
ಕಾರ್ಕಳ : ಕಾರ್ಕಳದ ಪ್ರತಿಭಾವಂತ ಭರತನಾಟ್ಯ ಕಲಾವಿದೆ ಅದಿತ್ರಿಯ ಸಿಂಧು ಅವರು, ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅವರು ಶೇಕಡಾ 94 ಅಂಕಗಳನ್ನು ಗಳಿಸಿ ‘ಡಿಸ್ಟಿಂಕ್ಷನ್’ನಲ್ಲಿ ತೇರ್ಗಡೆಯಾಗಿದ್ದಾರೆ.
ಅದಿತ್ರಿಯ ಸಿಂಧುರವರು ಕಾರ್ಕಳದ ನಿವಾಸಿಗಳಾದ ಶ್ರೀಮತಿ ಸುರೇಖಾ ಮತ್ತು ದಿನೇಶ್ ಆಚಾರ್ಯ ಅವರ ಸುಪುತ್ರಿ. ಅವರು ಪ್ರಸ್ತುತ ಕಾರ್ಕಳದ ವರ್ಧಮಾನ ಶಿಕ್ಷಣ ಸಂಸ್ಥೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಭರತನಾಟ್ಯದ ಮೇಲೆ ವಿಶೇಷ ಆಸಕ್ತಿ ಬೆಳೆಸಿಕೊಂಡ ಅದಿತ್ರಿಯ, ಮೂಡಬಿದಿರೆಯ ಪ್ರಸಿದ್ಧ ನೃತ್ಯಗುರು ಸುಖದಾ ಬರ್ವೆ ಅವರ ಬಳಿ ಭರತನಾಟ್ಯ ತರಬೇತಿ ಪಡೆಯುತ್ತಿದ್ದಾರೆ.