
ಕಾರ್ಕಳ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಶ್ರೀರಾಮನವಮಿ ಪ್ರಯುಕ್ತ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಭಕ್ತರಿಂದ ವಿಶೇಷ ರಾಮತಾರಕ ಮಂತ್ರ ಹಾಗೂ ಹರೇ ರಾಮ-ಕೃಷ್ಣ ಮಂತ್ರ ಪಠಣ ನೆರವೇರಿತು. ರಾಮನವಮಿಯ ಪ್ರಯುಕ್ತ ಸಾಯಂಕಾಲ ಶ್ರೀ ದೇವರಿಗೆ ಸಣ್ಣ ರಥೋತ್ಸವ, ಕಟ್ಟೆ ಪೂಜೆ ಹಾಗೂ ಚಂದ್ರಮಂಡಲ ಉತ್ಸವ, ಬಲಿ ಉತ್ಸವ ನಡೆಯಲಿದೆ. ನಾಳೆ ಶ್ರೀ ದೇವರ ವಾರ್ಷಿಕ ಮಹಾರಥೋತ್ಸವವು ಜರುಗಲಿರುವುದು. ಸರ್ವ ಭಕ್ತರಿಗೂ ಹಾರ್ದಿಕ ಸ್ವಾಗತ.