spot_img

ಕಾರ್ಕಳ ಜ್ಞಾನಸುಧಾ : ವಾಣಿಜ್ಯ ವಿಭಾಗಕ್ಕೆ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

Date:

ಗಣಿತನಗರ : ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್(ರಿ.) ಇದರ ಆಡಳಿತಕ್ಕೆ ಒಳಪಟ್ಟ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ಸಮಾಜಮುಖಿ ಕಾರ್ಯಕ್ರಮದ ಒಂದು ಭಾಗವಾಗಿ ಕಳೆದ ವರ್ಷದಿಂದ ವಾಣಿಜ್ಯ ವಿಭಾಗದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. 2025-26ನೇ ಶೈಕ್ಷಣಿಕ ಸಾಲಿನ ವಾಣಿಜ್ಯ ವಿಭಾಗಕ್ಕೆ ದಾಖಲಾತಿ ಬಯಸುವ, ಹತ್ತನೇ ತರಗತಿಯಲ್ಲಿ ಶೇ 95ಕ್ಕಿಂತ ಅಧಿಕ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಕಾಲೇಜು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಪೂರ್ಣ ಉಚಿತ ಶಿಕ್ಷಣ, ಶೇ90ಕ್ಕಿಂತ ಅಧಿಕ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ, ಶೇ 85ಕ್ಕಿಂತ ಅಧಿಕ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಕಾಲೇಜು ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತ ವಿದ್ಯಾರ್ಥಿಗಳು ಮತ್ತು ಪೋಷಕರು ಸಂಸ್ಥೆಯ ಕಛೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆದು ಕೊಳ್ಳಬಹುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಮಾಹಿತಿಗಾಗಿ : 8147454906

2024-25ರ ಫಲಿತಾಂಶದಲ್ಲಿ ರಕ್ಷಾ ರಾಮ್‌ಚಂದ್ರ ನಾಯಕ್ 597 ಅಂಕಗಳೊಂದಿಗೆ ರಾಜ್ಯಕ್ಕೆ 3ನೇ ಸ್ಥಾನಿಯಾಗಿ ಹಾಗೂ ಉಡುಪಿ ಜಿಲ್ಲೆಗೆ ದ್ವಿತೀಯ ಸ್ಥಾನಿಯಾಗಿ ಸಹನಾ ನಾಯಕ್‌ ಹಾಗೂ ತನ್ವಿ ರಾವ್‌ 594 ಅಂಕ ಗಳಿಸಿ ರಾಜ್ಯಕ್ಕೆ 6ನೇ ಬ್ಯಾಂಕ್ ಹಾಗೂ ಜಿಲ್ಲೆಗೆ 3ನೇ ಸ್ಥಾನಿಯಾಗಿ ಹೊರಹೊಮ್ಮಿದ್ದು, ವಿದ್ಯಾರ್ಥಿಗಳಾದ ವಿ. ಯಶಸ್ವಿ ನಾಯ್ಕ (591 ಅಂಕ) ಹಾಗೂ ಪ್ರಜ್ಞಾ ಹೆಗ್ಡೆ (591)ಗಳಿಸಿದ್ದಾರೆ. ಈ ಬಾರಿ 2025ರ ಜನವರಿಯಲ್ಲಿ ನಡೆದ ಸಿ.ಎಸ್‌.ಇ.ಇ.ಟಿ ಪರೀಕ್ಷೆ ಬರೆದ 32 ವಿದ್ಯಾರ್ಥಿಗಳಲ್ಲಿ 28 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಅತ್ಯುತ್ತಮ ಫಲಿತಾಂಶ ದಾಖಲಿಸಿರುತ್ತಾರೆ.

