
ಕಾರ್ಕಳ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಸ್ ಸ್ಟ್ಯಾಂಡ್ (ರಿ) ಕಾರ್ಕಳ ಇದರ ಆಶ್ರಯದಲ್ಲಿ ಆಚರಿಸಲ್ಪಡುವ 18ನೇ ವರ್ಷದ ಗಣೇಶೋತ್ಸವದ ಪೂರ್ವಭಾವಿ ಸಭೆಯು ಇಂದು ರಾಧಾಕೃಷ್ಣ ಸಭಾಭವನದಲ್ಲಿ ಸಮಿತಿಯ ಸ್ಥಾಪಕಾದ್ಯಕ್ಷರಾದ ಶುಭದರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಹಿರಿಯ ಜ್ಯೋತಿಷಿ ವೇದಮೂರ್ತಿ ಅತ್ತೂರು ವಾದಿರಾಜ ಆಚಾರ್ಯ, ಗೌರವ ಅದ್ಯಕ್ಷರಾದ ಜಗದೀಶ್ ಮಲ್ಯ, ಗೌರವ ಸಲಹೆಗಾರ ಆದಿರಾಜ ಅಜ್ರಿ ಸಂದರ್ಭೋಚಿತ ಮಾತುಗಳನ್ನಾಡಿ ಉತ್ಸವದ ಭಕ್ತಿಪೂರ್ಣ ಮತ್ತು ಶಿಸ್ತುಪೂರ್ಣ ಆಚರಣೆಗೆ ಮಾರ್ಗದರ್ಶನ ಮಾಡಿದರು.
18ನೇ ವರ್ಷದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಸುರೇಶ್ ದೇವಾಡಿಗ ಮರು ಆಯ್ಕೆಯಾದರು ಮತ್ತು ವಿವಿಧ ಪಧಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಕಾರ್ಯದರ್ಶಿ ಇಕ್ಬಾಲ್ ಅಹಮ್ಮದ್ ಸ್ವಾಗತಿಸಿ ಉಪಾದ್ಯಕ್ಷ ರಾಜರಾಮ್ ಕಾಮತ್ ಧನ್ಯವಾದವಿತ್ತರು.