
ಬೆಂಗಳೂರು : ಮೇ 2025 ರಲ್ಲಿ ನಡೆಸಲಾದ ಲ್ಯಾಬ್ ಪರೀಕ್ಷೆಗಳಲ್ಲಿ ವಿಫಲವಾದ ಹಿನ್ನೆಲೆಯಲ್ಲಿ, ಕರ್ನಾಟಕ ಔಷಧ ನಿಯಂತ್ರಣ ಇಲಾಖೆ ಪ್ಯಾರಸಿಟಮಾಲ್ ಮಾತ್ರೆಗಳು, ಸಿರಪ್‌ಗಳು, ಇಂಜೆಕ್ಷನ್‌ಗಳು ಮತ್ತು ಪಶುವೈದ್ಯಕ ಲಸಿಕೆಗಳ ಸೇರಿದಂತೆ 15 ಉತ್ಪನ್ನಗಳ ಬಳಕೆ ಹಾಗೂ ವಿತರಣೆಗೆ ನಿಷೇಧ ಹೇರಿದೆ.
ಮೈಸೂರಿನ ಅಬಾನ್ ಫಾರ್ಮಾಸ್ಯುಟಿಕಲ್ಸ್ ಪ್ರೈ. ಲಿ. ತಯಾರಿಸಿದ ಜನಪ್ರಿಯ ಪ್ಯಾರಸಿಟಮಾಲ್ ಬ್ರ್ಯಾಂಡ್ ಪೊಮೊಲ್-650, ಮತ್ತು ಎನ್. ರಂಗರಾವ್ & ಸನ್ಸ್ ತಯಾರಿಸಿದ ‘ಓ ಶಾಂತಿ ಗೋಲ್ಡ್ ಕ್ಲಾಸ್ ಕುಂಕುಮ್’ ಸೇರಿದಂತೆ ಹಲವಾರು ಉತ್ಪನ್ನಗಳು ಅಸುರಕ್ಷಿತ ಎಂದು ಪತ್ತೆಯಾಗಿದೆ.
ಈ ಉತ್ಪನ್ನಗಳು ಲ್ಯಾಬ್ ಪರೀಕ್ಷೆಗಳಲ್ಲಿ ಗುಣಮಟ್ಟದ ಮಾನದಂಡಗಳಿಗೆ ತಲೆ ಬಗ್ಗದ ಹಿನ್ನೆಲೆಯಲ್ಲಿ, ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಅಧೀನದ ಆರೋಗ್ಯ ಇಲಾಖೆ ತಕ್ಷಣದ ನಿಷೇಧಕ್ಕೆ ಮುಂದಾಗಿದೆ.
ಇತರ ನಿಷೇಧಿತ ಉತ್ಪನ್ನಗಳು:
ಅಲ್ಟ್ರಾ ಲ್ಯಾಬೋರೇಟರೀಸ್: ಕಾಂಪೌಂಡ್ ಸೋಡಿಯಂ ಲ್ಯಾಕ್ಟೇಟ್ ಇಂಜೆಕ್ಷನ್ IP
ಟಾಮ್ ಬ್ರಾನ್ ಫಾರ್ಮಾ: ಅದೇ ಇಂಜೆಕ್ಷನ್ IP
ಬಯೋನ್ ಥೆರಪ್ಯೂಟಿಕ್ಸ್: ಮಿಟು ಕ್ಯೂ7 ಸಿರಪ್
ಸ್ವೆಫ್ನ್ ಫಾರ್ಮಾ: ಪ್ಯಾಂಟೊಕಾಟ್-DSR ಕ್ಯಾಪ್ಸುಲ್
ಪುನಿಸ್ಕಾ ಇಂಜೆಕ್ಟೆಬಲ್ಸ್: ಸೋಡಿಯಂ ಕ್ಲೋರೈಡ್ ಇಂಜೆಕ್ಷನ್ IP
ಸೇಫ್ ಪ್ಯಾರೆಂಟೆರಲ್ಸ್: ಕೋಳಿ ಲಸಿಕೆ ಸ್ಟೆರೈಲ್ ಡಿಲ್ಯೂಯೆಂಟ್
ಗ್ಲಿಮಿಜ್-2 (ಗ್ಲಿಮೆಪಿರೈಡ್), ಇರೋಗೈನ್ (ಐರನ್ ಸುಕ್ರೋಸ್ ಇಂಜೆಕ್ಷನ್), ಪೈರಾಸಿಡ್-O ಸಸ್ಪೆನ್ಷನ್
ಸಾರ್ವಜನಿಕರಿಗೆ ಹಾಗೂ ಔಷಧ ವಿತರಕರಿಗೆ ಎಚ್ಚರಿಕೆ:
ಈ ಉತ್ಪನ್ನಗಳನ್ನು ಬಳಕೆಯಲ್ಲಿಡಬಾರದು ಅಥವಾ ವಿತರಣೆ ಮಾಡಬಾರದು ಎಂಬುದಾಗಿ ಇಲಾಖೆಯು ಸುತ್ತೋಲೆ ಮೂಲಕ ಎಚ್ಚರಿಸಿದೆ. ಸಾರ್ವಜನಿಕ ಆರೋಗ್ಯಕ್ಕಾಗಿ ತಕ್ಷಣದ ಅನುಸರಣೆ ಕಡ್ಡಾಯವಾಗಿದೆ.