ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾತ್ಮಾ ಗಾಂಧೀಜಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ

Date:

spot_img

ದೇಶದಲ್ಲಿ ಸಮಾನತೆಯನ್ನು ಬಯಸಿದ್ದೇ ಗಾಂಧೀಜಿಯವರ ಹತ್ಯೆಗೆ ಕಾರಣವಾಯಿತು, ಶೂದ್ರ ಮತ್ತು ಅತ್ಯಂತ ತಳ‌ ಸಮುದಾಯದ ಜನರಿಗೆ ದೇವಸ್ಥಾನ ಪ್ರವೇಶ ನೀಡಬೇಕು, ಯಾವ ದೇವಸ್ಥಾನದಲ್ಲಿ ತಳ ಸಮುದಾಯದ ಜನರಿಗೆ ಪ್ರವೇಶವಿಲ್ಲವೋ ಅಂತಹ ದೇವಸ್ಥಾನಕ್ಕೆ ನಾನು ಹೋಗುವುದಿಲ್ಲ ಎನ್ನುವ ಜಾತಿ ವ್ಯವಸ್ಥೆಯ ವಿರುದ್ದದ ಸಮಾನತೆಯ ಪರವಾದ ಹೋರಾಟವೇ ಗಾಂಧಿ ವಿರೋಧಿಗಳ ಹುಟ್ಟಿಗೆ ಕಾರಣವಾಯಿತು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಅಭಿಪ್ರಾಯಪಟ್ಟರು ಅವರು ಇಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಿ ಮಾತನಾಡಿದರು.

ಹಿರಿಯ‌ ಕಾಂಗ್ರೆಸ್ ಮುಖಂಡ ಶೇಖರ್ ಮಡಿವಾಳ ಮಾತನಾಡಿ ಗಾಂಧಿ ಪ್ರತಿಪಾದಿಸಿ ತತ್ವ ಸಿದ್ದಾಂತಗಳು ಸರ್ವ ಕಾಲಕ್ಕೂ ಪ್ರಸ್ತುತ ಮತ್ತು ಆ ತತ್ವ ಸಿದ್ದಾಂತಗಳು ದೇಶದ ಅಭಿವೃದ್ಧಿಗೆ ಪೂರಕವಾಗಿವೆ ಈ ಸಿದ್ದಾಂತಗಳನ್ನು ಅನುಸರಿಸಿದರೆ ಮಾತ್ರವೇ ದೇಶ ಪ್ರಗತಿ ಕಾಣಲು ಸಾದ್ಯ ಎಂದು ದೇಶದ ಚುಕ್ಕಾಗಿ ಹಿಡಿದವರು ಮನಗಾಣಬೇಕು ಆ ಮೂಲಕವೇ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿರಲು ಸಾದ್ಯ ಎಂದರು.

ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ನಾಗಪ್ಪ ಮೇರ ಮಹನೀಯರ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿ ದೀಪ ಬೆಳಗಿ ಉದ್ಗಾಟಿಸಿ ಸಂಧರ್ಬೋಜಿತ ಮಾತನಾಡಿದರು.

