
ಕರ್ನಾಟಕ ಗಮಕ ಕಲಾ ಪರಿಷತ್ತು (ರಿ.) ಬೆಂಗಳೂರು, ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಕಾರ್ಕಳ ತಾಲೂಕು ಗಮಕ ಸಮ್ಮೇಳನವು ಕಾರ್ಕಳದ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯಲ್ಲಿ ಡಿ 28 ರಂದು ನಡೆಯಲಿದೆ.
ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವ್ಯಾಖ್ಯಾನಕಾರ ಮುನಿರಾಜ ರೆಂಜಾಳರವರು ವಹಿಸಲಿದ್ದಾರೆ. ಸಮ್ಮೇಳನದ ಉದ್ಘಾಟನೆಯನ್ನು ಎ ಯೋಗೀಶ್ ಹೆಗ್ಡೆ ಶ್ರೀ ವ್ಯಾಸ ರಘುಪತಿ ಸಂಸ್ಕೃತ ವಿದ್ಯಾಶಾಲಾ ಫಂಡ್ ರಿ ಕಾರ್ಕಳ ಇವರು ನೆರವೇರಿಸಲಿದ್ದಾರೆ.
ಶಿಖರ ಉಪನ್ಯಾಸವನ್ನು ಶ್ರೀ ರಾಮ ಭಟ್ ಎಸ್ ನಿವೃತ್ತ ಕನ್ನಡ ಉಪನ್ಯಾಸಕ ಇವರು ನಡೆಸಿಕೊಡಲಿದ್ದಾರೆ.ಬಳಿಕ ನಡೆಯಲಿರುವ ವಿವಿಧ ಗೋಷ್ಠಿಗಳಲ್ಲಿ ನಾಡಿನ ಖ್ಯಾತ ಗಮಕಿಗಳಿಂದ ಗಮಕ ವಾಚನ ನಡೆಯಲಿದೆ.
ಸಮಾರೋಪ ಭಾಷಣವನ್ನು ಡಾ. ಅರುಣ ಕುಮಾರ್ ಎಸ್ ಆರ್ ಸಹ ಸಂಶೋಧಕರು ಪ್ರಾದೇಶಿಕ ಜನಪದ ರಂಗ ಕಲೆಗಳ ಸಂಶೋಧನಾ ಕೇಂದ್ರ ಮಾಹೆ ಉಡುಪಿ ಇವರು ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಣಿರಾಜ್ ಶೆಟ್ಟಿ ವಕೀಲರು ಕಾರ್ಕಳ ಹಾಗೂ ನರೇಂದ್ರ ಕಾಮತ್ ಕೆ ಸಂಚಾಲಕರು ಶ್ರೀ ಭುವನೇಂದ್ರ ಪ್ರೌಢ ಶಾಲೆ ಕಾರ್ಕಳ ಇವರು ಭಾಗವಹಿಸಲಿದ್ದಾರೆ ಎಂದು ಉಡುಪಿ ಜಿಲ್ಲಾ ಗಮಕ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.