spot_img

ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ) ಮತ್ತು ಹಲವು ಸಂಘಟನೆಗಳ ಸಹಭಾಗಿತ್ವದೊಂದಿಗೆ ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರಿನಲ್ಲಿ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ

Date:

ರಕ್ತದಾನ ಎಂಬುದು ಶ್ರೇಷ್ಠದಾನ ಸಂಘ-ಸಂಸ್ಥೆಗಳ ಸೇವಾ ಕಾರ್ಯಗಳ ಬಗ್ಗೆ ಮೆಚ್ಚುಗೆ : ಶ್ರೀ ವಿಕ್ರಂ ಹೆಗ್ಡೆ

ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ) ಕರ್ನಾಟಕ ಇದರ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಬೈಲೂರು, ಶಾಂತಿ ಯುವಕ ಮಂಡಲ ಜಾರ್ಕಳ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಮತ್ತು ಹಿಂದೂ ಗ್ರಾಮ ಸಂರಕ್ಷಣಾ ಸಮಿತಿ ಬೈಲೂರು, ವಿಶ್ವಕರ್ಮ ಬ್ರಾಹ್ಮಣ ಸೇವಾ ಸಂಘ ಬೈಲೂರ್,ಹಾಗೂ ಓಂ ಶಕ್ತಿ ಫ್ರೆಂಡ್ಸ್ ನೀರೆ ಕೆರೆ ಪಲ್ಕೆ ಇವರ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಸರಕಾರಿ ಪದವಿಪೂರ್ವ ಕಾಲೇಜು ಬೈಲೂರು ಇಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಕರಿ ಫ್ರೆಂಡ್ಸ್ ಸೇವಾ ಬಳಗ ( ರಿ) ಕರ್ನಾಟಕ ಇದರ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ಪೂಜಾರಿ ಎರ್ಲಪಾಡಿ ವಹಿಸಿದ್ದರು. ಕಾರ್ಕಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ವಿಕ್ರಮ್ ಹೆಗ್ಡೆ ಕಣಜಾರ್ ಇವರು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ರಕ್ತದಾನ ಎಂಬುದು ಶ್ರೇಷ್ಠದಾನ ಒಬ್ಬರ ಜೀವವನ್ನು ಉಳಿಸಬೇಕಾದರೆ ರಕ್ತ ಅತೀ ಅಗತ್ಯ. ಇಂತಹ ಉತ್ತಮ ಕಾರ್ಯಕ್ರಮವನ್ನು ಮಾಡುತ್ತಿರುವಂತಹ ಕರಕರಿ ಫ್ರೆಂಡ್ಸ್ ಸೇವಾ ಬಳಗ ಹಾಗೂ ಇದರ ಜೊತೆ ಸಹಕರಿಸಿದ ಎಲ್ಲಾ ಸಂಘ ಸಂಸ್ಥೆಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ಮಾರಿಯಮ್ಮ ದೇವಸ್ಥಾನ ಕೌಡೂರು ಬೈಲೂರು ಇದರ ಆಡಳಿತ ಮಂಡಳಿ ಕಾರ್ಯದರ್ಶಿ ಶ್ರೀ ಕೃಷ್ಣರಾಜ ಹೆಗ್ಡೆ, ಲಯನ್ಸ್ ಕ್ಲಬ್ ಬೈಲೂರು ಇದರ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಶೆಟ್ಟಿ ಗುತ್ತು ಮನೆ, ಹಿಂದೂ ಮುಖಂಡರಾದಂತ ಶ್ರೀ ರಮೇಶ್ ಕಲ್ಲೊಟ್ಟೆ, ಶಿಕ್ಷಕಿ ಶ್ರೀಮತಿ ಗೀತಾ ದಿನೇಶ್ ಆಚಾರ್ಯ ಬೈಲೂರು,ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರು ಇದರ ಪ್ರಾಂಶು ಪಾಲರಾದ ಶ್ರೀ ಸೀತಾರಾಮ್ ಭಟ್,ರಕ್ತಕೇಂದ್ರ ಮಣಿಪಾಲ ಇದರ ಮುಖ್ಯಸ್ಥರಾದಂತ ಡಾಕ್ಟರ್ ಕಾರ್ತಿಕ್,ಶ್ರೀ ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ (ರಿ )ಉಡುಪಿ ಇದರ ಅಧ್ಯಕ್ಷರಾದ ಶ್ರೀ ಸತೀಶ್ ಸಾಲ್ಯಾನ್, ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಂಘ (ರಿ) ನೀರೆ ಬೈಲೂರು ಇದರ ಉಪಾಧ್ಯಕ್ಷರಾದ ಶ್ರೀ ಅಜಯ್ ಆಚಾರ್ಯ ಜಾರ್ಕಳ, ಶಾಂತಿ ಯುವಕ ವೃಂದ ಜಾರ್ಕಳ ಕುಕ್ಕುಂದೂರು ಇದರ ಅಧ್ಯಕ್ಷರಾದ ಮುಸ್ತಾಫ ಜಾರ್ಕಳ,ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ)ಕರ್ನಾಟಕ ಇದರ ಸ್ಥಾಪಕ ಸದಸ್ಯರಾದ ಶ್ರೀಮತಿ ವೀಣಾ ಎಸ್ ಭಟ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕರಕರಿ ಫ್ರೆಂಡ್ಸ್ ಸೇವಾ ಬಳಗ ಇದರ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸೌಮ್ಯ ಶೆಟ್ಟಿಯವರು ನಿರೂಪಿಸಿದರು

