
ಉಡುಪಿ: ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ.) ಕರ್ನಾಟಕ ತನ್ನ 85ನೇ ಸೇವಾ ಯೋಜನೆಯ ಅಂಗವಾಗಿ, ಕೊಳಕೆ ಇರ್ವತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ₹10,000 ಸಹಾಯಧನವನ್ನು ಚೆಕ್ ಮೂಲಕ ನೀಡಿದೆ.
ಶಾಲೆಯ ಆಡಳಿತ ಸಮಿತಿಯು ಬಳಗದ ಬಳಿ ಸಹಾಯಧನಕ್ಕಾಗಿ ಮನವಿ ಸಲ್ಲಿಸಿತ್ತು. ಮನವಿಯನ್ನು ಪರಿಗಣಿಸಿದ ಸಂಸ್ಥೆ, ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಈ ದೇಣಿಗೆಯನ್ನು ನೀಡಿದೆ.
ಈ ಸಂದರ್ಭ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೌಮ್ಯ ಶೆಟ್ಟಿ, ಗೌರವ ಸಲಹೆಗಾರರಾದ, ಶಾಲೆಯ ದೈಹಿಕ ಶಿಕ್ಷಕರಾದ ಆನಂದ್ ಪೂಜಾರಿ ಬೈಲೂರು, ಹಾಗೂ ಪದಾಧಿಕಾರಿಗಳಾದ ರಾಜೇಶ್ವರಿ ನವೀನ್, ಸವಿನ್ ಪೂಜಾರಿ, ಸವಿತಾ ಪೂಜಾರಿ ಹಾಗೂ ಶಾಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.