spot_img

ಕಾರ್ಕಳ: 13 ಕೋಟಿ ರೂ. ಅನುದಾನದಲ್ಲಿ ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿ

Date:

spot_img

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ಸಂಪರ್ಕ ರಸ್ತೆಗಳು ಮತ್ತು ಸೇತುವೆಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರವು 13 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.

ಅನುದಾನದಲ್ಲಿ ಅಭಿವೃದ್ಧಿಗೊಳ್ಳುವ ಪ್ರಮುಖ ಕಾಮಗಾರಿಗಳು:
ಮುದ್ರಾಡಿ-ಹೆಬ್ರಿ-ಬ್ರಹ್ಮಾವರ ರಾಜ್ಯ ಹೆದ್ದಾರಿ: ಮುದ್ರಾಡಿ ಪೇಟೆಯಿಂದ ಜರುವತ್ತು ಸೇತುವೆವರೆಗೆ ರಸ್ತೆ ನವೀಕರಣಕ್ಕೆ ₹120 ಲಕ್ಷ
ಸುಬ್ರಹ್ಮಣ್ಯ-ಉಡುಪಿ ರಾಜ್ಯ ಹೆದ್ದಾರಿ (SH-37): ಚೆಂಡೆ ಬಸದಿ ಕ್ರಾಸ್‌ನಿಂದ ಬಜಗೋಳಿವರೆಗೆ ರಸ್ತೆ ನವೀಕರಣಕ್ಕೆ ₹150 ಲಕ್ಷ
ಕಾಂಜರಕಟ್ಟೆ-ಇನ್ನಾ-ಸಾಂತೂರುಕೊಪ್ಲ-ಮುಂಡ್ಕೂರು ರಸ್ತೆ: ₹100 ಲಕ್ಷ
ಬೆಳುವಾಯಿ-ಕಾಂತಾವರ-ಮಂಜರಪಲ್ಕೆ ರಸ್ತೆ: ವಂಜಾರಕಟ್ಟೆಯಿಂದ ಬೋಪಾಡಿ ಸೇತುವೆವರೆಗೆ ರಸ್ತೆ ಅಭಿವೃದ್ಧಿಗೆ ₹180 ಲಕ್ಷ
ಅಜೆಕಾರು-ಹರ್ಮುಂಡೆ-ಜಾರ್ಕಳ-ಕೆರ್ವಾಶೆ ರಸ್ತೆ: ₹250 ಲಕ್ಷ
ದುರ್ಗಾ-ಮುಂಡ್ಲಿ-ಶಿರ್ಲಾಲು ರಸ್ತೆ: ₹250 ಲಕ್ಷ
ಮುಡಾರು ಸೇತುವೆ: ಶಿಥಿಲಗೊಂಡಿರುವ ಹಳೆಯ ಸೇತುವೆಯ ಮರುನಿರ್ಮಾಣಕ್ಕೆ ₹100 ಲಕ್ಷ
ಬೆಳುವಾಯಿ-ಕಾಂತಾವರ-ಮಂಜರಪಲ್ಕೆ (ಬರಬೈಲು) ಸೇತುವೆ: ಮರುನಿರ್ಮಾಣಕ್ಕೆ ₹150 ಲಕ್ಷ

ಶಾಸಕ ವಿ. ಸುನಿಲ್ ಕುಮಾರ್ ಅವರು ಕಾರ್ಕಳ ಕ್ಷೇತ್ರದ ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಅನುದಾನದಿಂದ ಸ್ಥಳೀಯರ ಸಂಚಾರ ಸುಗಮವಾಗುವ ಜೊತೆಗೆ ಪ್ರಮುಖ ಸಂಪರ್ಕ ಮಾರ್ಗಗಳು ಸುಧಾರಣೆಯಾಗಲಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹೊಸನಗರ: ಚಕ್ರಾ ಜಲಪಾತಕ್ಕೆ ಅಕ್ರಮ ಪ್ರವೇಶ, ಪ್ರವಾಸಿಗರಿಗೆ ಕಾದಿದೆ ಗಂಡಾಂತರ!

ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿರುವ ಚಕ್ರಾ ಜಲಾಶಯದ ಸಮೀಪವಿರುವ ಅಪೂರ್ವ ಚಕ್ರಾ ಜಲಪಾತವೂ ಇಂತಹ ರಮಣೀಯ ಆದರೆ ಅಪಾಯಕಾರಿ ತಾಣಗಳಲ್ಲಿ ಒಂದು.

ಮಂಗಳೂರಲ್ಲಿ ಹೆಬ್ಬಾವು ಮಾರಾಟ ಜಾಲ ಭೇದಿಸಿದ ಅರಣ್ಯ ಇಲಾಖೆ: 4 ಆರೋಪಿಗಳ ಬಂಧನ

ಖಚಿತ ಮಾಹಿತಿ ಆಧರಿಸಿ ಮಂಗಳೂರಿನಲ್ಲಿ ಅರಣ್ಯಾಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಹೆಬ್ಬಾವು ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

₹200 ಕೋಟಿ ವಂಚನೆ: ‘ಮದ್ಯದ ದೊರೆ’ ರೋಹನ್ ಸಲ್ಡಾನಾ ಅಂದರ್!

ಕೋಟ್ಯಂತರ ರೂಪಾಯಿ ಸಾಲದ ಆಮಿಷವೊಡ್ಡಿ ದೇಶಾದ್ಯಂತದ ಉದ್ಯಮಿಗಳಿಗೆ ಸುಮಾರು ₹200 ಕೋಟಿಗೂ ಅಧಿಕ ಹಣ ವಂಚಿಸಿದ್ದ ಕುಖ್ಯಾತ ವಂಚಕ ರೋಹನ್ ಸಲ್ಡಾನಾನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಅಮರನಾಥ ಯಾತ್ರೆಗೆ ಅಡ್ಡಿಯಾದ ಭೂಕುಸಿತ: ಓರ್ವ ಸಾವು, ಮೂವರಿಗೆ ಗಾಯ, ಯಾತ್ರೆ ತಾತ್ಕಾಲಿಕ ಸ್ಥಗಿತ

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯು ಪವಿತ್ರ ಅಮರನಾಥ ಯಾತ್ರೆಯ ಮಾರ್ಗದಲ್ಲಿ ಭೂಕುಸಿತಕ್ಕೆ ಕಾರಣವಾಗಿದ್ದು, ದುರದೃಷ್ಟವಶಾತ್ ಓರ್ವ ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದಾರೆ.