ಡಾ.ಎನ್.ಎಸ್.ಎ.ಎಮ್. ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿನಿ ಕುಮಾರಿ ರೋಸ್ ಡಿ’ಸಿಲ್ವಾ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ

Date:

spot_img

ಕಾರ್ಕಳ : ಹೊಸದಿಲ್ಲಿ ಲೆಕ್ಕಪರಿಶೋಧಕರ ಸಂಸ್ಥೆ ಐಸಿಎಐ ಜನವರಿ 2026 ರಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಡಾ.ಎನ್.ಎಸ್.ಎ.ಎಮ್. ಪ್ರಥಮದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿನಿ ಕುಮಾರಿ ರೋಸ್ ಡಿ’ಸಿಲ್ವಾ ಅತ್ಯುತ್ತಮ ಅಂಕಗಳಿಸುವ ಮೂಲಕ ತೇರ್ಗಡೆಯಾಗಿದ್ದಾರೆ. ಇವರು ಕಾರ್ಕಳದ ಕರಿಯಕಲ್ಲಿನ ಶ್ರೀಮತಿ ಸಿಂಥಿಯಾ ಡಿ’ಸಿಲ್ವಾ ಮತ್ತು ಶ್ರೀ ಕ್ಯಾರೆಲ್ ಡಿ’ಸಿಲ್ವಾ ಅವರ ಪುತ್ರಿಯಾಗಿದ್ದಾರೆ.

ಡಾ.ಎನ್.ಎಸ್.ಎ.ಎಮ್. ಪ್ರಥಮದರ್ಜೆ ಕಾಲೇಜಿನಲ್ಲಿ 2018 ರಿಂದ 2021ನೇ ಸಾಲಿನಲ್ಲಿ ಬಿಕಾಂ ಪದವಿ ಪೂರೈಸಿದ ಇವರು 2021 ರ ಎಪ್ರಿಲ್ – ಮೇ ನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಅಂತಿಮ ಪರೀಕ್ಷೆಯಲ್ಲಿ ಬಿಕಾಂ ವಿಭಾಗದಲ್ಲಿ ದ್ವಿತೀಯ ರ‍್ಯಾಂಕ್ ಪಡೆದಿರುತ್ತಾರೆ. 2022 ರ ಮೇಯಲ್ಲಿ ಇಂಟರ್ ಮೀಡಿಯೇಟ್ ಗ್ರೂಪ್ ಒಂದರ ಪರೀಕ್ಷೆ ತೇರ್ಗಡೆಯಾದ ಇವರು, ಗ್ರೂಪ್ ಎರಡರ ಪರೀಕ್ಷೆಯನ್ನು 2023 ರ ಮೇಯಲ್ಲಿ ತೇರ್ಗಡೆಯಾಗಿದ್ದರು. ಸತತ ಪ್ರಯತ್ನ ಮತ್ತು ಸ್ವಯಂ ಕಲಿಕೆಯ ಮುಖಾಂತರ ಇದೀಗ ಸಿ.ಎ. ಪದವಿಯನ್ನು ಪಡೆದಿರುತ್ತಾರೆ.

ಇವರಿಗೆ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಶ್ರೀ ವಿಶಾಲ್ ಹೆಗ್ಡೆ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ.ಎಸ್.ಮೂಡಿತ್ತಾಯ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ.ವೀಣಾ ಕುಮಾರಿ ಬಿ.ಕೆ, ಕಾಲೇಜಿನ ಅಧ್ಯಾಪಕ ಅಧ್ಯಾಪಕೇತರ ಬಳಗ ಶುಭ ಹಾರೈಸಿ ಅಭಿನಂದನೆಗಳನ್ನು ಸಲ್ಲಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ರಾಮ ಮತ್ತು ಮೋದಿಯನ್ನು ಬಯ್ಯೋದೇ ನಿಮ್ಮ ಹೋರಾಟ: ಪಾಕ್ ಕ್ರಿಕೆಟಿಗ ಕನೇರಿಯಾ ತಿರುಗೇಟು!

ಪ್ರಧಾನಿ ಮೋದಿ ಬೆನ್ನಿಗೆ ನಿಂತ ಡ್ಯಾನಿಶ್ ಕನೇರಿಯಾ: 'ಶ್ರೀರಾಮ ಹಾಗೂ ಮೋದಿಯನ್ನು...

ನೀಟ್ ಪೇಪರ್ ಲೀಕ್ ಕೇಸ್: ದೇಶದಲ್ಲಿ 5 ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪನೆ!

ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಿಗಳಿಗೆ ಶೀಘ್ರವೇ ತಕ್ಕ ಶಾಸ್ತಿ: ಮುಂಬೈ, ದೆಹಲಿ,...

ಭಾರತದ ಮಾರುಕಟ್ಟೆಗೆ ಕಾಲಿಟ್ಟ ಬೋಟ್‌ನ ಹೊಸ ಪ್ರೀಮಿಯಂ ಹೆಡ್‌ಫೋನ್

ಬೋಟ್ ಕಂಪನಿಯು 80 ಗಂಟೆಗಳ ಬ್ಯಾಟರಿ ಹಾಗೂ 45dB ಹೈಬ್ರಿಡ್ ANC ಬೆಂಬಲಿಸುವ ಪ್ರೀಮಿಯಂ ನಿರ್ವಾಣ ಯುಟೋಪಿಯಾ 2 ಹೆಡ್‌ಫೋನ್ ಭಾರತದಲ್ಲಿ ಬಿಡುಗಡೆ ಮಾಡಿದೆ.

ದಿನ ವಿಶೇಷ – ಆದಾಯ ತೆರಿಗೆ ದಿನ

ಭಾರತದಲ್ಲಿ ಪ್ರತಿ ವರ್ಷ ಜುಲೈ 24 ರಂದು ಆದಾಯ ತೆರಿಗೆ ದಿನವನ್ನು ಆಚರಿಸಲಾಗುತ್ತದೆ. ಇದರ ಇತಿಹಾಸ, ಪ್ರಾಮುಖ್ಯತೆ ಮತ್ತು ITR ಸಲ್ಲಿಕೆಯ ಕುರಿತು ವಿವರ ಇಲ್ಲಿದೆ.