


12-13 ರ ಶತಮಾನದ ಹೊಯ್ಸಳ ಏಕ ಶಿಲಾಕೃತಿಯಿಂದ ಕೂಡಿದ ಶ್ರೀ ಕೃಷ್ಣನ ಮೂರ್ತಿ ಮೂರ್ತಿಯ ಸುತ್ತಲಿನ ಪ್ರಭಾವಳಿಯ ಇಕ್ಕೆಲಗಳಲ್ಲಿ ದಶಾವತಾರದ ಚಿತ್ರಣ ಮಧ್ಯದಲ್ಲಿ ಸಿಂಹಮುಖ, ಪಾದದ ಮಧ್ಯದಲ್ಲಿ ಚಾಮರ ಕನೈಯರು ಪ್ರಭಾವಳಿಯ ಉಳಿದ ಭಾಗದಲ್ಲಿ ಗೋವುಗಳನ್ನು ಕೆತ್ತಲಾಗಿದೆ. ಇದೆಲ್ಲದರ ನಡುವೆ ಕಂಗೊಳಿಸುತ್ತಿರುವ ನಾಡಿನ ಆರಾಧ್ಯ ದೇವರು ಚೋಲ್ಪಾಡಿ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನ ಇದರ ಎದುರು ಭಾಗದ ನೂತನ ಸುತ್ತು ಪೌಳೆಯ ಶಿಲಾನ್ಯಾಸ ಕಾರ್ಯಕ್ರಮವು ಹಾಗೂ MRPL ಸಹಯೋಗದಿಂದ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ : 26- 04-2025 ರಂದು ನಡೆದಿರುತ್ತದೆ.
ಮೊದಲು ಶ್ರೀ ದೇವರಲ್ಲಿ ಪ್ರಾರ್ಥನೆಯನ್ನು ದೇವಸ್ಥಾನದ ಗೌರವ ಸಲಹೆಗಾರರಾದ ಶ್ರೀ ರಾಘವೇಂದ್ರ ಉಪಾಧ್ಯಾಯ ಪ್ರಧಾನ ಅರ್ಚಕರು ಮಹಾಲಕ್ಷ್ಮೀ ದೇವಸ್ಥಾನ ಉಚ್ಚಿಲ, ಇವರು ಸರ್ವರ ಗಣ್ಯರ ಸಮ್ಮುಖದಲ್ಲಿ ಶ್ರೀ ದೇವರ ಎದುರು ನಿಂತು ನೆರವೇರಿಸಿದರು.
ತದನಂತರ ಶಿಲಾನ್ಯಾಸದ ಶಿಲೆಗಳನ್ನು ಸನ್ಮಾನ್ಯ ಶ್ರೀ ವಿ.ಸುನೀಲ್ ಕುಮಾರ್, ಮಾನ್ಯ ಶಾಸಕರು ಕಾರ್ಕಳ ವಿಧಾನಸಭಾ ಕ್ಷೇತ್ರ ಇವರು ಹಾಗೂ ಶ್ರೀ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಶ್ರೀ ಎಂ.ಕೆ ವಿಜಯ್ ಕುಮಾರ್ ನ್ಯಾಯವಾದಿಗಳು ಕಾರ್ಕಳ, ಶ್ರೀ ಸುಂದರ ಹೆಗ್ಡೆ ಎಳ್ಳಾಡುಗುತ್ತು, ಶ್ರೀ ನವೀನ್ ಚಂದ್ರ ಶೆಟ್ಟಿ, ಹೊಟೇಲ್ ಶೀತಲ್ ಮಾಲಕರು ಕಾಬೆಟ್ಟು, MRPL ಮಂಗಳೂರು ಇದರ ಹಿರಿಯ ಅಧಿಕಾರಿ ಶ್ರೀ ಪ್ರದೀಪ್ ಕುಮಾರ್ ಇವರ ಸಮ್ಮುಖದಲ್ಲಿ ಭೂಮಿ ಪೂಜೆ ನಡೆಸಿ ನೆಲದಲ್ಲಿ ಇರಿಸಲಾಯಿತು.
ತದನಂತರ MRPL ಮಂಗಳೂರು ಇವರ ಸಹಯೋಗದಿಂದ ಸಾರ್ವಜನಿಕ ಭಕ್ತಾದಿಗಳ ಉಪಯೋಗಕ್ಕಾಗಿ ನಿರ್ಮಿಸಲಾದ “ಸಾರ್ವಜನಿಕ ಶೌಚಾಲಯ” ಇದನ್ನು ಲೋಕಾರ್ಪಣೆಗೊಳಿಸಲಾಯಿತು.
