
ಕಾರ್ಕಳದ ಪರ್ಪಲೆ ಗುಡ್ಡದಲ್ಲಿ ಬೆಂಕಿಯ ಜ್ವಾಲೆಗಳು ಹಬ್ಬಿದ್ದು ಪರಿಸರದಲ್ಲಿ ಆತಂಕ ಉಂಟಾಗಿದೆ. ಮುಳಿ ಹುಲ್ಲಿಗೆ ತಗುಲಿದ ಬೆಂಕಿ ಇಲ್ಲಿನ ಸರಕಾರಿ ಬೋರ್ ವೆಲ್ ಬಳಿ ವ್ಯಾಪಿಸಿದೆ.
ಗಾಳಿಯ ವೇಗ ಹೆಚ್ಚಾಗಿರುವುದರಿಂದ ಬೆಂಕಿ ಇನ್ನಷ್ಟು ವೇಗವಾಗಿ ಹಬ್ಬುತ್ತಿದೆ. ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಪರಿಸರಕ್ಕೆ ಹೆಚ್ಚಿನ ಹಾನಿ ಸಂಭವಿಸುವ ಮುನ್ನವೇ ಬೆಂಕಿ ನಿಯಂತ್ರಣಕ್ಕೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ.

