
ಕಾರ್ಕಳ: 2024-25ನೇ ಶೈಕ್ಷಣಿಕ ಸಾಲದ ಎಸ್ಸೆಸ್ಸೆಲ್ಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ಕಾರ್ಕಳದ ಜ್ಞಾನಸುಧಾ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಸ್ವಸ್ತಿ ಕಾಮತ್ 625ಕ್ಕೆ 625 ಅಂಕಗಳಿಸಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ರಾಜ್ಯವ್ಯಾಪಿಯಾಗಿ 22 ವಿದ್ಯಾರ್ಥಿಗಳು ಪರಿಪೂರ್ಣ ಅಂಕ ಗಳಿಸಿರುವ ಈ ಸಾಧನೆಯ ಪಟ್ಟಿಯಲ್ಲಿ, ಪಳ್ಳಿ ಗ್ರಾಮದ ಜನಾರ್ದನ್ ಕಾಮತ್ ಮತ್ತು ಶಾಂತಿ ಕಾಮತ್ ದಂಪತಿಗಳ ಪುತ್ರಿ ಸ್ವಸ್ತಿಯೂ ಸೇರಿದ್ದಾಳೆ. ವಿಶೇಷವೆಂದರೆ, ಸ್ವಸ್ತಿಯ ತಂದೆ ಜನಾರ್ದನ್ ಕಾಮತ್ ಅವರ ಹುಟ್ಟುಹಬ್ಬದ ದಿನವೇ ಫಲಿತಾಂಶ ಬಂದಿದ್ದು ಮಗಳ ಶೈಕ್ಷಣಿಕ ಸಾಧನೆಯು ಉಡುಗೊರೆಯಾಗಿ ಪರಿಣಮಿಸಿ ಇನ್ನಷ್ಟು ಸಂತಸ ತಂದಿದೆ.
ಸ್ವಸ್ತಿಯ ಸಾಧನೆಯು ಉಡುಪಿ ಜಿಲ್ಲೆಯ ಗೌರವ ಹೆಚ್ಚಿಸಿದ್ದು, ಜಿಲ್ಲೆಯ ಶೈಕ್ಷಣಿಕ ಮಟ್ಟವನ್ನು ಮೆರೆಯುವಂತೆ ಮಾಡಿದೆ. ಸ್ಥಳೀಯ ಮಟ್ಟದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.