spot_img

ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ ) ಕರ್ನಾಟಕ ಸಂಸ್ಥೆಯ ಆಶ್ರಯದಲ್ಲಿ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ

Date:

ಬೈಲೂರು : ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ ) ಕರ್ನಾಟಕ ಸಂಸ್ಥೆಯ ಆಶ್ರಯದಲ್ಲಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ ) ಉಡುಪಿ, ರಕ್ತ ಕೇಂದ್ರ ಕೆ.ಎಂ.ಸಿ ಮಣಿಪಾಲ, ಗ್ರಾಮ ಸಂರಕ್ಷಣಾ ಸಮಿತಿ ಬೈಲೂರು ವಲಯ, ಲಯನ್ಸ್ ಕ್ಲಬ್ ನೀರೆ ಬೈಲೂರು , ಶಾಂತಿ ಯುವಕ ವೃಂದ (ರಿ ) ಜಾರ್ಕಳ ಕುಕ್ಕುಂದೂರು, ಓಂ ಶಕ್ತಿ ಫ್ರೆಂಡ್ಸ್ ನೀರೆ ಕೆರೆಪಲ್ಕೆ , ವಿಶ್ವಕರ್ಮ ಬ್ರಾಹ್ಮಣ ಸಮಾಜ ಸಂಘ ನೀರೆ ಬೈಲೂರು ಇವರ ಸಹಯೋಗದೊಂದಿಗೆ, ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ದಿನಾಂಕ 29-06-2025 ಭಾನುವಾರ ಬೆಳಿಗ್ಗೆ 8:30ರಿಂದ ಮಧ್ಯಾಹ್ನ 2:00ರ ತನಕ ಸರಕಾರಿ ಪದವಿ ಪೂರ್ವ ಕಾಲೇಜ್ ಬೈಲೂರಿನಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ. ವಿ. ಸುನಿಲ್ ಕುಮಾರ್ ರವರು ನೆರವೇರಿಸಲಿದ್ದಾರೆ . ಕರಕರಿ ಫ್ರೆಂಡ್ಸ್ ಸೇವಾಬಳಗ (ರಿ)ಕರ್ನಾಟಕದ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ಪೂಜಾರಿ ಎರ್ಲಪಾಡಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಕೃಷ್ಣರಾಜ ಹೆಗ್ಡೆ- ಕಾರ್ಯದರ್ಶಿಗಳು ಆಡಳಿತ ಮಂಡಳಿ ಶ್ರೀಮಾರಿಯಮ್ಮ ದೇವಸ್ಥಾನ ಕೌಡೂರು ಬೈಲೂರು, ಶ್ರೀ ವಿಕ್ರಂ ಹೆಗ್ಡೆ ಕಣಜಾರು – ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರು ಕಾರ್ಕಳ, ಶ್ರೀ ಸಂತೋಷ್ ವಾಗ್ಲೆ- ಅಧ್ಯಕ್ಷರು ಕಾಲೇಜು ಅಭಿವೃದ್ಧಿ ಸಮಿತಿ ಸ. ಪ. ಪೂ. ಕಾಲೇಜು ಬೈಲೂರು, ಶ್ರೀ ಪ್ರಶಾಂತ್ ಶೆಟ್ಟಿ ಗುತ್ತುಮನೆ – ಅಧ್ಯಕ್ಷರು ಲಯನ್ಸ್ ಕ್ಲಬ್ ಬೈಲೂರು, ಶ್ರೀ ರಮೇಶ್ ಕಲ್ಲೊಟ್ಟೆ – ಹಿಂದೂ ಮುಖಂಡರು ಬೈಲೂರು, ಶ್ರೀಮತಿ ಗೀತಾ ದಿನೇಶ್ ಆಚಾರ್ಯ ಬೈಲೂರು – ಶಿಕ್ಷಕಿ ಗುಂಡಾಜಿ , ಶ್ರೀ ಸೀತಾರಾಮ್ ಭಟ್ – ಪ್ರಾಂಶುಪಾಲರು ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರು, ಡಾ. ಗಣೇಶ್ ಮೋಹನ್ – ಮುಖ್ಯಸ್ಥರು ರಕ್ತ ಕೇಂದ್ರ ಮಣಿಪಾಲ, ಶ್ರೀ ಸತೀಶ್ ಸಾಲಿಯಾನ್ – ಅಧ್ಯಕ್ಷರು ಶ್ರೀ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ)ಉಡುಪಿ, ಶ್ರೀ ಅಜಯ್ ಆಚಾರ್ಯ ಜಾರ್ಕಳ – ಉಪಾಧ್ಯಕ್ಷರು ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಂಘ (ರಿ.) ನೀರ ಬೈಲೂರು, ಶ್ರೀ ಗಿರೀಶ್ ಮಡಿವಾಳ – ಪ್ರಮುಖರು ಶ್ರೀ ಓಂ ಶಕ್ತಿ ಫ್ರೆಂಡ್ಸ್ ನೀರೆ ಕೆರೆಪಲ್ಕೆ, ಮುಸ್ತಾಫ ಜಾರ್ಕಳ – ಅಧ್ಯಕ್ಷರು ಶಾಂತಿ ಯುವಕ ವೃಂದ ಜಾರ್ಕಳ ಕುಕ್ಕುಂದೂರು, ಶ್ರೀಮತಿ ವೀಣಾ ಎಸ್ ಭಟ್ – ಸ್ಥಾಪಕ ಸದಸ್ಯರು ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ) ಕರ್ನಾಟಕ ಇವರುಗಳು ಭಾಗವಹಿಸಲಿದ್ದಾರೆ.