ಕರಕರಿ ಫ್ರೆಂಡ್ಸ್ ಸೇವಾ ಬಳಗದ ನಿಕಟ ಪೂರ್ವ ಅಧ್ಯಕ್ಷರು ಹಾಗೂ ವಕೀಲರಾದ ಸದಾನಂದ್ ಸಾಲ್ಯಾನ್ ಸ್ವಾಗತಿಸಿದರು

ಕರಕರಿ ಫ್ರೆಂಡ್ಸ್ ಸೇವಾಬಳಗ ಇದರ ಕೋಶಾಧಿಕಾರಿಯದಂತಹ ಪ್ರಕಾಶ್ ರವರು ವಂದನಾರ್ಪಣೆಗೈದರು

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ನಿತ್ಯ ಸರಿಯಾದ ಪ್ರಮಾಣದ ನೀರು ಕುಡಿದರೆ 5 ಕೆಜಿ ತೂಕ ಕಡಿಮೆ ಮಾಡಬಹುದು

ಇತ್ತೀಚಿನ ಸಂಶೋಧನೆಗಳು ಪ್ರತಿದಿನ ಸಾಕಷ್ಟು ನೀರು ಸೇವಿಸುವುದರಿಂದ ವಾರಕ್ಕೆ 5 ಕೆಜಿ ವರೆಗೆ ತೂಕ ಕಡಿಮೆ ಮಾಡಲು ಸಹಾಯವಾಗುತ್ತದೆ ಎಂದು ತಿಳಿಸಿವೆ

ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆ ಮೇಲೆ ಅತ್ಯಾಚಾರ: ರಾಜಕೀಯ ನಾಯಕ ಸೇರಿದಂತೆ 5 ಜನ ಬಂಧನ

21 ವರ್ಷದ ಹಿಂದೂ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಆರೋಪದ ಮೇಲೆ ಸ್ಥಳೀಯ ರಾಜಕಾರಣಿ ಸೇರಿದಂತೆ 5 ಸಂದೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.

ಕಾಪು ಬ್ಲಾಕ್ ಯುವ ಕಾಂಗ್ರೆಸ್ ನ ಹೊಸ ನಾಯಕತ್ವದ ಪದಗ್ರಹಣ

ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಂಸ್ಥೆಯ ಹೊಸ ನಾಯಕತ್ವವು ಶನಿವಾರದಂದು ಕಾಪು ರಾಜೀವ ಭವನದಲ್ಲಿ ಅಧಿಕಾರವನ್ನು ವಹಿಸಿಕೊಂಡಿತು

ರಾಜಸ್ಥಾನದಲ್ಲಿ ಪುರಾತತ್ತ್ವ ಇಲಾಖೆಯ ದೊಡ್ಡ ಶೋಧ

ಇದುವರೆಗೆ ರಾಜಸ್ಥಾನದಲ್ಲಿ ನಡೆದ ಅತ್ಯಂತ ಆಳದ ಉತ್ಖನನವೆಂದರೆ ಇದು—23 ಮೀಟರ್ ಆಳದವರೆಗೆ ತಲುಪಿದ ಈ ಸಂಶೋಧನೆ, ಪ್ರಾಚೀನ ಭಾರತದ ಇತಿಹಾಸಕ್ಕೆ ಹೊಸ ಆಯಾಮಗಳನ್ನು ಸೇರಿಸಿದೆ.