spot_img

ಕಾರ್ಕಳ LAMPS ಚುನಾವಣೆ ವಿವಾದ: ಸಮಬಲ ಮತ, ಆದರೆ ಏಕಪಕ್ಷೀಯ ಆಯ್ಕೆ!

Date:

spot_img

ಕಾರ್ಕಳ: ಕಾರ್ಕಳ ತಾಲೂಕು ಪರಿಶಿಷ್ಟ ವರ್ಗಗಳ ವಿವಿದ್ದೋದ್ದೇಶ ಸಹಕಾರಿ ಸಂಘ (LAMPS)ನ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಯಲ್ಲಿ ಪ್ರಬಲ ವಿವಾದ ಸೃಷ್ಟಿಯಾಗಿದೆ. ಜನವರಿ 31ರಂದು ನಡೆದ ನಿರ್ದೇಶಕರ ಚುನಾವಣೆಯ ಬಳಿಕ, ಫೆಬ್ರವರಿ 11ರಂದು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಆದರೆ, ಚುನಾವಣೆ ಪ್ರಕ್ರಿಯೆ ಬಗ್ಗೆ ಪ್ರಶ್ನೆಗಳು ಎದ್ದಿವೆ.ಈ ಚುನಾವಣೆಯಲ್ಲಿ ಹತ್ತು ಮಂದಿ ನಿರ್ದೇಶಕರು ಮತ್ತು ಮೂರು ಮಂದಿ ಅಧಿಕಾರಿಗಳಿಗೆ ಮತ ಚಲಾಯಿಸುವ ಹಕ್ಕು ಇರುತ್ತದೆ. ಒಟ್ಟು ಹದಿಮೂರು ಮತಗಳು.
ಪ್ರತಿಭಟನಾಕಾರರ ಹೇಳಿಕೆಯಂತೆ ಅಧ್ಯಕ್ಷರ ಚುನಾವಣೆಯಲ್ಲಿ ಇಬ್ಬರು ಸ್ಪರ್ಧಿಗಳು ತಲಾ 6-6 ಮತ ಪಡೆದು ಸಮಬಲ ಸಾಧಿಸಿದರೆ, ಒಂದು ಮತ ಅಸಿಂಧು ಎಂದು ಘೋಷಿಸಲಾಯಿತು. ಪ್ರಕ್ರಿಯೆಯಲ್ಲಿಯೇ ಗೊಂದಲ ಉಂಟಾಗಿದ್ದು, ಯಾವುದೇ ಪರ್ಯಾಯ ವಿಧಾನ ಅಳವಡಿಸದೆ, ಚುನಾವಣಾಧಿಕಾರಿಗಳು ಏಕಪಕ್ಷೀಯವಾಗಿ ರಾಘವ ನಾಯ್ಕ್ ಅವರನ್ನು ಆಯ್ಕೆ ಮಾಡಿದ್ದಾರೆ.
ಇದನ್ನು ಖಂಡಿಸಿ ನಾವು ಲಿಖಿತ ರೂಪದಲ್ಲಿ ದೂರು ನೀಡಿದರೂ ಅದನ್ನು ಸ್ವೀಕರಿಸಲಿಲ್ಲ. ಚುನಾವಣೆಯ ವೇಳೆಯಲ್ಲಿ ಸಿ ಸಿ ಕ್ಯಾಮರಾ ಪೊಲೀಸ್ ವ್ಯವಸ್ಥೆ ಯಾವುದು ಇರಲಿಲ್ಲ. ಬ್ಯಾಂಕ್ ನ CEO ಅಸಿಂಧು ಎಂದು ಘೋಷಿಸಿದರು. ಚುನಾವಣಾಧಿಕಾರಿಯಾದ ರೋಹಿತ್ ರವರಲ್ಲಿ ನಾವು ಪ್ರಶ್ನಿಸಿದ್ದಕ್ಕೆ ಅವರು ಚುನಾವಣಾಧಿಕಾರಿ ನಾನೋ ಅಥವಾ ನೀವೋ ಎಂಬ ಬೇಜವಾಬ್ಧಾರಿತನದ ಉತ್ತರವನ್ನು ನೀಡಿದರು ಮತ್ತು ನಿಮ್ಮ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದೀರಿ ಎಂದು ದೂರು ದಾಖಲಿಸಲಾಗುವುದು ಎಂದು ಬೆದರಿಸಿದ್ದಾರೆ.
ಇಲ್ಲಿ ಚುನಾವಣೆಗೆ ಅವಕಾಶವಿರುವುದು ಪರಿಶಿಷ್ಟ ವರ್ಗಗಳಾದ ಮಲೆಕುಡಿಯ ,ಕೊರಗ,ಮರಾಠಿ ಸಮುದಾಯದವರಿಗೆ. ಈ ರೀತಿ ಅವರ ಮೇಲೆ ದಬ್ಬಾಳಿಕೆ ನಡೆಸಿ ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನವನ್ನು ಚುನಾವಣಾಧಿಕಾರಿ ಮಾಡಿರುತ್ತಾರೆ. ನಾವು ಇದರ ಬಗ್ಗೆ ಎ . ಆರ್ ಮತ್ತು ಡಿ . ಆರ್ ರವರಿಗೆ ದೂರು ನೀಡಿದರೂ ಈ ವರೆಗೆ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ.
ಇಂದು ಮೊದಲ ಸಾಮಾನ್ಯ ಸಭೆಯಾಗಿದ್ದು ನಾವು ನಿರ್ದೇಶಕ ಸದಸ್ಯರುಗಳು ಸಾಮಾನ್ಯ ಸಭೆಗೆ ಭಾಗವಹಿಸದೆ ಪ್ರತಿಭಟನೆ ನಡೆಸುತ್ತಿದ್ದೇವೆ. ನಮಗೆ ಸರಿಯಾದ ನ್ಯಾಯ ನೀಡಬೇಕು. ಚುನಾವಣೆಯನ್ನು ನಾಣ್ಯ ಚಿಮ್ಮಿಸುವುದರ ಮೂಲಕ ಅಥವಾ ಚೀಟಿ ಎತ್ತುವುದರ ಮೂಲಕ ನಡೆಸಲಿ. ಅದನ್ನು ಹೊರತು ಪಡಿಸಿ ಏಕ ಪಕ್ಷೀಯವಾಗಿ ಆಯ್ಕೆ ಮಾಡಿರುವುದು ನ್ಯಾಯ ಸಮ್ಮತವಲ್ಲ.ಡಿ. ಆರ್ ರವರು ಮದ್ಯ ಪ್ರವೇಶಿಸಿ ಮರು ಚುನಾವಣೆ ನಡೆಸಬೇಕಾಗಿ ನಾವು ಅವರಲ್ಲಿ ವಿನಂತಿಸುತ್ತಿದ್ದೇವೆ.ಇಲ್ಲವಾದಲ್ಲಿ ನ್ಯಾಯ ಸಿಗುವವರೆಗೂ ನಮ್ಮ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಹೋರಾಟಗಾರರು ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಜೋಳದ ರೊಟ್ಟಿ ಸೇವಿಸಿ, ಈ 5 ಆರೋಗ್ಯ ಪ್ರಯೋಜನಗಳನ್ನು ಪಡೆಯಿರಿ!

