

ಕಾರ್ಕಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಮತ್ತು ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಈ ನಾಡಿಗೆ ಬೆಳಕು ನೀಡಿದವರು ಕಳೆದ 57 ವರ್ಷಗಳಿಂದ ನಿರಂತರ ಸೇವೆಯನ್ನು ನೀಡಿದ ಪೂಜ್ಯರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಗುರಿಯಾಗಿಸಿಕೊಂಡು ವಿಕೃತ ಮನಸಿನ ಕೆಲವು ವ್ಯಕ್ತಿಗಳ ಗುಂಪು ಸೇರಿ ನಿರಂತರವಾಗಿ ಅವಹೇಳನ ಅಪಪ್ರಚಾರ ಮಾಡುತ್ತಿರುವ ಬಗ್ಗೆ
ಕಾರ್ಕಳ ತಾಲೂಕಿನ ಶ್ರೀ ಕ್ಷೇತ್ರದ ಭಕ್ತರು ಬೃಹತ್ ಹೋರಾಟ ಮಾಡುವ ಸಲುವಾಗಿ ಇಂದು ಕಾರ್ಕಳ ಬಾಹುಬಲಿ ಪ್ರವಚನ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ಕಾರ್ಕಳ ವತಿಯಿಂದ ಧರ್ಮಜಾಗೃತಿ ಸಭೆಯ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಕ್ಷೇತ್ರದ ಬಗ್ಗೆ ಮತ್ತು ಪೂಜ್ಯ ವೀರೇಂದ್ರ ಹೆಗ್ಗಡೆ ಯವರ ಬಗ್ಗೆ ನಿರಂತರ ತೇಜೋವಧೆ ನಡೆಯುತ್ತಿರುವ ಬಗ್ಗೆ ಒಂದುಖಂಡನಾ ಸಭೆಯನ್ನು ಧರ್ಮ ಜಾಗೃತಿ ಸಭೆಯನ್ನು ನಡೆಸುವ ಮೂಲಕ ಕ್ಷೇತ್ರದಿಂದ ಅತೀ ಹೆಚ್ಚು ಪ್ರಯೋಜನವನ್ನು ಪಡೆದಿರುವ ಕಾರ್ಕಳ ತಾಲೂಕಿಂದ ಭಕ್ತರು ಈ ಒಂದು ಸಭೆಯನ್ನು ಯಶಸ್ವಿಯಾಗಿ ನಡೆಸಿಕೊಡಬೇಕೆಂಬ ಉದ್ದೇಶದಿಂದ ಈ ಸಭೆಯನ್ನು ಕರೆಯಲಾಗಿದೆ ಎಂದು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಉದಯ್ ಕುಮಾರ್ ಹೆಗ್ಡೆಯವರು ಪ್ರಾಸ್ಥಾವಿಕ ಮಾತಿನ ಮೂಲಕ ತಿಳಿಸಿದರು.

