

ಕಾರ್ಕಳದ ಜೋಡುರಸ್ತೆಯಲ್ಲಿರುವ ಮನೆಯೊಂದಕ್ಕೆ ಬೆಂಕಿ ತಗುಲಿ ಸುಮಾರು ಆರು ಲಕ್ಷ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಜೋಡುರಸ್ತೆಯ ಸಿದ್ಧಿವಿನಾಯಕ ಲೇಔಟ್‌ನಲ್ಲಿರುವ ಡಾ. ಚಿದಾನಂದ ಕುಲಕರ್ಣಿ ಅವರ ಮನೆಯಲ್ಲಿ ಜನವರಿ 29 ರಂದು ರಾತ್ರಿ 1.50ಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ.
ಈ ದುರ್ಘಟನೆಯಲ್ಲಿ ಟಿವಿ, ಕಿಟಕಿಗಳು, ದೀಪಗಳು, ಫ್ಯಾನ್‌ಗಳು, ಸ್ವಿಚ್ ಬೋರ್ಡ್‌ಗಳು, ಲ್ಯಾಪ್‌ಟಾಪ್, ಸೋಫಾ ಸೆಟ್, ಪೀಠೋಪಕರಣಗಳು ಸೇರಿದಂತೆ ಸುಮಾರು 6 ಲಕ್ಷ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರಾದ ಮೊಹಮ್ಮದ್ ಅಲಿ ( ಜಿಮ್ ಟ್ರೈನರ್)ಅವರು ಅಗ್ನಿ ಶಾಮಕ ದಳವನ್ನು ಸಂಪರ್ಕಿಸಿದ್ದಾರೆ.ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ನಿಶಾಮಕ ದಳದ ಪ್ರಭಾರ ಠಾಣಾಧಿಕಾರಿ ಚಂದ್ರಶೇಖರ, ಅಚ್ಯುತ್ ಕರ್ಕೇರ, ಹರಿಪ್ರಸಾದ್, ಚಾಲಕ ಜಯಮೂಲ್ಯ ಹಾಗೂ ನಿತ್ಯಾನಂದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.