ಕಾರ್ಕಳ ಪುರಸಭಾ ವತಿಯಿಂದ ಪಿಎಂಎವೈ ಯೋಜನೆಯ ಮನೆಗಳ ಕಾಮಗಾರಿ ಪರಿಶೀಲನೆ

Date:

spot_img

ಕಾರ್ಕಳ : ಪ್ರಧಾನಮಂತ್ರಿ ಆವಾಸ್ ಯೋಜನೆ-ಸರ್ವರಿಗೂ ಸೂರು (HFA) ಯೋಜನೆಯಡಿ ಕರ್ನಾಟಕ ಸರ್ಕಾರದ ಕೊಳಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರುರವರಿಂದ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ವಸತಿರಹಿತರಿಗೆ (ಅಂದರೆ ಸ್ವಂತ ಮನೆ ಇಲ್ಲದೇ ಬಾಡಿಗೆ ಆಧಾರದಲ್ಲಿ ವಾಸಿಸುವವರು) ಕಾರ್ಕಳ ಪುರಸಭಾ ವ್ಯಾಪ್ತಿಯ ಪತ್ತೊಂಜಿಕಟ್ಟೆ ಪ್ರದೇಶದಲ್ಲಿ ಗುಂಪು ಮನೆಗಳನ್ನು ನಿರ್ಮಿಸುತ್ತಿದೆ. ಈ ಕಾಮಗಾರಿಯನ್ನು ಪುರಸಭಾ ಅಧ್ಯಕ್ಷರಾದ ಶ್ರೀ ಯೋಗೀಶ್ ದೇವಾಡಿಗ ಇವರು ವೀಕ್ಷಿಸಿದರು.

ಈ ಸಂದರ್ಭ ಪುರಸಭಾ ಉಪಾಧ್ಯಕ್ಷರಾದ ಪ್ರಶಾಂತ್ ಕೋಟ್ಯಾನ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ಶ್ರೀ ಪ್ರದೀಪ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧಕ್ಷರಾದ ಶ್ರೀ ಶುಭದ ರಾವ್, ಸದಸ್ಯರುಗಳಾದ ಶ್ರೀ ಹರೀಶ್ ದೇವಾಡಿಗ, ಶ್ರೀ ವಿನ್ನಿ ಬೋಲ್ಡ್ ಮೆಂಡೋನ್ಸಾ, ಶ್ರೀಮತಿ ನಳಿನಿ ವಿ ಆಚಾರ್ಯ, ಶ್ರೀಮತಿ ಪ್ರತಿಮಾ, ಶ್ರೀಮತಿ ಸುಮಾ ಕೇಶವ್, ಶ್ರೀಮತಿ ಭಾರತಿ ಅಮೀನ್, ಶ್ರೀಮತಿ ಮಮತಾ, ಶ್ರೀಮತಿ ನೀತಾ ಆಚಾರ್ಯ, ಶ್ರೀಮತಿ ಮೀನಾಕ್ಷಿ ಗಂಗಾಧರ್, ಶ್ರೀಮತಿ ರೆಹಮತ್ ಎನ್ ಶೇಖ್, ಶ್ರೀಮತಿ ಪಲ್ಲವಿ, ಶ್ರೀ ವಿವೇಕಾನಂದ ಶೆಣೈ ಹಾಗೂ ಪುರಸಭಾ ಮಖ್ಯಾಧಿಕಾರಿಗಳಾದ ಶ್ರೀಮತಿ ಲೀನಾ ಬ್ರಿಟ್ಟೋ ಹಾಗೂ ಸಹಾಯಕ ಅಭಿಯಂತರರಾದ ಶ್ರೀ ಕೃಷ್ಣ ಇವರು ಉಪಸ್ಥಿತರಿದ್ದರು. ಒಟ್ಟು 250 ಗುಂಪು ಮನೆಗಳ ಪೈಕಿ, ಈಗಾಗಲೇ 97 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಇನ್ನುಳಿದ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ನೀಟ್ ಅಕ್ರಮ: ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಅಣ್ಣಾಮಲೈ

ನೀಟ್ ಪರೀಕ್ಷೆ ಸೋರಿಕೆ ಹಾಗೂ ಕೇಂದ್ರ ಸರ್ಕಾರದ ನಿಲುವನ್ನು ಮಾಜಿ ಬಿಜೆಪಿ ನಾಯಕ ಅಣ್ಣಾಮಲೈ ತೀವ್ರವಾಗಿ ಖಂಡಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉಡುಪಿ ಯೆರ್ಮಾಲ್‌ನಲ್ಲಿ 625.83 ಗ್ರಾಂ ಗಾಂಜಾ ವಶ, ಆರೋಪಿಯ ಬಂಧನ

ಉಡುಪಿ ಜಿಲ್ಲೆಯ ಯೆರ್ಮಾಲ್‌ನಲ್ಲಿ ಪಾನ್ ಸ್ಟಾಲ್ ಮೇಲೆ ದಾಳಿ ನಡೆಸಿದ ಪೊಲೀಸರು 625.83 ಗ್ರಾಂ ಗಾಂಜಾ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮಂಗಳೂರಿನಲ್ಲಿ ಎನ್‌ಎಸ್‌ಜಿ ಅಣಕು ಕಾರ್ಯಾಚರಣೆ: ಭದ್ರತಾ ಪಡೆ ಸನ್ನದ್ಧ

ಮಂಗಳೂರಿನಲ್ಲಿ ಎನ್‌ಎಸ್‌ಜಿ ಪಡೆಗಳಿಂದ ಭಯೋತ್ಪಾದನಾ ವಿರೋಧಿ ಅಣಕು ಕಾರ್ಯಾಚರಣೆ ನಡೆಸಿ ಭದ್ರತೆ ಪರಿಶೀಲಿಸಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಹಿರಿಯಡ್ಕ ಭಜನಾ ಪರಿಷತ್ ಸಭೆ: ಧರ್ಮಸ್ಥಳ ಕಮ್ಮಟ ಹಾಗೂ ಭಜನೋತ್ಸವ ಮಾಹಿತಿ

ಹಿರಿಯಡ್ಕದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವಲಯ ಮಟ್ಟದ ಸಭೆ ಜರುಗಿತು. ಅಂಬಲಪಾಡಿ ಭಜನೋತ್ಸವ ಹಾಗೂ ಧರ್ಮಸ್ಥಳ ಕಮ್ಮಟದ ಪೂರ್ಣ ಮಾಹಿತಿ ಇಲ್ಲಿದೆ ಓದಿ.