರೀ ಸಂತೋಷ್ ರಾವ್ ಇವರು ತಿಳಿಸಿದ್ದಾರೆ. 24 ವರ್ಷಗಳಿಂದ ಸೇವೆ ನೀಡುತೀರುವ ಸಹಕಾರ ಸಂಘವು 2024- 25ರ ಆರ್ಥಿಕ ವರ್ಷಾಂತ್ಯಕ್ಕೆ 14957 ಸದಸ್ಯರಿಂದ 33.03 ಲಕ್ಷ ರೂ ಬಂಡವಾಳ ಹೊಂದಿದೆ ಎಂದು ಸಂಘದ ಅಧ್ಯಕ್ಷರು ಮಾಹಿತಿ ನೀಡಿರುತ್ತಾರೆ.
ಸಂಘವು ಒಟ್ಟು 38.45 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು ಕಳೆದ ಸಾಲಿಗಿಂತ ಶೇ. 30.01 ಏರಿಕೆಯಾಗಿದೆ. ಸದಸ್ಯರಿಗೆ ಎಲ್ಲಾ ರೀತಿಯ ಸಾಲ ವಿತರಿಸುತ್ತಿದ್ದು 31.82 ಕೋಟಿ ರೂ. ಸಾಲ (ಹೊರ ಬಾಕಿ) ನೀಡಲಾಗಿದೆ. ಕಳೆದ ಸಾಲಿಗಿಂತ ಶೇ. 24.43 ಏರಿಕೆ ಕಂಡಿದೆ. 3.18 ಕೋಟಿ ರೂ. ನಿಧಿಗಳು 5.50 ಕೋಟಿ ರೂ. ಹೂಡಿಕೆಗಳಿದ್ದು 44.13 ಕೋಟಿ ರೂ. ದುಡಿಯುವ ಬ೦ಡವಾಳ ಹೊಂದಿದ್ದು ಕಳೆದ ಸಾಲಿಗಿಂತ ಶೇ. 27.43 ಏರಿಕೆ ಕಂಡಿದೆ. ಒಟ್ಟು 8 ಶಾಖೆಗಳನ್ನು ಹೊಂದಿದ್ದು ಈ ಪೈಕಿ ಕೇಂದ್ರ ಕಛೇರಿ ಮತ್ತು ಮುಖ್ಯ ಶಾಖೆ ಸ್ವಂತ ಕಛೇರಿ ಹೊಂದಿದ್ದು ವಾರ್ಷಿಕ ಸುಮಾರು 3 ಲಕ್ಷ ರೂ. ಗಳಷ್ಟು ಹಣವನ್ನು ಸಾಮಾಜಿಕ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾತಿದೆ ಎಂದು ತಿಳಿಸಿದ್ದಾರೆ.