ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಕಾರ್ಕಳದ 9 ಕುಟುಂಬಗಳಿಗೆ ‘ವಾತ್ಸಲ್ಯ ಕಿಟ್’ ವಿತರಣೆ

Date:

spot_img

ಕಾರ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಪ್ರತಿ ತಿಂಗಳು ಮಾಸಾಶನ ಪಡೆಯುತ್ತಿರುವ ಕಾರ್ಕಳ ತಾಲೂಕಿನ ‘ವಾತ್ಸಲ್ಯ’ ಸದಸ್ಯರಿಗೆ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ವಿಶೇಷ ನೆರವು ನೀಡಲಾಯಿತು. ತಾಲೂಕಿನ ಒಟ್ಟು 9 ಕುಟುಂಬಗಳಿಗೆ ಮಂಜೂರಾದ ‘ವಾತ್ಸಲ್ಯ ಕಿಟ್’ಗಳನ್ನು ದಿನಾಂಕ 05-02-2026 ರಂದು ಫಲಾನುಭವಿಗಳ ಮನೆಗೆ ತೆರಳಿ ವಿತರಿಸಲಾಯಿತು.

ಕಿಟ್ ಪಡೆದ ಫಲಾನುಭವಿಗಳು:

ಮಿಯಾರು ವಲಯದ ಅಮ್ಮನಿ ಆಚಾರಿ, ಕುಂಟಿ ಬೈಲು ರತಿ ಶೆಟ್ಟಿ, ಹೊಸ್ಮಾರು ವಲಯದ ಹೇಮಾವತಿ, ಬಜಗೋಳಿ ವಲಯದ ರುಕ್ಮಿಣಿ ಶೇರಿಗಾರ್ (ಹುಕ್ರಟ್ಟೆ), ಮುಡಾರು ವಲಯದ ಪ್ರಕಾಶ್, ಸುಶೀಲ ಆಚಾರ್ತಿ, ಅಪ್ಪಿ (ರಾಮೆರಗುತ್ತು), ಕುಕ್ಕುಂದೂರು ವಲಯದ ಡೊಂಬಿ ಪರತಿ ಹಾಗೂ ಬೈಲೂರು ವಲಯದ ಸುಮತಿ ಅವರು ಈ ಕಿಟ್ ಪಡೆದರು.

ಕಿಟ್‌ನಲ್ಲಿರುವ ಸಾಮಗ್ರಿಗಳು:

ಕ್ಷೇತ್ರದಿಂದ ನೀಡಲಾದ ಬಟ್ಟೆ, ಚಾಪೆ, ಹೊದಿಕೆ, ದಿಂಬು, ಟವಲ್, ಸೀರೆ, ಲಂಗ, ಪಂಚೆ, ಶರ್ಟ್, ಸೋಪ್, ಬಾಚಣಿಗೆ ಹಾಗೂ ಪೌಷ್ಟಿಕಾಂಶಯುಕ್ತ ‘ವಾತ್ಸಲ್ಯ ಮಿಕ್ಸ್’ ಈ ಕಿಟ್‌ನಲ್ಲಿ ಒಳಗೊಂಡಿದೆ.

ಗಣ್ಯರ ಉಪಸ್ಥಿತಿ:

ಕಾರ್ಯಕ್ರಮದಲ್ಲಿ ತಾಲೂಕು ಯೋಜನಾ ಅಧಿಕಾರಿ ಬಾಲಕೃಷ್ಣ ಹೀರಿಂಜ, ಜ್ಞಾನ ವಿಕಾಸ ಯೋಜನಾ ಅಧಿಕಾರಿ ಶ್ರೀಮತಿ ಮಲ್ಲಿಕಾ, ಸಮನ್ವಯ ಅಧಿಕಾರಿ ಸವಿತಾ, ವಲಯ ಮೇಲ್ವಿಚಾರಕರು, ಊರಿನ ಗಣ್ಯರು, ಒಕ್ಕೂಟದ ಅಧ್ಯಕ್ಷರು, ಜನಜಾಗೃತಿ ಸದಸ್ಯರು, ಸೇವಾಪ್ರತಿನಿಧಿಗಳು ಹಾಗೂ ಶೌರ್ಯ ಘಟಕದ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಸಹಾಯ ಹಸ್ತ ಪಡೆದ ಎಲ್ಲಾ ಸದಸ್ಯರು ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗ್ಯಾಜೆಟ್ ಪ್ರಿಯರಿಗೆ ಗುಡ್ ನ್ಯೂಸ್: ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಶಿಯೋಮಿಯ ಪವರ್‌ಫುಲ್ 67W ಪವರ್ ಬ್ಯಾಂಕ್

ಶಿಯೋಮಿ ಭಾರತದಲ್ಲಿ ಹೊಸ 20000mAh ಪವರ್ ಬ್ಯಾಂಕ್ 5i ಬಿಡುಗಡೆ ಮಾಡಲಿದೆ. 67W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ ಈ ಸಾಧನದ ಸಂಪೂರ್ಣ ಮಾಹಿತಿ ಇಲ್ಲಿದೆ.

ನಟಿ ಐಶ್ವರ್ಯ ಸಿಂಧೋಗಿಗೆ ಸೈಬರ್ ಕಿರುಕುಳ: ಪೊಲೀಸ್ ದೂರು

ನಟಿ ಐಶ್ವರ್ಯ ಸಿಂಧೋಗಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಮೂಲಕ ಕಿರುಕುಳ ನೀಡಿದ ಕಿಡಿಗೇಡಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನ ವಿಶೇಷ – ರಾಷ್ಟ್ರೀಯ ಬಿ ಸಮ್‌ಒನ್ ದಿನ

ಜುಲೈ 21 ರ ರಾಷ್ಟ್ರೀಯ ಬಿ ಸಮ್‌ಒನ್ ದಿನವು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ಅವರ ರಕ್ಷಣೆಗೆ ವಿಶ್ವಾಸಾರ್ಹ ವ್ಯಕ್ತಿಯಾಗಲು ವಯಸ್ಕರಿಗೆ ಕರೆ ನೀಡುತ್ತದೆ.

ಅಡುಗೆಮನೆಯಲ್ಲೇ ಇದೆ ಮ್ಯಾಜಿಕ್ ಲಿಕ್ವಿಡ್: ಅಕ್ಕಿ ತೊಳೆದ ನೀರನ್ನು ಅಪ್ಪಿತಪ್ಪಿಯೂ ಚೆಲ್ಲಬೇಡಿ

ಅಕ್ಕಿ ತೊಳೆದ ನೀರು ಮತ್ತು ಗಂಜಿ ನೀರಿನಿಂದ ಪಡೆಯಬಹುದಾದ ಅದ್ಭುತ ಆರೋಗ್ಯ ಹಾಗೂ ಸೌಂದರ್ಯ ಪ್ರಯೋಜನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.