ನ್ಯಾಯವಾದಿ ಗಳಾದ ವಿಜಯ್ ಕುಮಾರ್ ರವರು ಕ್ಷೇತ್ರದಿಂದ ಪೂಜ್ಯರು ಮಾಡಿರುವ ಸೇವೆಯನ್ನು ನೆನೆದು ಹಾಗೂ ಪೂಜ್ಯರ ಮೇಲೆ ನಿರಂತರ ಆಗುವ ತೇಜೋವಧೆಯನ್ನು ನನ್ನ ಈ ವಯಸ್ಸಿನಲ್ಲಿ ನೋಡಲು ಸಾಧ್ಯವಾಗುತ್ತಿಲ್ಲ, ಆದರೆ ಸಹನೆಯಿಂದ ತನ್ನ ಸೇವೆಯನ್ನು ನಿರಂತರವಾಗಿ ಯಾವುದೇ ಅಡ್ಡಿ ಇಲ್ಲದಂತೆ ನಡೆಸುತ್ತಿರುವ ಪೂಜ್ಯ ಖಾವಂದರ ಬಗ್ಗೆ ನೆನೆದು ಭಾವುಕರಾದರು. ಅದೇ ರೀತಿ ಅಜೆಕಾರು ಪದ್ಮ ಗೋಪಾಲ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಸುಧಾಕರ್ ಶೆಟ್ಟಿಯವರು ಮಾತು ಎಂಬುದು ಅವರ ಸಂಸ್ಕಾರವನ್ನು ತೋರಿಸುತ್ತದೆ ಹಾಗಾಗಿ ನಾವು ಸಂಸ್ಕಾರದೊಂದಿಗೆ ಬಂದವರು ವಿರೋಧಿಗಳು ಬಳಸುವ ಪದವನ್ನು ನಾವು ಯಾವತ್ತೂ ಬಳಸಬಾರದು ಹಾಗೆಯೇ ಬಳಸಲು ಸಾಧ್ಯವೂ ಆಗುವುದಿಲ್ಲ ಆದರೂ ನಾವು ಅವರಿಗೆ ಕೆಡುಕನ್ನು ಬಯಸದೆ ಅವರ ನಾಲಿಗೆ ಉತ್ತಮವಾಗಿ ಬಳಸುವಂತೆ ದೇವರು ಬುದ್ಧಿ ನೀಡಲಿ ಅವರ ಮಕ್ಕಳಿಗೆ ದೇವರು ಒಳ್ಳೆದು ಮಾಡಲಿ ಉತ್ತಮ ಸಂಸ್ಕಾರ ಮಕ್ಕಳಲ್ಲಿ ಮೂಡಿ ಬರಲಿ ಎಂದು ಆಶಿಸಿದರು. ಪೂಜ್ಯರನ್ನು ಮಂಜುನಾಥ ಸ್ವಾಮಿ 58 ವರ್ಷಗಳ ಸುದೀರ್ಘ ಕಾಲ ಪಟ್ಟದಲ್ಲಿ ಕೂರಿಸಿದರೆಂದರೇ ಪೂಜ್ಯರಿಗೆ ಇದಕ್ಕಿಂತ ದೊಡ್ಡ ಸರ್ಟಿಫಿಕೇಟ್ ಬೇಕೇ. ಅವರಿಗೆ ಸರ್ಟಿಫಿಕೇಟ್ ಕೊಡಲು ನಾವ್ಯಾರೆಂದರು. ಮನುಷ್ಯನಿಗೆ ಮೊದಲ ಶತ್ತ್ರು ನಮ್ಮ ಯಶಸ್ಸು, ಒಬ್ಬ ವ್ಯಕ್ತಿ ಯಶಸ್ಸನ್ನು ಪಡೆಯುತ್ತಿದ್ದಾನೆಂದರೆ ಅವನಿಗೆ ಶತ್ರುಗಳ ಸಂಖ್ಯೆ ನಿಂದಕರ ಸಂಖ್ಯೆ ತಾನಾಗಿಯೇ ಹುಟ್ಟಿಕೊಳ್ಳುತ್ತದೆ ಎಂದರು. ಎಲ್ಲಾ ತೇಜೋವಧೆಗಳಿಗೆ ಜನಜಾಗೃತಿ ಸಭೆಯಲ್ಲಿ ಅತೀ ಹೆಚ್ಚು ಜನಸಂಖ್ಯೆ ಸೇರುವುದರ ಮೂಲಕ ಉತ್ತರವನ್ನು ನೀಡಬೇಕೆಂದರು. ಹಾಗೂ ಯಾರೂ ಒತ್ತಾಯ ಪೂರಕವಾಗಿ ಬರುವಂತೆ ಮಾಡಬಾರದು, ಈ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿ, ಅವರ ಮನವೊಲಿಸಿ ಬರುವಂತೆ ಮಾಡಬೇಕೆಂದರು.
