
ಕಾರ್ಕಳದ ಆನೆಕೆರೆ ಬಳಿಯ ಚೇತನ ವಿಶೇಷ ಶಾಲೆಯ ಎದುರು ಇರುವ ಕುಶನ್ ಶಾಪ್‌ಗೆ ಗುರುವಾರ ಸಂಜೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಹೊತ್ತಿಕೊಂಡ ಬೆಂಕಿ ಕ್ಷಣಾರ್ಧದಲ್ಲೇ ವ್ಯಾಪಿಸಿ ಅಂಗಡಿಯೊಳಗಿನ ಸಾಮಗ್ರಿಗಳಿಗೆ ಹಾನಿ ಉಂಟಾಗಿದೆ.
ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸುತ್ತಿದ್ದಾರೆ.
ಅಗ್ನಿ ನಿಯಂತ್ರಣಕ್ಕೆ ಅಗ್ನಿಶಾಮಕ ದಳ ಹಾಗೂ ಸ್ಥಳಿಯರ ಸಮಯೋಚಿತ ಕಾರ್ಯಚರಣೆಯಿಂದ ಮತ್ತಷ್ಟು ಹಾನಿ ತಪ್ಪಿಸಲು ಸಾಧ್ಯವಾಯಿತು. ಬೆಂಕಿಯ ಪ್ರಮಾದದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿದೆ.