

ಶ್ರೀ ದೇವಿ ಕಲಾ ಆರ್ಟ್ಸ್ ಕಾರ್ಕಳ ಇದರ ಮಾಲಕರಾದ ಶ್ರೀ ದತ್ತಾತ್ರೇಯ ಇವರು ವಿಜೇತ ವಿಶೇಷ ಶಾಲೆಗೆ ಭೇಟಿ ನೀಡಿ ಶಾಲಾ ಸಿಬ್ಬಂದಿಗಳಿಗೆ ಮುಖವರ್ಣಿಕೆ ತರಬೇತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್, ಮ್ಯಾನೇಜಿಂಗ್ ಟ್ರಸ್ಟಿ ಹರೀಶ್, ಉಪಸ್ಥಿತರಿದ್ದು, ಶಾಲಾ 35 ಮಂದಿ ಸಿಬ್ಬಂದಿವರ್ಗದವರು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
ವಿಶೇಷ ಶಿಕ್ಷಕಿ ಹರ್ಷಿತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಸ್ಥಾಪಕಿ ಡಾ.ಕಾಂತಿ ಹರೀಶ್ ಸ್ವಾಗತಿಸಿ, ವಿಶೇಷ ಶಿಕ್ಷಕಿ ಶ್ರೀನಿಧಿ ವಂದಿಸಿದರು.
ಸಂಸ್ಥೆಗೆ ಸಹಕರಿಸಿದ ತಮಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನು ಕರುಣಿಸಲೆಂದು ವಿಜೇತ ಶಾಲಾ ಮಕ್ಕಳ ಪ್ರಾರ್ಥನೆ