ಕಣಜಾರು ವಿಕ್ರಂ ಹೆಗ್ಡೆಯವರು ಮಾತಾಡಿ ಪೂಜ್ಯರ ಕಾರ್ಯಕ್ರಮಗಳ ಬಗ್ಗೆ ಪೂಜ್ಯರು ಮಾಡುವ ಸಮಾಜಮುಖಿ ಕೆಲಸದ ಬಗ್ಗೆ ಈಗಾಗಲೇ ನಮಗೆ ತಿಳಿದಿರುವ ವಿಚಾರ. ಈ ಬಗ್ಗೆ ನಮ್ಮ ತಾಲೂಕಿನ ಶಾಸಕರು ವಿಧಾನಸೌಧದಲ್ಲಿ ಧ್ವನಿ ಎತ್ತಿರುವುದು ಎಲ್ಲರಿಗೂ ಖುಷಿಯನ್ನು ತಂದಿದೆ ಹಾಗೂ ಈ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಧ್ವನಿ ಎತ್ತಿ ಪಕ್ಷ ಭೇದ ಮರೆತು ಬೆಂಬಲ ನೀಡಿರುವುದು ನಮಗೆಲ್ಲರಿಗೂ ಬಲ ತಂದಿದೆ. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ನಮ್ಮ ಸನಾತನ ಧರ್ಮದ ಬಗ್ಗೆ ಗೌರವ ಮೂಡಬೇಕೆಂದರೆ ಇಂತಹ ಷಡ್ಯಂತ್ರದ ವಿರುದ್ಧ ಹೋರಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹಾಗಾಗಿ ನಮ್ಮ ಸಹಕಾರವೂ ಇದರಲ್ಲಿ ಸಂಪೂರ್ಣವಾಗಿದೆ ಎಂದು ತಿಳಿಸಿದರು. ಅಂಡಾರು ಮಹಾವೀರ ಹೆಗ್ಡೆ ಹಾಗೂ ಬಜಗೋಳಿ ರವೀಂದ್ರ ಶೆಟ್ಟಿ ಯವರು ಈ ಕಾರ್ಯಕ್ರಮ ಯಶಸ್ವಿಯಾಗಿ ಮಾಡಬೇಕೆಂದರೇ ಎಲ್ಲರ ಸಹಕಾರ ಅತಿ ಮುಖ್ಯ. ಎಲ್ಲರೂ ಈ ಒಂದು ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಮಲಾಕ್ಷ ನಾಯಕ್,ಪ್ರಶಾಂತ್ ಶೆಟ್ಟಿ ಬೈಲೂರು, ಮಹಾವೀರ್ ಹೆಗ್ಡೆ, ದೇವಿಪ್ರಸಾದ್ ಶೆಟ್ಟಿ, ಮಾಲಿನಿ ಶೆಟ್ಟಿ, ರವೀಂದ್ರ ನಾಯಕ್, ರವೀಂದ್ರ ಪ್ರಭು ಕಡಾರಿ, ಸಿರಿಯಣ್ಣ ಶೆಟ್ಟಿ, ಮೈಕ್ ಹೆಗ್ಡೆ,ವಿಜಯಶೆಟ್ಟಿ,ಮಹಾವೀರ್ ಜೈನ್, ಅಶ್ವಥ್ ಪೈ, ಹರಿಶ್ಚಂದ್ರ ಹೆಗ್ಡೆ, ರಾಮ್ ಭಟ್, ವೃಷಭ ರಾಜಕಡಂಬ, ಆಂತೋನಿ, ಹಾಗೂ ಹಲವಾರು ರಾಜಕೀಯ ನಾಯಕರು, ಊರಿನ ಪ್ರಮುಖರು, ಸಂಘ ಸಂಸ್ಥೆಗಳ ಪ್ರಮುಖರು, ದೈವ ದೇವಸ್ಥಾನಗಳ ಸಮಿತಿಯ ಪ್ರಮುಖರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು, ಶ್ರೀ ಕ್ಷೇತ್ರದ ಭಕ್ತರು, ವೀರೇಂದ್ರ ಹೆಗಡೆಯವರ ಅಭಿಮಾನಿಗಳು ಉಪಸ್ಥಿತರಿದ್ದರು



