
ಕಾರ್ಕಳ: ಟೀಮ್ ಕುಂದಾಪುರ ಪ್ರಸ್ತುತಪಡಿಸುವ ‘ಕಾರ್ಕಳ ಹಲಸು ಮೇಳ ಮತ್ತು ಹಣ್ಣು ಮೇಳ’ ಆಗಸ್ಟ್ 1, 2 ಮತ್ತು 3, 2025 ರಂದು ನಡೆಯಲಿದೆ. ಭಗವಾನ್ ಶ್ರೀ ಬಾಹುಬಲಿ ಮಂದಿರದ ಆವರಣದಲ್ಲಿ ಆಯೋಜಿಸಲಾಗಿರುವ ಈ ಮೇಳವು ಹಣ್ಣು ಪ್ರಿಯರಿಗೆ ಮತ್ತು ಸ್ಥಳೀಯರಿಗೆ ಸುವರ್ಣಾವಕಾಶ ಒದಗಿಸಲಿದೆ.

ಮೇಳದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುವ ನೂರಾರು ಮಳಿಗೆಗಳು ಇರಲಿದ್ದು, ಇಲ್ಲಿ ರುಚಿಕರವಾದ ಮಾವು, ಹಲಸಿನ ವಿವಿಧ ಉತ್ಪನ್ನಗಳು ಹಾಗೂ ಶುಚಿ-ರುಚಿಯಾದ ಹಣ್ಣಿನ ಖಾದ್ಯಗಳು ಲಭ್ಯವಿರಲಿವೆ. ವಿಶೇಷವಾಗಿ ಹಲಸಿನ ಜಿಲೇಬಿ, ಹಲಸಿನ ಬೆಣ್ಣೆ ದೋಸೆ, ಮತ್ತು ಹಲಸಿನ ಹೋಳಿಗೆ ಈ ಮೇಳದ ಪ್ರಮುಖ ಆಕರ್ಷಣೆಗಳಾಗಿವೆ.
ಹಣ್ಣುಗಳ ವೈವಿಧ್ಯಮಯ ಲೋಕದಲ್ಲಿ ಮುಳುಗಲು ಮತ್ತು ವಿಶೇಷ ಖಾದ್ಯಗಳನ್ನು ಸವಿಯಲು ನಿಮಗೆಲ್ಲರಿಗೂ ಆದರದ ಸ್ವಾಗತ. ಹೆಚ್ಚಿನ ಮಾಹಿತಿಗಾಗಿ 8970826441 ಸಂಖ್ಯೆಯನ್ನು ಸಂಪರ್ಕಿಸಬಹುದು.