ಹಳ್ಳಿಗಾಡಿನ ಜೋಳದ ರೊಟ್ಟಿಗಳು ನಿಮ್ಮ ಆರೋಗ್ಯಕ್ಕೆ ಉತ್ತಮ ಆಯ್ಕೆಯಾಗಿರಬಹುದು. ಒಂದೇ ರೀತಿಯ ಆಹಾರ ಸೇವನೆಯಿಂದ ಬೇಸರಗೊಂಡಿದ್ದರೆ, ಜೋಳವನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೂಲಕ ಆರೋಗ್ಯಕರ ಬದಲಾವಣೆಯನ್ನು ಮಾಡಿಕೊಳ್ಳಿ.

ಶಾಲಾ ಮಕ್ಕಳಿಗೆ ‘ಫ್ಲೇವರ್ಡ್’ ನಂದಿನಿ ಹಾಲು: ಬಮೂಲ್‌ನಿಂದ ಸಿಹಿಸುದ್ದಿ!

ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿರುವ ಹಾಲು ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಲು ಮತ್ತು ಪೌಷ್ಟಿಕಾಂಶ ಹೆಚ್ಚಿಸಲು, ಬಮೂಲ್ ನೂತನ ನಿರ್ದೇಶಕ ಡಿ.ಕೆ. ಸುರೇಶ್ ಅವರು ಶಾಲಾ ಮಕ್ಕಳಿಗೆ 'ಫ್ಲೇವರ್ಡ್' ನಂದಿನಿ ಹಾಲು ಪೂರೈಸುವ ಮಹತ್ವದ ಪ್ರಸ್ತಾಪವನ್ನು ಶಾಲಾ ಶಿಕ್ಷಣ ಇಲಾಖೆಯ ಮುಂದಿಟ್ಟಿದ್ದಾರೆ.

ಬಡ ವರ್ತಕರನ್ನು ಜಿ.ಎಸ್.ಟಿ ಸಂಕಟದಿಂದ ಪಾರು ಮಾಡಿದ ರಾಜ್ಯ ಕಾಂಗ್ರೆಸ್ ಸರಕಾರ

ಅವೈಜ್ಙಾನಿಕ ನೋಟಿಸ್ ಜಾರಿಗೊಳಿಸಿದ ಕೇಂದ್ರ ಸರ್ಕಾರದ ತೆರಿಗೆ ಇಲಾಖೆಯ ಕ್ರಮದಿಂದ ಆತಂಕ ಹಾಗೂ ಗೊಂದಲಕ್ಕೊಳಗಾಗಿದ್ದ ರಾಜ್ಯದ ವರ್ತಕ ವಲಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ವಿಶೇಷ ಕಾಳಜಿಯಿಂದ ರಕ್ಷಿಸಿದ್ದಾರೆಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ಹರ್ಷ ವ್ಯಕ್ತಪಡಿಸಿದ್ದಾರೆ.

ದಶಕಗಳಿಂದ ಕಾಂಗ್ರೆಸ್ ಆಡಳಿತದಲ್ಲಿರುವ ಹಾರಾಡಿ ಗ್ರಾ.ಪಂ. ನ ಮಾನ ಹರಾಜು ಹಾಕಿದ ಕಾಂಗ್ರೆಸ್ ಮುಖಂಡ ಪ್ರಸಾದ್ ಕಾಂಚನ್ : ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಪ್ರದೀಪ್ ಕುಂದರ್ ಹೊನ್ನಾಳ

ಕಾಂಗ್ರೆಸ್ ಮುಖಂಡ ಪ್ರಸಾದ್ ಕಾಂಚನ್ ರವರು ಕೀಳು ಮಟ್ಟದ ಹೇಳಿಕೆಯನ್ನು ಮುಂದುವರಿಸಿದಲ್ಲಿ ಜಿಲ್ಲಾ ಯುವ ಮೋರ್ಚಾ ತಕ್ಕ ಉತ್ತರ ನೀಡಲಿದೆ ಎಂದು ಪ್ರದೀಪ್ ಕುಂದರ್ ಹೊನ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.