ನಂತರ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ಕ್ಷೇತ್ರದ ಶಾಸಕರಾದ ಶ್ರೀ ವಿ.ಸುನೀಲ್ ಕುಮಾರ್ ರವರು ದೀಪವನ್ನು ಪ್ರಜ್ವಲನೆ ಮಾಡುವುದರ ಮೂಲಕ ಪ್ರಾರಂಭಿಸಲಾಯಿತು. ನಾಡಿನ ಏಳಿಗೆಗಾಗಿ ನಾಡಿನ ಸುಭಿಕ್ಷೆಗಾಗಿ ಭಕ್ತಾದಿಗಳ ಅನುಕೂಲತೆಗಾಗಿ ಊರ ದೇವರ ಗುಡಿಗೋಪುರಗಳ ಪೂರ್ಣ ಕಟ್ಟಡ ಹಾಗೂ ಸೌಲಭ್ಯ ಅತ್ಯಗತ್ಯ ಸನಾತನ ಭಾರತದ ಪರಂಪರೆಯಲ್ಲಿ ದೇವರನ್ನು ಭಕ್ತಿ ಭಾವದಿಂದ ನಮಿಸಿ ಭಕ್ತರು ಕೃತಾರ್ಥರಾಗುತ್ತಾರೆ. ಮುಂದಿನ ದಿನದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯವು ಸುಗುಮವಾಗಿ ಸಾಗಲಿ ಎಂದು ಶುಭ ಹಾರೈಸಿದರು.
ಶ್ರೀಯುತ ರಾಘವೇಂದ್ರ ಉಪಾಧ್ಯಾಯ ಗೌರವ ಸಲಹೆಗಾರರಾಗಿ ದೇವಸ್ಥಾನದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಂತಹ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಅರ್ಚಕರು, ದೇವಸ್ಥಾನದ ಜೀರ್ಣೋದ್ಧಾರ ಹಾಗೂ ವರುಷದೊಳಗೆ ಬ್ರಹ್ಮಕಲಶೋತ್ಸವವನ್ನು ನೆರವೇರಿಸುವ ಬಗ್ಗೆ ವಿವರಣೆ ನೀಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಶ್ರೀ ಎಂ.ಕೆ ವಿಜಯಕುಮಾರ್ ನ್ಯಾಯವಾದಿಗಳು ಕಾರ್ಕಳ, ಶ್ರೀಮತಿ ರೆಯಹಮತ್ ಸ್ಥಳೀಯ ಪುರಸಭಾ ಸದಸ್ಯರು, ಕಾಬೆಟ್ಟು, ಶ್ರೀ ಸುಂದರ ಹೆಗ್ಡೆ ಎಳ್ಳಾಡುಗುತ್ತು ಶ್ರೀ ನವೀನ್ ಚಂದ್ರ ಶೆಟ್ಟಿ , ಮಾಲಕರು ಶೀತಲ್ ಬಾರ್, ಕಾಬೆಟ್ಟು, MRPL ಮಂಗಳೂರು ಇಲ್ಲಿಯ ಅಧಿಕಾರಿ ಶ್ರೀ ಪ್ರದೀಪ್ ಕುಮಾರ್, ಶ್ರೀ ಸಂಕೇತ್ ಉಪಾಧ್ಯಾಯ, ಅನುವಂಶಿಕ ಮೊಕೇಸರರು, ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನ ಕಾಬೆಟ್ಟು ಉಪಸ್ಥಿತರಿದ್ದರು.
ಶ್ರೀ ಮಾಧವ್ ಭಟ್ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ಸರ್ವರನ್ನು ಸ್ವಾಗತಿಸಿದರು. ಪ್ರಸ್ತಾವನೆ ನುಡಿಯನ್ನು ಶ್ರೀ ಸಂದೇಶ್ ಉಪಾಧ್ಯಾಯ ಮಾಡಿದರು, ಕಾರ್ಯದರ್ಶಿ ಶ್ರೀ ಸುಧೀರ್ ಶೆಟ್ಟಿಗಾರ್ ಧನ್ಯವಾದವನ್ನು ನೀಡಿದರು. ಕಾರ್ಯಕ್ರಮ ನಿರೂಪಣೆಯನ್ನು ಶಾರೀರಿಕ ಶಿಕ್ಷಣ ಶಿಕ್ಷಕ ಶ್ರೀ ಸಂಜಯ್ ಕುಮಾರ್ ಮಾಡಿದರು.