ಪಠ್ಯೇತರ ಚಟುವಟಿಕೆಯಲ್ಲಿ ಎನ್.ಸಿ.ಸಿ ಮತ್ತು ಎನ್.ಎಸ್.ಎಸ್ ಕಾರ್ಯಚರಿಸುತ್ತಿದ್ದು, ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ಬೆಳೆಸಿ ಈಗಾಗಲೇ ರಿತಿಕಾ ಕಾಮತ್‌, ವೃದ್ಧಿ ಶೆಟ್ಟಿ ಮತ್ತು ಸಮಿಯಾ ಹೆಗ್ಡೆ ರಾಜ್ಯಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಬಾಸ್ಕೆಟ್ ಬಾಲ್, ತ್ರೋಬಾಲ್, ವಾಲಿಬಾಲ್, ಶಟಲ್ ಬ್ಯಾಡ್ಮಿಂಟನ್, ಫೂಟ್ಬಾಲ್ ಮತ್ತು ಅಥ್ಲೆಟಿಕ್ಸ್‌ ತರಬೇತಿ ಪಡೆದು ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಭಾಗವಹಿಸಿರುತ್ತಾರೆ. ಮಕ್ಕಳಲ್ಲಿ ವ್ಯವಹಾರ ಜ್ಞಾನವನ್ನು ಹೆಚ್ಚಿಸಲು ವ್ಯಾಪಾರ ಮೇಳಗಳನ್ನು ಹಾಗೂ ಕೈಗಾರಿಕಾ ಭೇಟಿಯನ್ನು ಆಯೋಜಿಸಲಾಗುತ್ತಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ನೀರೆ ಜಡ್ಡಿನಂಗಡಿ ತಿರುವಿನಲ್ಲಿ ಭೀಕರ ಅಪಘಾತ: ಕಾರು ಚಾಲಕನಿಗೆ ಗಂಭೀರ ಗಾಯ, ಬಸ್ ಮರಕ್ಕೆ ಡಿಕ್ಕಿ!

ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಡ್ಡಿನಂಗಡಿ ತಿರುವಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರು ಹಾಗೂ ಸರಕಾರಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಈ ದುರ್ಘಟನೆಯು ಸಂಜೆ ಹೊತ್ತಿನಲ್ಲಿ ನಡೆದಿದ್ದು, ಕಾರು ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ.

ಡಾ| ವಿಠ್ಠಲ್ ಅಡ್ಯಂತಾಯರ ಧರ್ಮಪತ್ನಿ ಶ್ರೀಮತಿ ಶಾಂತ ಅಡ್ಯಂತಾಯರ ವಿಧಿವಶ: ನಾಳೆ ಅಂತ್ಯಕ್ರಿಯೆ

ಡಾ| ವಿಠ್ಠಲ್ ಅಡ್ಯಂತಾಯರ ಧರ್ಮಪತ್ನಿ ಶ್ರೀಮತಿ ಬೇಬಿ ಅಡ್ಯಂತಾಯರು (ಶಾಂತ ಅಡ್ಯಂತಾಯ) ಇಂದು ದಿನಾಂಕ 03/05/2025, ಶನಿವಾರದಂದು ಕೊಂಡಾಡಿ ಗುತ್ತಿನ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ.

ಹಿರಿಯಡಕ ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ ನ ಮತ್ತೊಂದು ಶ್ರೇಣಿಗತ ಸಾಧನೆ: ಸತತ 23ನೇ ಬಾರಿಗೆ ಶೇ.100 ಫಲಿತಾಂಶ!

ಇಲ್ಲಿನ ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ (ICSE) 10 ನೇ ತರಗತಿ ಪರೀಕ್ಷೆಯಲ್ಲಿ ಸತತವಾಗಿ ಇಪ್ಪತ್ತ ಮೂರನೇ ಬಾರಿಗೆ ಶೇಕಡಾ 100 ಫಲಿತಾಂಶ ದಾಖಲಿಸಿದೆ.

ದಾಸವಾಳದ ಹೂವಿನಲ್ಲಿ ಅಸಂಖ್ಯ ಆರೋಗ್ಯ ಮೌಲ್ಯಗಳು: ಮಧುಮೇಹದಿಂದ ಕ್ಯಾನ್ಸರ್‌ವರೆಗೆ ಪರಿಹಾರ!

ಪ್ರಕೃತಿಯ ಅತ್ಯದ್ಭುತ ಕೊಡುಗೆಗಳಲ್ಲಿ ಒಂದಾದ ದಾಸವಾಳ ಹೂವು ಕೇವಲ ಸೌಂದರ್ಯವನ್ನಷ್ಟೇ ನೀಡುವುದಲ್ಲದೆ, ಅದರಲ್ಲಿರುವ ಔಷಧೀಯ ಗುಣಲಕ್ಷಣಗಳಿಂದ ಅನೇಕ ಆರೋಗ್ಯ ಸಮಸ್ಯೆಗಳ ನಿವಾರಣೆಯಲ್ಲೂ ಮಹತ್ತರದ ಪಾತ್ರ ವಹಿಸುತ್ತದೆ.