
ಕಾರ್ಕಳ: ನಮ್ಮ ಪೆರ್ವಾಜೆಯ ಬಿಲ್ಲವ ಸಭಾಂಗಣದಲ್ಲಿ ಎಪ್ರಿಲ್ 24 ರಿಂದ 26 ರವರೆಗೆ ಮೂರು ದಿನಗಳ ಕಾಲ ಸಾರ್ವಜನಿಕರಿಗಾಗಿ ‘ಬೃಹತ್ ಹಲಸು ಮೇಳ’ ಆಯೋಜಿಸಲಾಗಿದೆ. ಬಿಲ್ಲವ ಸಮಾಜ ಸೇವಾ ಸಂಘ, ರೋಟರಿ ಕ್ಲಬ್, ಯುವವಾಹಿನಿ ಕಾರ್ಕಳ ಘಟಕ, ಎನ್.ಪಿ ಗ್ರೂಪ್ಸ್ ಹಾಗೂ ವಂಶಿ ಮತ್ತು ಬೆನಕ ಇವೆಂಟ್ಸ್ ಇವರ ಜಂಟಿ ಆಶ್ರಯದಲ್ಲಿ ಈ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ.

ಈ ಮೇಳದ ಅಂಗವಾಗಿ ಕೇವಲ ಹಲಸಿನ ಪ್ರದರ್ಶನ ಮಾತ್ರವಲ್ಲದೆ, ರಾಜ್ಯ ಮಟ್ಟದ ಗಾಯನ ಸ್ಪರ್ಧೆ, ಅಡುಗೆ ಸ್ಪರ್ಧೆ ಮತ್ತು ಭಜನಾ ಸ್ಪರ್ಧೆಗಳಂತಹ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಲೆ ಮತ್ತು ಸಂಸ್ಕೃತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಮೇಳಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಕೋರಿದ್ದಾರೆ.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳು ಮತ್ತು ಸ್ಪರ್ಧೆಗಳ ವಿವರ:
- ವಾಯ್ಸ್ ಆಫ್ ಕಾರ್ಕಳ – 2026: ಎಪ್ರಿಲ್ 24 ರಂದು ಮಧ್ಯಾಹ್ನ 1:30 ಕ್ಕೆ ರಾಜ್ಯ ಮಟ್ಟದ ಕರೋಕೆ ಸಂಗೀತ ಗಾಯನ ಸ್ಪರ್ಧೆ ನಡೆಯಲಿದೆ.
- ಅಡುಗೆ ಸ್ಪರ್ಧೆ: ಎಪ್ರಿಲ್ 25 ರಂದು ಬೆಳಿಗ್ಗೆ 9:30 ಕ್ಕೆ ಮಹಿಳೆಯರಿಗಾಗಿ ಮನೆಯಲ್ಲೇ ಸಿದ್ಧಪಡಿಸಿದ ಆಹಾರಗಳ ಸ್ಪರ್ಧೆ ಮತ್ತು ವಿದ್ಯಾರ್ಥಿಗಳಿಗಾಗಿ ‘ಬೆಂಕಿ ಇಲ್ಲದ ಅಡುಗೆ’ ಸ್ಪರ್ಧೆ ಇರಲಿದೆ.
- ಭಜನಾ ಸ್ಪರ್ಧೆ: ಎಪ್ರಿಲ್ 26 ರಂದು ಬೆಳಿಗ್ಗೆ 9:30 ರಿಂದ 10 ರಿಂದ 19 ವರ್ಷದೊಳಗಿನ ಮಕ್ಕಳಿಗಾಗಿ ‘ಭಜನಾ ಸಪ್ತಸ್ವರ’ ಸ್ಪರ್ಧೆ ಆಯೋಜಿಸಲಾಗಿದೆ.
- ಬಹುಮಾನಗಳು: ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೊದಲ ಮೂರು ಸ್ಥಾನಗಳಿಗೆ ಕ್ರಮವಾಗಿ 7000, 4000 ಮತ್ತು 2000 ರೂಪಾಯಿ ನಗದು ಸಹಿತ ಪ್ರಶಸ್ತಿ ಫಲಕ ನೀಡಲಾಗುವುದು.

ಗಾಯನ ಸ್ಪರ್ಧೆಯಲ್ಲಿ ಭಾಗವಹಿಸುವವರು ಏಪ್ರಿಲ್ 18 ರ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಮೊದಲ 50 ಸ್ಪರ್ಧಾಳುಗಳಿಗೆ ಮಾತ್ರ ಅವಕಾಶವಿರುತ್ತದೆ. ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ 1 ಗಂಟೆಯ ಕಾಲಾವಕಾಶವಿದ್ದು, ಒಂದು ತಂಡದಲ್ಲಿ ಗರಿಷ್ಠ 3 ಜನ ಇರಬಹುದು. ಭಜನಾ ಸ್ಪರ್ಧೆಯಲ್ಲಿ ಕೇವಲ ದಾಸ ಕೀರ್ತನೆಗಳಿಗೆ ಮಾತ್ರ ಅವಕಾಶವಿದ್ದು, ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ.