“ರಕ್ತದಾನ ಮಾಡಿ – ಜೀವ ಉಳಿಸಿ” ಎಂಬ ಮಹತ್ತರ ಸಂದೇಶದೊಂದಿಗೆ ನಡೆಯುವ ಈ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಈ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು: 9902205358, 8197982092

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಆಪಲ್‌ನಿಂದ ಐಫೋನ್ ಲೋಕಕ್ಕೆ ಹೊಸ ಸ್ಪರ್ಧಿ: ಅತಿ ತೆಳುವಾದ ‘ಐಫೋನ್ ಏರ್’ ಅನಾವರಣ!

ಅತಿ ತೆಳುವಾದ ಐಫೋನ್ 'ಏರ್' ಮಾದರಿ, ಹೊಸ ವೈಶಿಷ್ಟ್ಯಗಳೊಂದಿಗೆ ಐಫೋನ್ 17, ಸುಧಾರಿತ ಏರ್‌ಪಾಡ್ಸ್ ಪ್ರೊ 3 ಮತ್ತು ರಕ್ತದೊತ್ತಡ ಮಾನಿಟರ್ ಹೊಂದಿರುವ ಆಪಲ್ ವಾಚ್.

ಭಾರತದ ನೂತನ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಆಯ್ಕೆ

ಭಾರತದ 17ನೇ ಉಪರಾಷ್ಟ್ರಪತಿಯಾಗಿ ಮಹಾರಾಷ್ಟ್ರದ ಹಾಲಿ ರಾಜ್ಯಪಾಲ ಮತ್ತು ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರು ಆಯ್ಕೆಯಾಗಿದ್ದಾರೆ.

ಸಾಂಬಾರಿಗೆ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು: ಕೆಂಪು ಮೆಣಸಿನಕಾಯಿಯ ಪ್ರಯೋಜನಗಳು

ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಕೆಂಪು ಮೆಣಸಿನಕಾಯಿ ಕೇವಲ ಆಹಾರಕ್ಕೆ ಖಾರ ಮತ್ತು ರುಚಿ ನೀಡುವುದಷ್ಟೇ ಅಲ್ಲ, ಇದು ಅನೇಕ ಆರೋಗ್ಯಕಾರಿ ಗುಣಗಳನ್ನು ಸಹ ಹೊಂದಿದೆ.

ರಾಣಿಯರಾದ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ, ಅಹಲ್ಯೆ ಬಾಯಿಯರ ಸಾಹಸ ಮಹಿಳೆಯರಿಗೆ ಸ್ಪೂರ್ತಿ : ಡಾ ಮೇಘಾ ಖಂಡೇಲವಾಲ

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಮಹಾವಿದ್ಯಾಲಯದ ಮಹಿಳಾ ಕೋಶ, ಕೇಂದ್ರೀಯ ವಿಶ್ವವಿದ್ಯಾಲಯ ಕರ್ನಾಟಕ ಹಾಗೂ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿತು.