spot_img

ಕಾರ್ಕಳ : ಪಿಯುಸಿ ಫಲಿತಾಂಶ : ಕ್ರಿಯೇಟಿವ್ ಸಾರ್ವತ್ರಿಕ ದಾಖಲೆಸತತ ನಾಲ್ಕನೇ ವರ್ಷವೂ ಶೇಕಡಾ 100 ಫಲಿತಾಂಶ

Date:

2024-25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಸತತ 4ನೇ ವರ್ಷವೂ ಶೇಖಡಾ 100 ಫಲಿತಾಂಶದೊಂದಿಗೆ ಸಾರ್ವತ್ರಿಕ ದಾಖಲೆ ಸೃಷ್ಟಿಸಿದೆ. ಪರೀಕ್ಷೆ ಬರೆದ ಎಲ್ಲಾ 692 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೇ ತೇರ್ಗಡೆ ಹೊಂದುವ ಮೂಲಕ ವಿಶೇಷ ಸಾಧನೆಗೈದಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಮೇಘನಾ ಯು. ವೈ 594 ಅಂಕಗಳೊಂದಿಗೆ ರಾಜ್ಯಕ್ಕೆ 6ನೇ ಸ್ಥಾನ, ಅಮೃತ ಬಸವರಾಜ್ ಬಣಕಾರ್ 592 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ಸ್ಥಾನ, ಶ್ರೀನಿಧಿ ಡಿ 591 ಅಂಕಗಳೊಂದಿಗೆ ರಾಜ್ಯಕ್ಕೆ 9ನೇ ಸ್ಥಾನ, ಪ್ರಜ್ವಲ್ ಎಸ್. ಎನ್ 590 ಅಂಕಗಳೊಂದಿಗೆ ರಾಜ್ಯಕ್ಕೆ 10ನೇ ಸ್ಥಾನ, ತೇಜಸ್ ವಿ. ನಾಯಕ್ 590 ಅಂಕಗಳೊಂದಿಗೆ ರಾಜ್ಯಕ್ಕೆ 10ನೇ ಸ್ಥಾನ ಗಳಿಸಿದ್ದಾರೆ. ಒಟ್ಟು ಪರೀಕ್ಷೆಗೆ ಹಾಜರಾದ 592 ವಿದ್ಯಾರ್ಥಿಗಳಲ್ಲಿ 38 ವಿದ್ಯಾರ್ಥಿಗಳು 97% ಕ್ಕಿಂತ ಅಧಿಕ, 168 ವಿದ್ಯಾರ್ಥಿಗಳು 95%ಕ್ಕಿಂತ ಅಧಿಕ, 379 ವಿದ್ಯಾರ್ಥಿಗಳು 90% ಕ್ಕಿಂತ ಅಧಿಕ, ಹಾಗೂ 557 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.

      ಭೌತಶಾಸ್ತ್ರದಲ್ಲಿ 07, ರಸಾಯನಶಾಸ್ತ್ರ 15, ಗಣಿತ 101,  ಜೀವಶಾಸ್ತ್ರ 22, ಗಣಕ ವಿಜ್ಞಾನ 26, ಅರ್ಥಶಾಸ್ತ್ರ 02, ವ್ಯವಹಾರ ಅಧ್ಯಯನ 12, ಲೆಕ್ಕಶಾಸ್ತ್ರ 02, ಕನ್ನಡ 09, ಸಂಸ್ಕೃತ 76 ಹಾಗೂ ಹಿಂದಿಯಲ್ಲಿ  05 ವಿದ್ಯಾರ್ಥಿಗಳು ವಿಷಯವಾರು ನೂರಕ್ಕೆ ನೂರು ಅಂಕಗಳಿಸಿ ವಿಶೇಷ ಸಾಧನೆಗೈದಿದ್ದಾರೆ.

   ಸಂಸ್ಥೆ ಪ್ರಾರಂಭವಾದ ಮೊದಲ ವರ್ಷದಿಂದಲೂ ಶೇಕಡಾ 100 ಫಲಿತಾಂಶ ದಾಖಲಿಸುವುದರೊಂದಿಗೆ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಉಪನ್ಯಾಸಕೇತರ ವೃಂದದವರು ಸಂತಸ ವ್ಯಕ್ತಪಡಿಸಿ, ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬೇಸಿಗೆಯಲ್ಲಿ ವಾಲ್ನಟ್ ಸೇವಿಸುವುದರ ಪ್ರಯೋಜನಗಳು!

ಬೇಸಿಗೆಯಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀರಿನಾಂಶದಿಂದ ಕೂಡಿದ ಹಣ್ಣುಗಳು ಮತ್ತು ತರಕಾರಿಗಳಷ್ಟೇ ಪ್ರಾಮುಖ್ಯತೆ ಡ್ರೈ ಫ್ರೂಟ್ಸ್‌ಗೂ ಇದೆ

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ನಿಷೇಧ: ವಿದ್ಯಾರ್ಥಿಗಳಿಗೆ ಅವಮಾನ, ನ್ಯಾಯಾಲಯದ ಮುಂದೆ ಪ್ರಕರಣ

ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಯಜ್ಞೋಪವೀತ (ಜನಿವಾರ) ಧರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ ಪ್ರಕರಣಗಳು ರಾಜ್ಯವ್ಯಾಪಿ ವಿವಾದವಾಗಿ ಪರಿಣಮಿಸಿದೆ.

ಸುಪ್ರೀಂಕೋರ್ಟ್ ಕಾನೂನು ರಚಿಸಿದರೆ ಸಂಸತ್ತಿನ ಅಗತ್ಯವೇನು? – ಬಿಜೆಪಿ ಸಂಸದ ನಿಶಿಕಾಂತ್ ದುಬೆಯ ವಿವಾದಾತ್ಮಕ ಹೇಳಿಕೆ

ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ನಿಶಿಕಾಂತ್ ದುಬೆ ಅವರು ಸುಪ್ರೀಂಕೋರ್ಟ್ ಕಾನೂನು ರಚನೆಯಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಿದರೆ ಸಂಸತ್ತನ್ನು ಮುಚ್ಚಿಬಿಡಬೇಕು ಎಂದು ವಾದಿಸಿದ್ದಾರೆ

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ವಿಚಿತ್ರ ವಿನಂತಿ: “ಪಾಸ್ ಮಾಡಿ ಸರ್, ನನ್ನ LOVE ನಿಮ್ಮ ಕೈಯಲ್ಲಿ!”

ಸ್ಎಸ್ಎಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನದ ಸಂದರ್ಭದಲ್ಲಿ ಒಂದು ವಿಚಿತ್ರ ಘಟನೆ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ.