spot_img

ಪಡಕುತ್ಯಾರು ಚಾತುರ್ಮಾಸ್ಯ ನಿರತ ಅನಂತ ಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ ಆಶೀರ್ವಾದ ಪಡೆದ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್

Date:

spot_img

ಕಟಪಾಡಿ: ಶ್ರೀ ಮದ್ ಮಹಾಸಂಸ್ಥಾನ ಸರಸ್ವತಿ ಪೀಠ ಕಟಪಾಡಿ ಪಡಕುತ್ಯಾರು ಇಲ್ಲಿ ಚಾತುರ್ಮಾಸ್ಯ ವೃತಾಚರಣೆ ನಿರತ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳನ್ನು ಶಾಸಕ ವಿ. ಸುನಿಲ್ ಕುಮಾರ್ ಶನಿವಾರ ಭೇಟಿಯಾಗಿ ಆಶಿರ್ವಾದ ಪಡೆದರು.

ಶಾಸಕರನ್ನು ಆಶಿರ್ವದಿಸಿದ ಶ್ರೀಗಳು ಶಾಸಕ. ವಿ. ಸುನಿಲ್ ಕುಮಾರ್ ಅವರ ಯೋಜನೆ , ಯೋಚನೆಗಳು ಸಾಕಾರವಾಗಲಿ , ಅಭಿವೃದ್ದಿ ಕಾರ್ಯಗಳು ಸಮೃದ್ಧಗೊಂಡು ಶಕ್ತಿ, ಯುಕ್ತಿಯ ಅನುಗ್ರಹ ಭಗವಂತ ನೀಡಲಿ ಎಂದು ಹಾರೈಸಿದರು.

ಆಶಿರ್ವಚನದಲ್ಲಿ ಶ್ರೀಗಳು ನೋವನ್ನು ಇನ್ನೊಬ್ಬರಿಗೆ ಪ್ರಯೋಗಿಸಬಾರದು. ಕೋಪ, ತಾಪವ ಬಿಟ್ಟು ಇನ್ನೊಬ್ಬರ ನಿಂದಿಸದೆ ಬಾಳಬೇಕು. ಮೊದಲು ತಮ್ಮ ತಪ್ಪನ್ನು ತಾನು ಕಂಡುಕೊಳ್ಳಬೇಕು. ತಾನು ಪರಿವರ್ತನೆ ಆಗಿ ಪರಿವರ್ತಿಸುವ ಗುಣವುಳ್ಳವರಾಗಬೇಕು ಎಂದು ನುಡಿದರು.

ಈ ಸಂದರ್ಭ ಶ್ರೀ ಕಾಳಿಕಾಂಬ ನೆಕ್ಲಾಜೆ ದೇವಸ್ಥಾನದ ಆಡಳಿತ ಮೊಕ್ತೇಸರ. ರಾಮಚಂದ್ರ ಆಚಾರ್ಯ, ಹರ್ಷವರ್ಧನ್ ನಿಟ್ಟೆ, ಧನುಶ್ ಆಚಾರ್ಯ, ರಾಜೇಶ್ ಆಚಾರ್ಯ, ಸತೀಶ್ ಆಚಾರ್ಯ, ಪ್ರದೀಪ್ ಆಚಾರ್ಯ, ಶ್ರೀಧರ ಆಚಾರ್ಯ, ಜಯಾನಂದ್ ಆಚಾರ್ಯ, ಪ್ರವೀಣ್ ಆಚಾರ್ಯ, ಸಂದೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕೋಸು ತರಕಾರಿಯಲ್ಲ, ಅದೊಂದು ಸೂಪರ್ ಫುಡ್! ದೇಹದ ರಕ್ಷಣೆಗೆ ಇದರ ಪಾತ್ರ ಅತ್ಯಗತ್ಯ ಏಕೆ?

ಸಾಮಾನ್ಯವಾಗಿ ಆಹಾರದಲ್ಲಿ ಹಿಂದುಳಿದಿರುವ ಕೋಸು, ವಾಸ್ತವವಾಗಿ ಆರೋಗ್ಯದ ಭಂಡಾರವೇ ಸರಿ

ಪರ್ಕಳ: ಅಗ್ರಹಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಾಳೆಯಿಂದ ಸಿಂಹಮಾಸದ ವಿಶೇಷ ಪೂಜೆ

ಹೆರ್ಗ ಗ್ರಾಮದ ಅಗ್ರಹಾರದಲ್ಲಿರುವ ಶ್ರೀ ಮಹಾವಿಷ್ಣುಮೂರ್ತಿ ಮುಖ್ಯಪ್ರಾಣ ದೇವಸ್ಥಾನದಲ್ಲಿ ಸಿಂಹಮಾಸದ ವಿಶೇಷ ಪೂಜೆಯಾದ ಸೋಣಾರತಿಯು ನಾಳೆಯಿಂದ ಆರಂಭಗೊಳ್ಳಲಿದೆ.

ದಿನ ವಿಶೇಷ – ರಾಷ್ಟ್ರೀಯ ಲಾಭರಹಿತ ಸಂಸ್ಥೆಗಳ ದಿನ

ಈ ದಿನದ ಮುಖ್ಯ ಗುರಿ, ಸಮಾಜಕ್ಕೆ ಸಹಾಯ ಮಾಡುವ ಅಸಂಖ್ಯಾತ ಸಂಸ್ಥೆಗಳ ಮಹತ್ವದ ಕೊಡುಗೆಗಳನ್ನು ಗುರುತಿಸುವುದು

ನಾಳೆ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಾಲಯದಲ್ಲಿ ಸಿಂಹ ಸಂಕ್ರಮಣ ಆಚರಣೆ

ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಾಲಯದಲ್ಲಿ 2025ರ ಆಗಸ್ಟ್ 17ರಂದು (ರವಿವಾರ) ಸಿಂಹ ಸಂಕ್ರಮಣ ಮಹೋತ್ಸವ ಭಕ್ತಿಭಾವದಿಂದ ಜರಗಲಿದೆ.