ಈ ಸಂದರ್ಭದಲ್ಲಿ ಪುರಸಭೆಯ ಮಾಜಿ ಅಧ್ಯಕ್ಷರಾದ ಸುಬಿತ್ ಕುಮಾರ್, ಪ್ರತಿಮಾ ರಾಣೆ, ಸೀತಾರಾಮ್ , ರೆಹಮತ್ ಶೇಖ್, ಜಿಲ್ಲಾ ಕಾಂಗ್ರೇಸ್ ಉಪಾದ್ಯಕ್ಷ ಸುಧಾಕರ್ ಕೋಟ್ಯಾನ್, ಬ್ಲಾಕ್ ‌ಉಪಾದ್ಯಕ್ಷ ಪ್ರಭಾಕರ ಬಂಗೇರ ಬ್ಲಾಕ್ ಮಹಿಳಾ ಅಧ್ಯಕ್ಷೆ ಬಾನು ಭಾಸ್ಕರ್ ಪೂಜಾರಿ, ಪುರಸಭಾ ಸದಸ್ಯ ವಿವೇಕ್ ಶೆಣೈ, ಸೇವಾದಳ ಅದ್ಯಕ್ಷ ಅಬ್ದುಲ್ಲಾ ಸಾಣೂರು, ಅಲ್ಪಸಂಖ್ಯಾತ ಘಟಕದ ತನ್ವೀರ್ ತೆಳ್ಳಾರ್ ,ಭೂನ್ಯಾಯ ಮಂಡಲಿ ಸದಸ್ಯ ಸುನೀಲ್ ಭಂಡಾರಿ, ಗ್ಯಾರಂಟಿ ಸದಸ್ಯರಾದ ಹೇಮಂತ್, ಪಿಲಿಫ್ಸ್, ಯುವ ಕಾಂಗ್ರೆಸ್ ಮಂಜುನಾಥ್ ಜೋಗಿ, ಪ್ರಕಾಶ್ ಆಚಾರ್ಯ ಬ್ಲಾಕ್ ಪದಧಿಕಾರಿಗಳು ಉಪಸ್ಥಿತರಿದ್ದರು, ಜಾರ್ಜ್ ಕ್ಯಾಸ್ಟಲೀನೋ ಸ್ವಾಗತಿಸಿ, ರಮೇಶ್ ಪತೊಂಜಿಕಟ್ಟೆ ಧನ್ಯವಾದವಿತ್ತರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ನಿಮ್ಮ ಅಡುಗೆಮನೆಯಲ್ಲಿರುವ ಈ ಒಂದು ಎಣ್ಣೆ ನೂರಾರು ಕಾಯಿಲೆಗಳಿಗೆ ಮನೆಮದ್ದು: ಕ್ಯಾಸ್ಟರ್ ಆಯಿಲ್ ಬಳಸುವ ಸರಿಯಾದ ವಿಧಾನ ಇಲ್ಲಿದೆ.

ಹರಳೆಣ್ಣೆಯ ಆರೋಗ್ಯಕರ ಪ್ರಯೋಜನಗಳು, ಕೂದಲ ರಕ್ಷಣೆ ಮತ್ತು ಮಲಬದ್ಧತೆಗೆ ಇದನ್ನು ಬಳಸುವ ಸರಿಯಾದ ವಿಧಾನಗಳ ಕುರಿತು ಇಲ್ಲಿದೆ ಪೂರ್ಣ ಮಾಹಿತಿ.

ಉದ್ಯಮಿ ಸಂಪತ್‌ ಶೆಟ್ಟಿಗೆ ಪ್ರತಿಷ್ಠಿತ ಧರ್ಮಯೋಗಿ ಪುರಸ್ಕಾರ

ಗ್ರಾಮೀಣ ಉದ್ಯಮಿ ಮಂದಾರ್ತಿ ಸಂಪತ್ ಶೆಟ್ಟಿ ಅವರಿಗೆ ಮುದ್ರಾಡಿಯಲ್ಲಿ ಧರ್ಮಯೋಗಿ ಸನ್ಮಾನ ಪ್ರಶಸ್ತಿ ಘೋಷಣೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳದ 2 ಸೇತುವೆಗೆ 5 ಕೋಟಿ ಅನುದಾನ ಬಿಡುಗಡೆ

ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ನಾಡ್ಪಾಲು ಹಾಗೂ ಹೆರ್ಮುಂಡೆ ಸೇತುವೆ ನಿರ್ಮಾಣಕ್ಕೆ 5 ಕೋಟಿ ಅನುದಾನ ಮಂಜೂರಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ನೀಟ್ ಅಕ್ರಮ: ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಅಣ್ಣಾಮಲೈ

ನೀಟ್ ಪರೀಕ್ಷೆ ಸೋರಿಕೆ ಹಾಗೂ ಕೇಂದ್ರ ಸರ್ಕಾರದ ನಿಲುವನ್ನು ಮಾಜಿ ಬಿಜೆಪಿ ನಾಯಕ ಅಣ್ಣಾಮಲೈ ತೀವ್ರವಾಗಿ ಖಂಡಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.